ಅಭಿಮಾನಿಗಳಲ್ಲಿ ವಿಜಯಲಕ್ಷ್ಮಿ ದರ್ಶನ್ ಈ ರೀತಿ ಮನವಿ ಮಾಡಿದ್ದೇಕೆ …?

in ಮನರಂಜನೆ 198 views

ದೇಶದ ಪರಿಸ್ಥಿತಿ ದಿನೇ ದಿನೆ ಬದಲಾಗುತ್ತಿದೆ. ಹಲವು ವರ್ಷಗಳ ಚಿತ್ರಣ ಈಗ ಇಲ್ಲ. ಈಗ ಇರುವ ಚಿತ್ರಣ ಮುಂದಿನ ಕೆಲವು ವರ್ಷಗಳ ನಂತರ ಇರುವುದಿಲ್ಲ. ದೇಶಾದ್ಯಂತ ವಿದೇಶಿ ಕಂಪನಿಗಳು, ಮಾಲ್​​​ಗಳು, ವಿದೇಶಿ ವಸ್ತುಗಳು ಆವರಿಸುತ್ತಿವೆ. ಸ್ವದೇಶಿ ವಸ್ತುಗಳನ್ನು ಬಳಸುವಂತೆ ಜನರಿಗೆ ಕರೆ ನೀಡುವ ದೊಡ್ಡ ಕ್ರಾಂತಿಯೇ ನಡೆಯುತ್ತಿದೆ.ಚಾಲೆಂಜಿಂಗ್​​​​​​​​​ ಸ್ಟಾರ್ ಎಂದೇ ಹೆಸರಾದ ನಟ ದರ್ಶನ್ ಸಿನಿಮಾ ಹೊರತುಪಡಿಸಿ ತಮ್ಮದೇ ಆದ ರೀತಿಯಲ್ಲಿ ಸಮಾಜಸೇವೆ ಕೂಡಾ ಮಾಡುತ್ತಿದ್ದಾರೆ. ಇದೀಗ ಅವರ ಪತ್ನಿ ವಿಜಯಲಕ್ಷ್ಮಿ ಕೂಡಾ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ‘ಪಿಜ್ಜಾ, ಕೆಎಫ್​​ಸಿ, ಮ್ಯಾಕ್​​​​​ ಡೊನಾಲ್ಡ್​​​ನಂತ ಕಂಪನಿ ಮಾಲೀಕರಿಗೆ ಯಾವ ರೀತಿಯಾದರೂ ಬೆಳೆಯುವ ಅವಕಾಶವಿದೆ. ನೀವು ಅವರ ಶಾಪ್​​ಗೆ ಹೋಗಿ ತಿನ್ನದಿದ್ದಲ್ಲಿ ಕೂಡಾ ಅವರು ಬದುಕುತ್ತಾರೆ. ಆದರೆ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾ ದಿನದ ಕೂಲಿಯನ್ನೇ ನಂಬಿಕೊಂಡು ಬದುಕುವವರ ಪರಿಸ್ಥಿತಿ ಆ ರೀತಿ ಇಲ್ಲ.

Advertisement

 

Advertisement

Advertisement

ತಾವೆಲ್ಲಾ ದಯಮಾಡಿ ಅವಶ್ಯಕ ವಸ್ತುಗಳನ್ನು ಸಣ್ಣ ಪುಟ್ಟ ಅಂಗಡಿಗಳಲ್ಲಿ , ತರಕಾರಿಗಳನ್ನು ರೈತರ ಬಳಿ ಖರೀದಿಸುವ ಮೂಲಕ ಅವರಿಗೆ ನೆರವಾಗಿ. ಆನ್​​ಲೈನ್​​​ನಲ್ಲಿ ದಿನಸಿ ಖರೀದಿ ಮಾಡುವ ಬದಲು ಒಂದು ಹೆಜ್ಜೆ ಹೋಗಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಖರೀದಿಸಿ. ಸ್ಟಾರ್​ ಹೋಟೇಲ್​​​​ಗಳಿಗೆ ತೆರಳಿ ಕಾಫಿ, ತಿಂಡಿ ಮಾಡುವ ಬದಲು ಮನೆಯಲ್ಲೇ ಮಾಡಿ ಸೇವಿಸಿ’ ಎಂದು ವಿಜಯಲಕ್ಷ್ಮಿ ತಮ್ಮ ಟ್ವಿಟ್ಟರ್ ಮೂಲಕ ಅಭಿಮಾನಿಗಳ ಬಳಿ ಈ ರೀತಿ ಮನವಿ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರ ಟ್ವೀಟ್​​​ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ವಿಜಯಲಕ್ಷ್ಮಿ ಕೆಮಿಕಲ್ ಇಂಜಿಯರಿಂಗ್ ಪದವೀಧರೆಯಾಗಿದ್ದು 2000 ಮೇ 19 ರಂದು ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಸಂಬಂಧಿಯಾಗಿದ್ದ ದರ್ಶನ್ ಅವರ ಕೈ ಹಿಡಿದರು. ಈ ದಂಪತಿಗೆ ವಿನೀಶ್ ಎಂಬ ಪುತ್ರನಿದ್ದಾರೆ. ದರ್ಶನ್ ಸಿನಿಮಾಗಳಲ್ಲಿ ಸ್ಟಾರ್ ಆಗಿ ಹೆಸರು ಮಾಡುವ ಮುಂಚಿನಿಂದ ಇಂದಿನವರೆಗೂ ಪತಿಗೆ ಪ್ರೋತ್ಸಾಹಿಸುತ್ತಾ, ಅವರ ಕೆಲಸಗಳಲ್ಲಿ ಬೆಂಬಲ ನೀಡುತ್ತಾ ಪತಿ ಸಾಧನೆ ಹಿಂದೆ ನಿಂತಿದ್ದಾರೆ ವಿಜಯಲಕ್ಷ್ಮಿ.

 

ಒಟ್ಟಿನಲ್ಲಿ ವಿಜಯಲಕ್ಷ್ಮಿ ಅವರು ಹೇಳಿದಂತೆ ಸ್ವದೇಶಿ ವಸ್ತುಗಳನ್ನು ಬಳಸುವುದು, ರೈತರು ಹಾಗೂ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ ಅವರಿಗೆ ಸಹಾಯ ಮಾಡಿದರೆ ನಿಜಕ್ಕೂ ನಮ್ಮ ಭಾರತ ವಿದೇಶಮಯವಾಗುವುದನ್ನು ತಪ್ಪಿಸಬಹುದು.

Advertisement
Share this on...