ದಾಂಪತ್ಯ ಜೀವನಕ್ಕೆ ಕಾಲಿಡಲು ವಿನಾಯಕ ಜೋಷಿ ಸಜ್ಜು ! ಹುಡುಗಿ ಯಾರು ಗೊತ್ತಾ ?

in ಮನರಂಜನೆ/ಸಿನಿಮಾ 252 views

ವಿನಾಯಕ್ ಜೋಷಿ ನಿಮಗೆ ನೆನಪಿರಬಹುದು, ಬಾಲನಟನಾಗಿ ಕರಿಯರ್ ಆರಂಭಿಸಿ ಹೆಸರು ಮಾಡಿದ ನಟ. ಆ್ಯಕ್ಟಿಂಗ್ ಜೊತೆಗೆ, ಬಿಗ್​ಬಾಸ್ ಸ್ಪರ್ಧಿ​, ಕಿರುತೆರೆ ನಿರೂಪಣೆ ಹಾಗೂ ಎಫ್​​​ಎಂನಲ್ಲಿ ಆರ್​ಜೆ ಆಗಿ ಕೂಡಾ ಅವರು ಗುರುತಿಸಿಕೊಂಡಿದ್ದಾರೆ. ವಿನಾಯಕ್ ಜೋಷಿ ತಮ್ಮ ಬಾಲ್ಯದ ಗೆಳತಿ ಜೊತೆ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ವಿನಾಯಕ್ ಜೋಷಿ ಸುಮಾರು 70 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವೊಂದು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲೂ ಅವರು ನಟಿಸಿದ್ದಾರೆ. ಲಾಕ್​ಡೌನ್ ಸಡಿಲಿಕೆ ಆಗಿದ್ದೇ ತಡ ಬಹಳ ದಿನಗಳಿಂದ ಕಾಯುತ್ತಿದ್ದವರೆಲ್ಲಾ ಮದುವೆಯಾಗುತ್ತಿದ್ದಾರೆ. ಇದೀಗ ವಿನಾಯಕ್ ಜೋಷಿ ಕೂಡಾ ಈ ಸಾಲಿನಲ್ಲಿದ್ದು ತಮ್ಮ ಬಾಲ್ಯದ ಗೆಳತಿ, ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷಾ ಬೆಳವಾಡಿ ಅವರನ್ನು ವರಿಸಲಿದ್ದಾರೆ.ಈ ಬಗ್ಗೆ ಮಾತನಾಡಿರುವ ವಿನಾಯಕ್​​​​​​​​​​​​​​​​​​​​ ಜೋಷಿ, ನಾವು 7 ವರ್ಷದವರಿದ್ದಾಗ ಸ್ಕೂಲ್​ನಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡಿದ್ದೆವು.

Advertisement

 

Advertisement

Advertisement

ನಂತರ ಕೆಲವು ವರ್ಷಗಳು ನನಗೂ ವರ್ಷಾಗೂ ಸಂಪರ್ಕ ಇರಲಿಲ್ಲ. ಆದರೆ ಮತ್ತೆ ಬಹಳ ವರ್ಷಗಳ ನಂತರ ಇಬ್ಬರೂ ಭೇಟಿಯಾದೆವು. ಅಂದಿನಿಂದ ನಮ್ಮ ಸ್ನೇಹ ಬೆಳೆಯಿತು. ಕೆಲವು ದಿನಗಳ ನಂತರ ಸ್ನೇಹ ಪ್ರೀತಿಗೆ ತಿರುಗಿತು. ವರ್ಷಾ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ. ಅನೇಕ ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಡಿದ್ದಾರೆ. ಬೆಂಗಳೂರಿನ ಸ್ಪೋರ್ಟ್ಸ್​​ ಅಕಾಡೆಮಿ ಒಂದರಲ್ಲಿ ಅವರು ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ಯಾಡ್ಮಿಂಟನ್ ಮಾತ್ರವಲ್ಲ ಆ್ಯಕ್ಟಿಂಗ್​​ನಲ್ಲೂ ವರ್ಷಾಗೆ ಆಸಕ್ತಿ ಇದ್ದು ಒಂದು ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಶೀಘ್ರದಲ್ಲೇ ಬಿಡುಗಡೆಯಾಗಬೇಕಿದೆ ಎಂದಿದ್ದಾರೆ ವಿನಾಯಕ್ ಜೋಷಿ.

Advertisement

ವಿನಾಯಕ್ ಜೋಷಿ ಸದ್ಯಕ್ಕೆ ಸಿನಿಮಾಗಳಿಗಿಂತ ವೆಬ್ ಸೀರೀಸ್ ಹಾಗೂ ಈವೆಂಟ್ ಮ್ಯಾನೇಜ್​​ಮೆಂಟ್ ಕಡೆ ಹೆಚ್ಚು ಸಕ್ರಿಯರಾಗಿದ್ದಾರೆ. ಆಗಸ್ಟ್ 25 ರ ನನ್ನ ಹುಟ್ಟುಹಬ್ಬದಂದು ರಿಜಿಸ್ಟರ್ ಆಫೀಸಿನಲ್ಲಿ ಸರಳವಾಗಿ ಮದುವೆಯಾಗಲು ಪ್ಲ್ಯಾನ್ ಮಾಡಿದ್ದೆ. ಆದರೆ ನಾನು ಶಾಸ್ತ್ರೋಕ್ತವಾಗಿ ಮದುವೆ ಆಗಬೇಕು ಎಂಬುದು ನನ್ನ ಕುಟುಂಬದವರ ಆಸೆ. ಆದ್ದರಿಂದ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ, ಸರಳವಾಗಿ ಮದುವೆಯಾಗುತ್ತೇನೆ. ಶೀಘ್ರದಲ್ಲೇ ಮದುವೆ ದಿನಾಂಕವನ್ನು ಎಲ್ಲರಿಗೂ ತಿಳಿಸುತ್ತೇನೆ ಎನ್ನುತ್ತಾರೆ ವಿನಾಯಕ್ ಜೋಷಿ.

Advertisement
Share this on...