500 ಮನೆ ಇರುವ ಈ ಊರಲ್ಲಿ ಎಲ್ಲರಿಗೂ ಒಂದೇ ಹೆಸರು.. ಈ ಊರು ಇರುವುದು ನಮ್ಮ ರಾಜ್ಯದಲ್ಲೇ..!

in ಕನ್ನಡ ಮಾಹಿತಿ/ಮನರಂಜನೆ 1,663 views

ಇಲ್ಲೊಂದು ವಿಶಿಷ್ಟವಾದ ಗ್ರಾಮ ಇದೆ. ಇದು ಅಂತಿಂಥ ಗ್ರಾಮ ಅಲ್ಲ. ಭಕ್ತಿಗೆ ಮತ್ತೊಂದು ರೂಪ. ಈ ಗ್ರಾಮದಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಒಂದೇ ಹೆಸರನ್ನು ಇಡಲಾಗುತ್ತದೆ. ಅಷ್ಟೇ ಯಾಕೆ ಸೊಸೆಯಾಗಿ ಬರುವ ಹುಡುಗಿಗೂ ಅದೇ ಹೆಸರಿಟ್ಟು ಕರೆಯಲಾಗುತ್ತದೆ. ಅಷ್ಟಕ್ಕೂ ಈ ಗ್ರಾಮದ ವಿಶೇಷತೆ ಏನು..? ಈ ಗ್ರಾಮ ಯಾವ ಜಿಲ್ಲೆಯಲ್ಲಿದೆ ಗೊತ್ತಾ..? ಈ ಹಳ್ಳಿ ಇರುವುದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ. ಹೆಸರು ಹುಲಿಕೆರೆ ಇನಾಮ್ ಗ್ರಾಮ. ಈ ಗ್ರಾಮದ ದೇವತೆ ಗದ್ದೆಮ್ಮ ದೇವಿ. ಈ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಮನೆಗಳಿದ್ದು 2500 ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದಾರೆ. ಮನೆಯಲ್ಲಿ ಹುಟ್ಟುವ ಮಗು ಗಂಡು ಮಗುವಾದರೆ ಗದ್ದೆಪ್ಪ ಎಂದು ಹೆಣ್ಣು ಮಗುವಾದರೆ ಗದ್ದೆಮ್ಮ ಎಂದು ಹೆಸರು ಇಡಲಾಗುತ್ತದೆ. ಅಷ್ಟೇ ಅಲ್ಲದೆ ಮನೆಗೆ ಬರುವ ಸೊಸೆಗೂ ಕೂಡ ಗದ್ದೆಮ್ಮ ಎಂದು ಹೆಸರಿಟ್ಟು ಕರೆಯಲಾಗುತ್ತದೆ. ದೇವಿಯ ಹೆಸರನ್ನು ಇಡದೆ ಇದ್ದರೆ ಗದ್ದೆಮ್ಮ ತಮ್ಮ ಮನೆತನವನ್ನು ಕಾಡುತ್ತಾಳೆ ಇಂದು ಹಿಂದಿನಿಂದ ನಂಬಿಕೊಂಡು ಬಂದಿರುವ ಕಾರಣ ಹುಟ್ಟುವ ಮಗುವಿಗೆ ಗ್ರಾಮದೇವತೆಯ ಹೆಸರನ್ನು ಇಡಲಾಗುತ್ತಿದೆ.

Advertisement

Advertisement

ಇಲ್ಲಿರುವ ಮತ್ತೊಂದು ವಿಶೇಷ ಅಂದರೆ ಮಕ್ಕಳು ಇಲ್ಲದವರು ದೇವಿಯ ಬಳಿ ಬಂದು ಬೇಡಿಕೊಂಡಾಗ ಮಕ್ಕಳಾಗಿರುವ ಉದಾಹರಣೆಗಳು ಬೇಕಾದಷ್ಟು ಇವೆಯಂತೆ.
ಆಧುನಿಕತೆಯ ಈ ಕಾಲದಲ್ಲಿ ಇಂತಹ ಗ್ರಾಮ ಕೂಡ ಇದೆ ಅನ್ನುವುದು ಮತ್ತೊಂದು ಆಶ್ಚರ್ಯಕರವಾದ ಸಂಗತಿ. ಬಹುಶಃ ಈ ರೀತಿಯಲ್ಲಿ ದೇವಿಯನ್ನು ನಂಬಿರುವ ಹಾಗೂ ಹುಟ್ಟುವ ಪ್ರತಿಯೊಬ್ಬರಿಗೂ ಒಂದೇ ಹೆಸರಿಡುವ ಗ್ರಾಮ ನಮ್ಮ ದೇಶದಲ್ಲಿ ಅಲ್ಲ ಪ್ರಪಂಚದಲ್ಲಿ ಎಲ್ಲೂ ಇಲ್ಲ ಅನಿಸುತ್ತದೆ. ಇಂತಹ ಸಂಪ್ರದಾಯ ಮುಂದುವರಿಸಿಕೊಂಡು ಬರುವುದು ಅಷ್ಟು ಸುಲಭದ ಮಾತಲ್ಲ‌. ಇವರ ಗಾಢವಾದ ನಂಬಿಕೆಗೆ ಒಂದು ನಮಸ್ಕಾರ ಮಾಡಲೇಬೇಕು. ಆಧುನಿಕತೆ ಎಂಬ ಹೆಸರಿನಲ್ಲಿ ಪ್ರಪಂಚ ಎಷ್ಟೇ ಬದಲಾದರೂ ಈ ಗ್ರಾಮದ ಜನರ ನಂಬಿಕೆ ಮಾತ್ರ ಹಾಗೆ ಉಳಿದುಕೊಂಡಿರುವುದು ವಿಶೇಷವೇ ಸರಿ. ಈ ಗ್ರಾಮದ ಜನರ ವಿಶಿಷ್ಟವಾದ ಭಕ್ತಿಯನ್ನು ಮೆಚ್ಚಲೇಬೇಕು.

Advertisement

– ಸುಷ್ಮಿತಾ

Advertisement

Advertisement
Share this on...