ಮೂರುಗಂಟು ಧಾರಾವಾಹಿಯ ಸೂಪರ್ ಸ್ಟಾರ್ ಗೆ ಬಾಲ್ಯದಿಂದಲೂ ಇತ್ತು ನಟನಾಗುವ ಕನಸು !

in Uncategorized 345 views

ಕನಸು… ಎಲ್ಲರಿಗೂ ಕನಸುಗಳೆಂಬುದು ಇದ್ದೆ ಇರುತ್ತದೆ. ಅದರಲ್ಲೂ ಬಾಲ್ಯದ ಕನಸುಗಳು ಒಂದು ಥರ ವಿಚಿತ್ರ ಎನ್ನಬಹುದು. ಅಂದ ಹಾಗೇ ಬಾಲ್ಯದಲ್ಲಿ ಹೆಚ್ಚಿನವರಿಗೆ ಇರುವ ಕನಸು ಎಂದರೆ ತಾನು ದೊಡ್ಡವನಾದ ಮೇಲೆ ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು, ವಿಜ್ಞಾನಿ ಆಗಬೇಕು, ಪೈಲೆಟ್ ಆಗಬೇಕು.. ಹೀಗೆ ಪ್ರತಿಯೊಬ್ಬರದೂ ಬೇರೆ ಬೇರೆ ಕನಸು.. ಈತನಿಗೂ ಒಂದು ಕನಸಿತ್ತು! ತಾನು ನಟನಾಗಿ ಬಣ್ಣದ ಜಗತ್ತಿನಲ್ಲಿ ಮಿಂಚಬೇಕು ಎಂಬುದೇ ಈತ ಕಂಡಿದ್ದ ಕನಸು. ಇದೀಗ ತನ್ನ ಕನಸನ್ನು ನನಸು ಮಾಡಿಕೊಂಡಿರುವ ಈತ ಇಂದು ಕಿರುತೆರೆಯ ಜನಪ್ರಿಯ ನಟ! ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮೂರುಗಂಟು ಧಾರಾವಾಹಿಯಲ್ಲಿ ನಾಯಕ ಸೂಪರ್ ಸ್ಟಾರ್ ವಿಕ್ರಮಾದಿತ್ಯ ಆಗಿ ನಟಿಸುತ್ತಿರುವ ಅನಿರುದ್ಧ್ ಬಾಲಾಜಿ ತಮ್ಮ ಬಾಲ್ಯದ ಕನಸು ನನಸು ಮಾಡಿದ ಸಂತಸದಲ್ಲಿದ್ದಾರೆ. ಅನಿರುದ್ಧ್ ಬಾಲಾಜಿ ಅವರಿಗೆ ಇದ್ದುದು ಒಂದೇ ಗುರಿ, ತಾನು ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಬೇಕು. ನಟನಾಗಬೇಕು ಎಂಬ ತನ್ನ ಬಹುಕಾಲದ ಬಯಕೆಯನ್ನು ಮನೆಯವರ ಬಳಿ ಹೇಳಿ, ಅವರ ಒಪ್ಪಿಗೆ ಪಡೆದ ಅನಿರುದ್ಧ್ ಅವರು ಸೀದಾ ಹಾರಿದ್ದು ಮುಂಬೈಗೆ. ಅಲ್ಲಿ ನಟನೆಯಲ್ಲಿ ಡಿಪ್ಲೋಮಾ ಪದವಿ ಪಡೆದ ಅನಿರುದ್ಧ್ ನಟನೆಯ ರೀತಿ ನೀತಿಗಳನ್ನು ತಿಳಿದರು ಮತ್ತು ಆಗು ಹೋಗುಗಳನ್ನು ಅರಿತರು. ಅಲ್ಲಿ ಸಂಪೂರ್ಣ ಪಳಗಿದ ಅವರು ಮುಂದೆ ಚೆನ್ನೈಗೆ ತೆರಳಿ ಅಲ್ಲಿ ಫೈಟಿಂಗ್ಸ್ ಕುರಿತು ಕಲಿತರು.

Advertisement

Advertisement

ನಟನೆ, ಫೈಟಿಂಗ್ಸ್ ಕುರಿತು ಎಲ್ಲಾ ವಿಚಾರಗಳನ್ನು ಅರಿತ ಅನಿರುದ್ಧ್ ಬಾಲಾಜಿ ಅವರ ನಟನಾ ಪಯಣಕ್ಕೆ ಮುನ್ನುಡಿ ಬರೆದುದು ಕಿರುತೆರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಗರ ಸಂಗಮ ಧಾರಾವಾಹಿಯ ಮೂಲಕ ಕಿರುತೆರೆ ಯಾನ ಶುರು ಮಾಡಿದರು. ಸಾಗರ ಸಂಗಮ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸಿರುವ ಅನಿರುದ್ಧ್ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಕನಸು ಧಾರಾವಾಹಿಯಲ್ಲಿ ನಾಯಕರಾಗಿ ನಟಿಸಿದ್ದರು.

Advertisement

ಇದೀಗ ಮೂರುಗಂಟು ಧಾರಾವಾಹಿಯಲ್ಲಿ ವಿಕ್ರಮಾದಿತ್ಯನಾಗಿ ನಟಿಸಿ ಮೋಡಿ ಮಾಡುತ್ತಿರುವ ಅನಿರುದ್ಧ್ ಬಾಲಾಜಿ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ. ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ ಕಣಗಾಲ್ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿರುವ ಅನಿರುದ್ಧ್ ಆ ಸಿನಿಮಾದಲ್ಲಿ ಎರಡನೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ತದ ನಂತರ ಕನ್ನಡದ ಹೆಸರಾಂತ ನಿರ್ದೇಶಕ ದೊರೆ ಭಗವಾನ್ ಅವರ ಆಡುವ ಗೊಂಬೆ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿರುವ ಅನಿರುದ್ಧ್ ನೆಗೆಟಿವ್ ರೋಲ್ ಮೂಲಕವೂ ಬಣ್ಣದ ಲೋಕದಲ್ಲಿ ಕಮಾಲ್ ಮಾಡಿದ್ದಾರೆ. ಮುಂದೆ ರಿಯಲ್ ಸ್ಟಾರ್ ಉಪೇಂದ್ರ ಅವರ ಶಿವಂ ಸಿನಿಮಾದಲ್ಲಿಯೂ ಕಾಣಿಸಿಕೊಂಡಿರುವ ಅನಿರುದ್ಧ್ ಬಾಲಾಜಿ ಅವರು ಸದ್ಯ ಕಿರುತೆರೆಯಲ್ಲಿ ಬ್ಯುಸಿ.
– ಅಹಲ್ಯಾ

Advertisement
Share this on...