ಈ ಹಳ್ಳಿಗೆ ಹೋದವರು ಮತ್ತೆ ಎಂದಿಗೂ ಹಿಂದಿರುಗಿಲ್ಲ…!!!

in ಕನ್ನಡ ಮಾಹಿತಿ 15 views

ಈ ಜಗತ್ತಿನಲ್ಲಿ ಭೂತ ಕಾಲದಿಂದ ಹಿಡಿದು ಭವಿಷ್ಯ ಕಾಲದವರೆಗೆ ಯಾರಿಗೂ ತಿಳಿಯದ ಅನೇಕ ರಹಸ್ಯಗಳಿವೆ. ಆ ರಹಸ್ಯವನ್ನು ವಿಜ್ಞಾನ ಕೂಡ ಬಗೆಹರಿಸಿಲ್ಲ. ನಾವಿಲ್ಲಿ ಹೇಳುತ್ತಿರುವ ಈ ಸ್ಥಳ ಕೂಡ ಅಷ್ಟೇ ವಿಚಿತ್ರಗಳಿಂದ ಕೂಡಿದೆ. ಆ ಸ್ಥಳದ ಹೆಸರು ‘ಡೆಡ್ ಸಿಟಿ’. ಇದೇನಿದು ಈ ಸ್ಥಳದ ಹೆಸರು ಹೀಗಿದೆ ಎಂದು ನಿಮಗನಿಸಬಹುದು. ಆದರೆ ಆ ಸ್ಥಳಕ್ಕೆ ಆ ಹೆಸರುಬರಲು ಕಾರಣವೇನೆಂದು ನಾವು ನಿಮಗೆ ಮುಂದೆ ಹೇಳುತ್ತೇವೆ. ಬಹಳಷ್ಟು ವರ್ಷಗಳಿಂದ ಈ ‘ಡೆಡ್ ಸಿಟಿ’ ಎಂಬ ಸ್ಥಳವು ಚರ್ಚೆಗೆ ಒಳಪಟ್ಟಿದೆ. ಯಾಕೆಂದರೆ ಅಲ್ಲಿಗೆ ಹೋದ ಯಾರೂ ನಂತರ ಹಿಂದಿರುಗಿಲ್ಲ. ಅದಕ್ಕೆ ಇದನ್ನು ‘ಡೆಡ್ ಸಿಟಿ’ ಎಂದು ಕರೆಯಲಾಗುತ್ತದೆ. ಇಂದು ಈ ಸ್ಥಳದ ಕೆಲವು ರಹಸ್ಯಗಳನ್ನು ನಾವು ನಿಮಗೆ ಹೇಳಲಿದ್ದೇವೆ. ಈ ಸ್ಥಳವು ರಷ್ಯಾದ ದರ್ಗವ್ ಎಂಬ ಹಳ್ಳಿಯಲ್ಲಿದೆ. ಅಲ್ಲಿ ಸತ್ತ ಜನರನ್ನು ಮಾತ್ರ ಕಾಣಬಹುದು.

Advertisement

 

Advertisement


‘ಡೆಡ್ ಸಿಟಿ’ ಎಂಬ ಈ ಗ್ರಾಮವು ಸಂಪೂರ್ಣವಾಗಿ 5 ಪರ್ವತಗಳಿಂದ ಆವೃತವಾಗಿದೆ ಮತ್ತು ಕಲ್ಲುಗಳಿಂದ ಮಾಡಿದ ಅನೇಕ ಗುಡಿಸಲುಗಳನ್ನು ಹೊಂದಿದೆ. ಸ್ಥಳೀಯರು ತಮ್ಮ ಕುಟುಂಬ ಸದಸ್ಯರ ಮೃತ ದೇಹಗಳನ್ನು ಈ ಕಲ್ಲಿನ ಗುಡಿಸಲುಗಳಲ್ಲಿ ಇಡುತ್ತಾರೆ. ಈ ‘ಡೆಡ್ ಸಿಟಿ’ಯ ವಿಚಿತ್ರವೆಂದರೆ ಇಲ್ಲಿ 3-4 ಮಹಡಿಗಳುಳ್ಳ ಎತ್ತರದ ಕಟ್ಟಡಗಳಿವೆ. ಈ ಕಟ್ಟಡಗಳ ಪ್ರತಿಯೊಂದು ಮಹಡಿಯಲ್ಲಿ ಮೃತ ದೇಹಗಳನ್ನು ಇಡಲಾಗುತ್ತದೆ. ನೀವು ಈ ಕಟ್ಟಡಗಳಲ್ಲಿ ಹೆಚ್ಚಿನ ಸಂಖ್ಯೆಯ ದೇಹಗಳನ್ನು ನೋಡಬಹುದಾಗಿದ್ದು, ಈ ಗ್ರಾಮದಲ್ಲಿ ಸುಮಾರು 99 ಕಟ್ಟಡಗಳಿವೆ.

Advertisement

 

Advertisement


ಪ್ರತಿಯೊಂದು ಕಟ್ಟಡವು ಸ್ಮಶಾನಕ್ಕಿಂತ ಕಡಿಮೆಯಿಲ್ಲ. 16 ನೇ ಶತಮಾನದಿಂದಲೂ ಮೃತ ದೇಹಗಳು ಇಲ್ಲಿ ಬಿದ್ದಿವೆ. ಈ ಎಲ್ಲಾ ಕಾರಣಗಳಿಂದಾಗಿ ಈ ಸ್ಥಳಕ್ಕೆ ‘ಡೆಡ್ ಸಿಟಿ’ ಎಂದು ಕರೆಯಲಾಗುತ್ತದೆ. ಮುಖ್ಯವಾದ ವಿಚಾರವೆಂದರೆ ಈ ಕಟ್ಟಡಗಳಿಗೆ ಭೇಟಿ ನೀಡುವ ಯಾವುದೇ ವ್ಯಕ್ತಿ ಎಂದಿಗೂ ಹಿಂದಿರುಗುವುದಿಲ್ಲ ಎಂದು ಸ್ಥಳೀಯರು ನಂಬುವ ಅನೇಕ ನಂಬಿಕೆಗಳಿವೆ. ಈ ಗ್ರಾಮಕ್ಕೆ ಯಾವುದೇ ಪ್ರವಾಸಿಗರು ಹೋಗುವುದಿಲ್ಲ. ಈ ಸ್ಥಳವನ್ನು ತಲುಪುವ ಮಾರ್ಗವು ತುಂಬಾ ಅಪಾಯಕಾರಿಯಾಗಿದ್ದು, ಹವಾಮಾನವೂ ಅಷ್ಟೇನೂ ಉತ್ತಮವಾಗಿಲ್ಲ.

 

ಈ ಮೊದಲೇ ಹೇಳಿದ ಹಾಗೆ ‘ಡೆಡ್ ಸಿಟಿ’ ಸ್ಥಳವು ಅನೇಕ ರಹಸ್ಯಗಳಿಂದ ಕೂಡಿದ್ದು, ವಿಜ್ಞಾನಿಗಳು ಈ ಹಳ್ಳಿ ಮತ್ತು ಹಳ್ಳಿಗರ ಜೀವನಶೈಲಿಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಇದುವರೆಗೂ ಬಹಳಷ್ಟು ಜನ ವಿಜ್ಞಾನಿಗಳು ಇನ್ನಷ್ಟು ತಿಳಿದುಕೊಳ್ಳಲು ಪ್ರಪಂಚದಾದ್ಯಂತ ಈ ಹಳ್ಳಿಗೆ ಬರುತ್ತಾರೆ.

Advertisement
Share this on...