ಲೇಡಿ ಸೂಪರ್ ಸ್ಟಾರ್ ವಿಜಯ್ ಶಾಂತಿಗೆ ಮಕ್ಕಳಾಗದಿರಲು ಕಾರಣವೇನು ಗೊತ್ತಾ..?

in ಸಿನಿಮಾ 35 views

ಡ್ಯಾನ್ಸ್ ಹಾಗೂ ಆಕ್ಟಿಂಗ್ ಜೊತೆಗೆ ಫೈಟ್ ಆಕ್ಷನ್ ಗಳಿಂದ ಜನರ ಎದೆಯನ್ನು ಜಲ್ ಎನ್ನಿಸುವಂತೆ ಮಾಡಿದ ಲೇಡಿ ಸೂಪರ್ ಸ್ಟಾರ್ ವಿಜಯ್ ಶಾಂತಿ. ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳ ರಿಲೀಸ್ ಗಾಗಿ ಜನ ಹೀಗೆ ಕಾಯುತ್ತಿದ್ದಾರೋ ಅದೇ ರೀತಿಯಲ್ಲಿ ವಿಜಯ್ ಶಾಂತಿ ಸಿನಿಮಾಗಳಿಗೆ ಜನ ಕಾಯುತ್ತಿದ್ದರು. ಇಡೀ ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳಿಂದ ಅಭಿಮಾನಿಗಳನ್ನು ಸಂಪಾದಿಸಿಕೊಂಡು ಏಕೈಕ ನಟಿ ಅಂತ ಒಬ್ಬೊರಿದ್ದರೆ ಅದು ಒನ್ ಅಂಡ್ ಓನ್ಲಿ ವಿಜಯ್ ಶಾಂತಿ.
ಖ್ಯಾತ ತಮಿಳು ನಿರ್ದೇಶಕ ಭಾರತಿ ರಾಜು ವಿಜಯ್ ಶಾಂತಿಯವರನ್ನು ಚಿತ್ರರಂಗಕ್ಕೆ ಕರೆತಂದರು. ಮೊದಲ ಸಿನಿಮಾ ತಮಿಳಾದರೂ ನಂತರ ತಮ್ಮ ಮಾತೃಭಾಷೆ ತೆಲುಗಿಗೆ ಹೆಚ್ಚು ಮಹತ್ವ ಕೊಟ್ಟು ತೆಲುಗಿನ ಖ್ಯಾತ ನಟಿಯಾದರು ಲೇಡಿ ಸೂಪರ್ ಸ್ಟಾರ್ ವಿಜಯ್ ಶಾಂತಿ.

Advertisement

 

Advertisement

Advertisement

ತಮಿಳಿನಲ್ಲಿ ಕಿಲಾಡಿ ಕೃಷ್ಣುಡು, ತಲೈಮಗನ್, ಕಲ್ಯಾಣ ಕನವಾಗಲ್, ಸೂರ್ಯೋದಯಂ, ರಾಜಸ್ಥಾನ್ ತೆಲುಗಿನಲ್ಲಿ ಸತ್ಯಂ-ಶಿವಂ, ವಂಶ ಗೌರವಂ, ಪ್ರತೀಕಾರಂ, ಪೆಳ್ಳಿಚೂಪುಲು, ರಾರಾಜು, ಶ್ರಾವಣ-ಸಂಧ್ಯಾ, ಸಾಹಸ ಸಾಮ್ರಾಟ್, ಇಂದ್ರುಡು-ಚಂದ್ರುಡು, ಈಶ್ವರ್, ಕರ್ತವ್ಯಂ, ಸರಿಲೇರು ನೀಕೆವ್ವರು ಕನ್ನಡದಲ್ಲಿ ಕೆರಳಿದ ಹೆಣ್ಣು, ವಂದೇ ಮಾತರಂ, ಸಿಂಹಘರ್ಜನೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮಗಳನ್ನು ತಡೆಯುವ ಶೋಷಿತರ, ಬಡ-ಬಗ್ಗರ ಪರ ಧ್ವನಿ ಎತ್ತಿ ನಿಲ್ಲುವಂತಹ ಪಾತ್ರಗಳಲ್ಲಿ ವಿಜಯ್ ಶಾಂತಿಯವರ ನಟನೆ ಅನನ್ಯ ಹಾಗೂ ಅಮೋಘವಾಗಿ ಇರುತ್ತಿತ್ತು. ವಿಜಯ್ ಶಾಂತಿಯವರ ಚಿತ್ರಗಳನ್ನು ನೋಡಿದ ಅದೆಷ್ಟೋ ಅಂದಿನ ನೊಂದ ಹೆಣ್ಣುಮಕ್ಕಳು ವಿಜಯ್ ಶಾಂತಿಯವರ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸ್ವಾಭಿಮಾನಿ ಹಾಗೂ ಸ್ವಾವಲಂಬನೆ ಜೀವನ ನಡೆಸಲು ಧೈರ್ಯ ಮಾಡಿದರು. ವಿಜಯ್ ಶಾಂತಿ ಅವರು ತಮ್ಮ ಸಿನಿಮಾಗಳಿಂದಲೇ ಮಹಿಳೆಯರ ಮೇಲೆ ಹೆಚ್ಚು ಪ್ರಭಾವ ಬೀರಿದರು.

Advertisement

 


ವಿಜಯ್ ಶಾಂತಿಯವರು ತುಂಬಾ ಚಿಕ್ಕ ವಯಸ್ಸಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಅವರಿಗೆ 17ನೇ ವರ್ಷವಿರುವಾಗಲೇ ವಿಜಯ್ ಶಾಂತಿಯವರ ತಂದೆ ತೀರಿಕೊಂಡರು. ತಂದೆ ನಿಧನರಾದ ಒಂದು ವರ್ಷಕ್ಕೆ ತಾಯಿ ಸಹ ತೀರಿಕೊಂಡರು. ತುಂಬಾ ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ವಿಜಯ್ ಶಾಂತಿ ಜೀವನದಲ್ಲಿ ತುಂಬಾ ನೊಂದರು. ಚಿತ್ರರಂಗದಲ್ಲಿ ವಿಜಯ್ ಶಾಂತಿ ಬೇಡಿಕೆಯುಳ್ಳ ನಟಿಯಾಗಿರುವಾಗಲೇ ತನ್ನ 32 ನೇ ವರ್ಷದಲ್ಲಿ ನಿರ್ಮಾಪಕ ಶ್ರೀನಿವಾಸ್ ಪ್ರಸಾದ್ ಎಂಬುವವರನ್ನು ರಿಜಿಸ್ಟರ್ ಮ್ಯಾರೇಜ್ ಆದರು.

 


ಹಲವಾರು ವರ್ಷ ವಿಜಯ್ ಶಾಂತಿ ತನ್ನ ಪತಿಯ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ತಂದೆ-ತಾಯಿಯನ್ನು ತುಂಬಾ ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡ ವಿಜಯ್ ಶಾಂತಿಯವರನ್ನು ಪತಿ ಶ್ರೀನಿವಾಸ್ ತುಂಬಾ ಚೆನ್ನಾಗಿ ನೋಡಿಕೊಂಡರು. ಸಿನಿಮಾ ಜೊತೆಗೆ ರಾಜಕೀಯದಲ್ಲಿ ಧುಮುಕಿ ಪ್ರಜೆಗಳ ಸೇವೆ ಮಾಡಲು ಮುಂದಾದರು ವಿಜಯ್ ಶಾಂತಿ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಬಿಜಿ಼ಯಾದ ವಿಜಯ್ ಶಾಂತಿ ಮಕ್ಕಳನ್ನು ಮಾಡಿಕೊಳ್ಳಲು ಮನಸ್ಸು ಮಾಡಲಿಲ್ಲ. ಮಕ್ಕಳೆಂದರೆ ವಿಜಯ್ ಶಾಂತಿ ಮತ್ತು ಶ್ರೀನಿವಾಸ್ ಪ್ರಸಾದ್ ಗೆ ತುಂಬಾ ಇಷ್ಟವಿದ್ದರೂ ಮಕ್ಕಳನ್ನು ಮಾಡಿಕೊಂಡರೆ ಮಕ್ಕಳ ಬಗ್ಗೆ ಕಾಳಜಿ ವಹಿಸಲು ತುಂಬಾ ಸಮಯ ಇಡಬೇಕಾಗುತ್ತದೆ, ಗಮನಹರಿಸಲು ಆಗುವುದಿಲ್ಲ ಎಂದು ನಿರ್ಧರಿಸಿ ಮಕ್ಕಳನ್ನು ಮಾಡಿಕೊಳ್ಳದೆ ಹಾಗೆ ಉಳಿದರು ವಿಜಯ್ ಶಾಂತಿ ದಂಪತಿ.

– ಸುಷ್ಮಿತಾ

Advertisement
Share this on...