ವ್ಯಕ್ತಿಯೊಬ್ಬರಿಂದ ಮುತ್ತು ಪಡೆಯುತ್ತಿರುವ ಈ ಮಹಿಳೆ ಯಾರು ಗುರುತು ಸಿಕ್ತಾ…?

in ಕನ್ನಡ ಮಾಹಿತಿ/ಮನರಂಜನೆ 229 views

ಕಲಾವಿದರು ಎಂದ ಮೇಲೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು. ಎಲ್ಲಾ ರೀತಿಯ ಕಾಸ್ಟ್ಯೂಮ್​​​​​​ಗಳನ್ನು ಧರಿಸಬೇಕು. ಕೆಲವೊಮ್ಮೆ ನಾಯಕರು ಹೆಣ್ಣಿನಂತೆ ಮೇಕಪ್ , ಕಾಸ್ಟ್ಯೂಮ್ ಮಾಡಿಕೊಳ್ಳಬೇಕಾದ ಸಂದರ್ಭ ಬರುತ್ತದೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಎಷ್ಟೋ ನಟರು, ಮಹಿಳಾ ಪಾತ್ರಧಾರಿಗಳ ಕೊರತೆಯಿಂದ ತಾವೇ ಎಷ್ಟೋ ಬಾರಿ ಮಹಿಳೆಯರ ಉಡುಗೆ ಧರಿಸಿ ನಟಿಸಿರುವುದುಂಟು. ಈ ಪೋಟೋದಲ್ಲಿ ಕಾಣುತ್ತಿರುವ ನಟ ನಿಮಗೆ ಗುರುತು ಸಿಕ್ತಾ..? ಧಾರಾವಾಹಿಪ್ರಿಯರಿಗೆ ಖಂಡಿತ ಈ ನಟ ಯಾರು ಎಂಬ ಪರಿಚಯವಿರುತ್ತದೆ. ಇವರು ವಿಕ್ರಮ್ ಸೂರಿ. ನಟ, ರಂಗಭೂಮಿ ಕಲಾವಿದ. ವಿಕ್ರಮ್ ಸೂರಿ ತಂದೆ ಕೂಡಾ ರಂಗಭೂಮಿ ಕಲಾವಿದರು. ಬಾಲ್ಯದಲ್ಲಿ ತಂದೆಯ ನಾಟಕಗಳನ್ನು ನೋಡುತ್ತಿದ್ದ ವಿಕ್ರಮ್ ಸೂರಿಗೆ ಕೂಡಾ ನಾಟಕಗಳಲ್ಲಿ ಆಸಕ್ತಿ ಮೂಡಿತು. ನಾಟಕಗಳ ಜೊತೆ ಜೊತೆಗೆ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಬಿಸಿಲು ಕುದುರೆ’ ಎಂಬ ಧಾರಾವಾಹಿಯಲ್ಲಿ ಬಾಲನಟನಾಗಿ ವಿಕ್ರಮ್ ಸೂರಿ ನಟನೆ ಆರಂಭಿಸಿದರು. ಈ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು.

Advertisement

Advertisement

ನಂತರ ವಿಕ್ರಮ್ ಸೂರಿ ಟಿ.ಎನ್. ಸೀತಾರಾಮ್​ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿಯಲ್ಲಿ ಪಂಚೆ ಶ್ಯಾಮ ಪಾತ್ರ ವಿಕ್ರಮ್ ಅವರಿಗೆ ಬಹಳ ಹೆಸರು ತಂದುಕೊಟ್ಟಿತು. ಎಷ್ಟರ ಮಟ್ಟಿಗೆ ಎಂದರೆ ವಿಕ್ರಮ್ ಹೊರಗೆ ಎಲ್ಲೇ ಹೋದರೂ ಪುಟ್ಟ ಮಕ್ಕಳು ಕೂಡಾ ಅವರನ್ನು ಪಂಚೆ ಶ್ಯಾಮ ಎಂದು ಕರೆಯುವಷ್ಟರ ಮಟ್ಟಿಗೆ. ಅಷ್ಟೇ ಅಲ್ಲ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಕೂಡಾ ಈ ಧಾರಾವಾಹಿಯನ್ನು ಒಂದು ದಿನವೂ ಮಿಸ್ ಮಾಡದೆ ನೋಡುತ್ತಿದ್ದರಂತೆ.ಈ ಧಾರಾವಾಹಿ ನಂತರ ವಿಕ್ರಮ್ ಸೂರಿ ಸಿಹಿಕಹಿ ಚಂದ್ರು ನಿರ್ದೇಶನದ ‘ಪಾಪಾ ಪಾಂಡು’ ಧಾರಾವಾಹಿಯಲ್ಲಿ ನಟಿಸಿದರು.

Advertisement

Advertisement

ಈ ಧಾರಾವಾಹಿಯ ಗೋಪಿ ಪಾತ್ರ ಕೂಡಾ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತು. ಅದೇ ಧಾರಾವಾಹಿಯಲ್ಲಿ ಎನ್​​​ಎಮ್​ಎಲ್​​ ಆಗಿ ನಟಿಸಿದ್ದ ನಮಿತಾ ರಾವ್ ಅವರನ್ನು ವಿಕ್ರಮ್ ಪ್ರೀತಿಸಿ ಮದುವೆಯಾದರು. ನಮಿತಾ ಹಾಗೂ ಸೂರಿ ಇಬ್ಬರೂ ಒಳ್ಳೆಯ ಡ್ಯಾನ್ಸರ್​​ಗಳು. ಇಬ್ಬರೂ ಜೊತೆ ಸೇರಿ ಸಾಕಷ್ಟು ಸ್ಟೇಜ್ ಶೋ ನೀಡಿದ್ದಾರೆ.  ‘ಎಳೆಯರು ನಾವು ಗೆಳೆಯರು’ ಎಂಬ ಮಕ್ಕಳ ಸಿನಿಮಾವನ್ನು ನಿರ್ದೇಶಿಸುವ ಮೂಲಕ ವಿಕ್ರಮ್ ಸೂರಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.ಅಂದಹಾಗೆ ವಿಕ್ರಮ್ ಸೂರಿ ಲೇಡಿ ಡ್ರೆಸ್​​​ನಲ್ಲಿರುವ ಈ ಪೋಟೋಗಳನ್ನು ಪತ್ನಿ ನಮಿತಾ ರಾವ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisement
Share this on...