ವಿನೋದ್ ಪ್ರಭಾಕರ್-ಡಿಕೆಶಿ ಭೇಟಿ….ರಾಜಕೀಯಕ್ಕೆ ಬರಲಿದ್ದಾರಾ ಮರಿ ಟೈಗರ್​...? - Namma Kannada Suddi
prabhakr son

ವಿನೋದ್ ಪ್ರಭಾಕರ್-ಡಿಕೆಶಿ ಭೇಟಿ….ರಾಜಕೀಯಕ್ಕೆ ಬರಲಿದ್ದಾರಾ ಮರಿ ಟೈಗರ್​…?

in ರಾಜಕೀಯ/ಸಿನಿಮಾ 205 views

ಚಿತ್ರರಂಗದಲ್ಲಿ ಹೆಸರು ಮಾಡಿದ ಎಷ್ಟೋ ನಟ ನಟಿಯರು ರಾಜಕೀಯಕ್ಕೆ ಬರುತ್ತಾರೆ. ಕೆಲವರು ಚಿತ್ರರಂಗದಲ್ಲಿ ಹೆಸರು ಮಾಡಿ ರಾಜಕೀಯದಲ್ಲೂ ಜಯಭೇರಿ ಬಾರಿಸುತ್ತಾರೆ. ಆದರೆ ಕೆಲವರಿಗೆ ಚಿತ್ರರಂಗ ಒಲಿದರೂ ರಾಜಕೀಯ ಒಲಿಯುವುದಿಲ್ಲ. ಮತ್ತೆ ಕೆಲವು ಸೆಲಬ್ರಿಟಿಗಳು ಚಿತ್ರರಂಗಕ್ಕಿಂತ ರಾಜಕೀಯದಲ್ಲೇ ದೊಡ್ಡ ಹೆಸರು ಮಾಡುತ್ತಾರೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಸುಮಲತಾ ಅಂಬರೀಶ್, ಉಮಾಶ್ರೀ, ಜಯಮಾಲ, ಬಿ.ಸಿ. ಪಾಟೀಲ್, ಜಗ್ಗೇಶ್, ಮಾಳವಿಕಾ ಅವಿನಾಶ್ ತಾರಾ ಅನುರಾಧ, ಶಶಿಕುಮಾರ್, ಪೂಜಾಗಾಂಧಿ, ಕುಮಾರ್ ಬಂಗಾರಪ್ಪ, ನಿಖಿಲ್ ಕುಮಾರಸ್ವಾಮಿ ಹಾಗೂ ಇನ್ನಿತರರು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇತರ ಭಾಷೆಗಳ ಸಿನಿಮಾ ಸ್ಟಾರ್​​​ಗಳು ಕೂಡಾ ರಾಜಕೀಯದಲ್ಲಿ ಸಕ್ರಿಯರಾಗಿದ್ದು ಕೆಲವರು ಸಚಿವರಾಗಿ ಕೂಡಾ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ತಮ್ಮ ಪಕ್ಷದ ವರ್ಚಸನ್ನು ಹೆಚ್ಚಿಸಲು, ಚುನಾವಣಾ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳು ಸಿನಿಮಾ ನಟ-ನಟಿಯರನ್ನು ಕರೆತರುವುದು ಸಾಮಾನ್ಯ. ಇದೀಗ ಮರಿ ಟೈಗರ್ ಎಂದೇ ಹೆಸರಾದ ವಿನೋದ್ ಪ್ರಭಾಕರ್ ಕೂಡಾ ರಾಜಕೀಯಕ್ಕೆ ಬರಬಹುದು ಎನ್ನಲಾಗುತ್ತಿದೆ.

Advertisement

Advertisement

ಇತ್ತೀಚೆಗಷ್ಟೇ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ವಿನೋದ್ ಪ್ರಭಾಕರ್ ಅವರ ಮನೆಗೆ ತೆರಳಿ ವಿನೋದ್ ಪ್ರಭಾಕರ್ ಅವರಿಗೆ ಪಕ್ಷಕ್ಕೆ ಸೇರಲು ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ವಿನೋದ್ ಪ್ರಭಾಕರ್ ಮನೆಗೆ ತೆರಳಿದ್ದ ಡಿಕೆಶಿ, ಅವರೊಂದಿಗೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಅವರ ಮನೆಯಲ್ಲಿ ಊಟ ಮಾಡಿ ಕೂಡಾ ಬಂದಿದ್ದಾರೆ. ರಾಜ ರಾಜೇಶ್ವರಿ ನಗರದ ಉಪಚುನಾವಣೆ ಸಮೀಪಿಸುತ್ತಿದೆ. ಈಗಾಗಲೇ ಇತರ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯ ಆರಂಭಿಸಿವೆ. ಕಾಂಗ್ರೆಸ್ ಪರ ಪ್ರಚಾರಕ್ಕೆ ಬರುವಂತೆ ಡಿಕೆಶಿ ವಿನೋದ್ ಪ್ರಭಾಕರ್ ಅವರನ್ನು ಕೇಳಿದ್ದಾರೆ. ಇದೇ ವೇಳೆ, ಪಕ್ಷ ಸೇರಲು ಕೂಡಾ ಸ್ವಾಗತಿಸಿದ್ಧಾರೆ. ಆದರೆ ವಿನೋದ್ ಪ್ರಭಾಕರ್ ಇದಕ್ಕೆ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.

Advertisement

ಡಿ.ಕೆ. ರವಿ ಪತ್ನಿ ಕುಸುಮಾ ಕಾಂಗ್ರೆಸ್ ಪಕ್ಷದಿಂದ ಆರ್​​​​​ಆರ್ ನಗರ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಿರ್ಮಾಪಕ ಮುನಿರತ್ನ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ಮುನಿರತ್ನ ಅವರಿಗೆ ಚಿತ್ರರಂಗದ ಬಹುತೇಕ ಸ್ಟಾರ್ ನಟರು ಬೆಂಬಲಿಸುತ್ತಿದ್ಧಾರೆ. ರಾಕ್​​ಲೈನ್ ವೆಂಕಟೇಶ್ ಹಾಗೂ ಮುನಿರತ್ನ ಬೀಗರಾಗಿರುವುದರಿಂದ ರಾಕ್​ಲೈನ್ ವೆಂಕಟೇಶ್ ಬೆಂಬಲ ಸಂಪೂರ್ಣ ಮುನಿರತ್ನ ಅವರಿಗೆ ಇರುತ್ತದೆ. ದರ್ಶನ್, ಯಶ್ , ಹಾಗೂ ಇತ್ತೀಚೆಗೆ ಬಿಜೆಪಿ ಸೇರಿರುವ ಅಮೂಲ್ಯ ಹಾಗೂ ಅವರ ಕುಟುಂಬ ಮುನಿರತ್ನ ಪರ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ. ಈ ಕಾರಣದಿಂದ ಕುಸುಮ ಪರ ಪ್ರಚಾರ ಮಾಡಲು ಡಿಕೆಶಿ, ವಿನೋದ್ ಪ್ರಭಾಕರ್ ಅವರನ್ನು ಸಂಪರ್ಕಿಸಿದ್ದಾರೆ. ಇದಕ್ಕೂ ಮುನ್ನ ಡಿಕೆಶಿ ನೆನಪಿರಲಿ ಪ್ರೇಮ್ ಮನೆಗೆ ತೆರಳಿ ಅವರನ್ನೂ ಕೂಡಾ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.

Advertisement

ಗಡಿಪಾರ್ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​ಗೆ ಬಂದ ವಿನೋದ್ ಪ್ರಭಾಕರ್ ನಂತರ ಟೈಸನ್, ನವಗ್ರಹ, ಬೆಳ್ಳಿ, ಗಜೇಂದ್ರ, ಹೋರಿ, ಕ್ರ್ಯಾಕ್, ರಗಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್​ ಚಿತ್ರದಲ್ಲಿ ಕೂಡಾ ವಿನೋದ್ ಪ್ರಭಾಕರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ವಿನೋದ್ ಪ್ರಭಾಕರ್ ಶ್ಯಾಡೋ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದೀಗ ರಾಜಕೀಯಕ್ಕೆ ಸೇರಲು ಅವರಿಗೆ ಆಹ್ವಾನ ಬಂದಿದೆ. ವಿನೋದ್ ಪ್ರಭಾಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕು.

Advertisement
Share this on...

Latest from ರಾಜಕೀಯ

ಅಭಿಮಾನಿ ತಮ್ಮನ್ನು ಬೀಳಿಸಿದರೂ ಕೋಪಗೊಳ್ಳದ ಪವನ್ ಕಲ್ಯಾಣ್…ನಿಮ್ಮ ಸಹನೆಗೆ ಹ್ಯಾಟ್ಸಾಫ್ ಎಂದ ನೆಟಿಜನ್ಸ್​​​​​​..ವಿಡಿಯೋ

ಪವನ್ ಕಲ್ಯಾಣ್, ಆಂಧ್ರ ಹಾಗೂ ತೆಲಂಗಾಣದಲ್ಲಿ ಪವರ್ ಸ್ಟಾರ್ ಎಂದೇ ಫೇಮಸ್. ನಟನಾಗಿ, ರಾಜಕೀಯ ನಾಯಕನಾಗಿ…

ತಮಿಳುನಾಡು ಸಿಎಂ ಭೇಟಿ ಮಾಡಿದ ಶಿವರಾಜ್​​ ಕುಮಾರ್ ದಂಪತಿ….ಭೇಟಿ ಬಗ್ಗೆ ಶಿವಣ್ಣ ಹೇಳಿದ್ದೇನು..?

ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಶಿವರಾಜ್ ಕುಮಾರ್ ಇತ್ತೀಚೆಗೆ ಮೈಸೂರಿನಿಂದ ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿಗೆ ಕರೆತಂದು…

ನನ್ನ ಕೆನ್ನೆಗಳನ್ನು ಇನ್ಮುಂದೆ ಜೋಪಾನವಾಗಿರಿಸಿಕೊಳ್ಳಬೇಕು…ಸಂಸದೆ ಹೇಮಾ ಮಾಲಿನಿ ಹೀಗೆ ಹೇಳಿದ್ದೇಕೆ…?

ರಾಜಕೀಯ ಮುಖಂಡರು ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ನೀಡುವ ಕೆಲವೊಂದು ಹೇಳಿಕೆಗಳು ಇತರರ ಬೇಸರಕ್ಕೆ ಕಾರಣವಾಗುತ್ತದೆ. ಈ…

ಪಾಲಿಟಿಕ್ಸ್​​​​ ಬೇಡ ಎನ್ನುತ್ತಿದ್ದ ರಿಯಲ್ ಹೀರೋ, ಪ್ರಕಾಶ್ ರಾಜ್​ ವಿರುದ್ಧ ಮಾ ಚುನಾವಣೆಗೆ ಸ್ಪರ್ಧಿಸ್ತಾರಾ…?

ಕಳೆದ ಲೋಕಸಭೆ ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್, ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಅವರು…

Go to Top