ಭ್ರಷ್ಟಾಚಾರಿಗಳ ಸೊಕ್ಕಡಗಿಸುತ್ತಿದ್ದ ವಿಜಯಲಕ್ಷ್ಮಿಇಷ್ಟು ದಿನ ಎಲ್ಲಿದ್ರು..? ಮಾಧ್ಯಮಗಳ ಬಗ್ಗೆ ಹೀಗೆ ಮಾತನಾಡಿದ್ದು ಏಕೆ..?

in ಮನರಂಜನೆ 143 views

ವಿಜಯಲಕ್ಷ್ಮಿ ಶಿಬರೂರು, ಈಕೆಯನ್ನು ನೀವು ಖಂಡಿತ ನೋಡಿರುತ್ತೀರಿ. ಮಂಗಳೂರಿನ ಈ ದಿಟ್ಟ ಪತ್ರಕರ್ತೆ ಕೆಲವೊಂದು ಪತ್ರಿಕೆಗಳಲ್ಲಿ ಕೆಲಸ ಮಾಡಿ ನಂತರ ಟಿವಿ 9, ಈಟಿವಿ ನಂತರ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದವರು. ಆದರೆ ಕೆಲವು ದಿನಗಳಿಂದ ವಿಜಯಲಕ್ಷ್ಮಿ ಸುವರ್ಣ ವಾಹಿನಿಯಲ್ಲಿ ಕಾಣಿಸುತ್ತಿರಲಿಲ್ಲ. ಅವರನ್ನು ಪ್ರತಿನಿತ್ಯ ನೋಡುತ್ತಿದ್ದವರು ವಿಜಯಲಕ್ಷ್ಮಿ ಇತ್ತೀಚೆಗೆ ಕಾಣಿಸುತ್ತಲ್ವಲ್ಲಾ ಎಂದು ಪ್ರಶ್ನಿಸಿಕೊಳ್ಳುತ್ತಿದ್ದರು. ಇಂದು ವಿಜಯಲಕ್ಷ್ಮಿ ಫೇಸ್​ಬುಕ್ ಲೈವ್ ಬಂದು ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಅಂದ ಹಾಗೆ ಅವರು ಈಗ ವೆಬ್​​​ಚಾನೆಲ್​​​ ಒಂದರ ಪ್ರಧಾನ ಸಂಪಾದಕಿ. ತಾವೂ ಒಬ್ಬ ಪತ್ರಕರ್ತೆಯಾಗಿ ಇಂದಿನ ಮಾಧ್ಯಮಗಳು ಫೇಕ್ ನ್ಯೂಸ್ ಪ್ರಸಾರ ಮಾಡುತ್ತಿವೆ ಎಂದು ಅವರು ಹೇಳಿದ್ದು ಎಲ್ಲರಿಗೂ ಆಶ್ಚರ್ಯವಾಗಿದ್ದು ನಿಜ. ಆದರೆ ಇದಕ್ಕೆ ಅವರು ಕೊಡುವ ವಿವರಣೆ ಹೀಗಿದೆ.’ಈಗ ಬಹುತೇಕ ಎಲ್ಲಾ ಚಾನಲ್​​ಗಳು ನಿಜ ಏನು ಎಂಬುದನ್ನು ತಿಳಿಯುವ ತಾಳ್ಮೆ ತೋರುವುದಿಲ್ಲ, ಪತ್ರಕರ್ತರಾಗಿ ದಿಟ್ಟತನದಿಂದ ಕೆಲಸ ಮಾಡಬೇಕು. ತಪ್ಪುಗಳನ್ನು ಎತ್ತಿ ಹಿಡಿಯಬೇಕು.

Advertisement

 

Advertisement

Advertisement

ಆದರೆ ಎಷ್ಟೋ ಪತ್ರಕರ್ತರು ದಲ್ಲಾಳಿಗಳಂತೆ ವರ್ತಿಸುತ್ತಿದ್ದು ಮಾಧ್ಯಮಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ. ಪತ್ರರ್ಕರಿಗೆ ಬೆಲೆ ಇಲ್ಲದಂತಾಗಿದೆ. ದೇಶದಲ್ಲಿ ಎಷ್ಟೋ ಭ್ರಷ್ಟಾಚಾರ, ಎಷ್ಟೋ ಹಗರಣಗಳು ನಡೆಯುತ್ತಿದ್ದರೂ ಅದರ ವಿರುದ್ಧ ದನಿಯೆತ್ತುವರು ಯಾರೂ ಇಲ್ಲ. ಒಂದು ವೇಳೆ ಈ ಅನ್ಯಾಯದ ವಿರುದ್ಧ ಮಾತನಾಡಿದರೆ ಅವರನ್ನು ಆ ಕ್ಷೇತ್ರದಿಂದ ಓಡಿಸುವವರೇ ಹೆಚ್ಚು.ಇನ್ನು ಎಷ್ಟೋ ಹಗರಣಗಳಲ್ಲಿ ಪತ್ರಕರ್ತರೇ ಏಜೆಂಟ್​​ಗಳಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾಧ್ಯಮ ಎಂಬುದು ಉದ್ಯಮ ಎಂಬಂತಾಗಿದೆ. ಕೆಲವು ಬಾರಿ ಇಷ್ಟವಿಲ್ಲದಿದ್ದರೂ ಒತ್ತಡಕ್ಕೆ ಮಣಿದು ಮಾಡಬಾರದ ಕೆಲಸ ಮಾಡಬೇಕಾಗುತ್ತದೆ. ಇಂತಹ ಕೆಲಸ ಏಕೆ ಮಾಡಬೇಕು, ಪತ್ರಕರ್ತೆಯಾಗಿದ್ದೂ ಏನು ಪ್ರಯೋಜನ ಎಂಬ ಪ್ರಶ್ನೆ ನನಗೆ ಕಾಡಿತು. ಅದಕ್ಕೆ ಉತ್ತರ ಕೂಡಾ ದೊರೆಯಿತು.

Advertisement

 

ಎಲ್ಲವನ್ನೂ ಸರಿ ಮಾಡಲು ಮಾಧ್ಯಮ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಬೇಕು ಎಂದೇನಿಲ್ಲ. ಸ್ವಂತಂತ್ಯ್ರವಾಗಿ ಕೆಲಸ ಮಾಡುತ್ತಾ, ನಿಜವನ್ನು ಹೊರತಂದು ಮಾಧ್ಯಮ ಎಂದರೆ ಹೀಗಿರಬೇಕು ಎನಿಸಿಕೊಳ್ಳುವ ದಾರಿ ಹುಡುಕಿದೆ. ಅದೂ ಕೂಡಾ ನನಗೆ ದೊರೆಯಿತು. ಆದ ಕಾರಣ ಟಿವಿ ಮಾಧ್ಯಮವನ್ನು ತೊರೆದಿದ್ದೇನೆ’ ಎಂದು ವಿಜಯಲಕ್ಷ್ಮಿ ತಾವು ಇಷ್ಟು ದಿನ ಮಾಧ್ಯಮದಿಂದ ದೂರ ಇದ್ದ ಕಾರಣವನ್ನು ತೆರೆದಿಟ್ಟರು.

 

ನಾನು ಯಾವುದೇ ಕಾರಣಕ್ಕೂ ತನಿಖೆಯನ್ನು ನಿಲ್ಲಿಸುವುದಿಲ್ಲ. ಇಷ್ಟು ದಿನ ನಾನೊಬ್ಬಳೇ ಇದ್ದೆ, ಆದರೆ ಈಗ ನನ್ನೊಂದಿಗೆ ಬಲಿಷ್ಠವಾದ ತಂಡ ಇದೆ. ಪ್ರತಿ ಜಿಲ್ಲೆ, ತಾಲೂಕು, ಗ್ರಾಮ, ಮನೆಯಲ್ಲಿ ನಡೆಯುವ ಅನ್ಯಾಯವನ್ನು ನಮ್ಮ ತಂಡ ಬಯಲಿಗೆ ಎಳೆಯುತ್ತದೆ ಎಂದು ವಿಜಯಲಕ್ಷ್ಮಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಇದೀಗ ಅವರು ‘ವಿಜಯ ಟೈಮ್ಸ್’ ಎಂಬ ವೆಬ್​​ ಚಾನೆಲ್ ಆರಂಭಿಸುತ್ತಿದ್ದಾರೆ. ಇದಕ್ಕಾಗಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಯುವಜನತೆಯನ್ನು ತಯಾರು ಮಾಡಿದ್ದಾರೆ.

ಜನರಿಗೆ ಪತ್ರಿಕೋದ್ಯಮದ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ದೂರ ಮಾಡಬೇಕು, ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಬೇಕು ಎಂಬುದು ನನ್ನ ಆಸೆ ಎನ್ನುತ್ತಾರೆ ವಿಜಯಲಕ್ಷ್ಮಿ ಶಿಬರೂರು. ಒಟ್ಟಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿ ಸೃಷ್ಟಿಸಲು ಹೊರಟ ವಿಜಯಲಕ್ಷ್ಮಿ ಅವರಿಗೆ ಆಲ್ ದಿ ಬೆಸ್ಟ್.

Advertisement
Share this on...