ಡ್ಯಾನ್ಸ್ ರಾಜಾ ಡ್ಯಾನ್ಸ್  ಚಿತ್ರದಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ವಿನೋದ್ ರಾಜ್ ಇಂದಿಗೂ ಕೂಡ ಮದುವೆಯಾಗಿಲ್ಲ? ಕಾರಣ ಇಲ್ಲಿದೆ ನೋಡಿ

in ಸಿನಿಮಾ 52 views

ಹತ್ತೊಂಬತ್ತನೇ ಶತಮಾನದ ಐವತ್ತರ ದಶಕದಲ್ಲಿ ಕರುನಾಡಿನ  ಕಡಲ ಕಿನಾರೆಯಲ್ಲಿ  ಜನಿಸಿದ ಚೆಲುವೆ ಒಬ್ಬರು ಮೈಸೂರಿಗೆ ಬರುತ್ತಾರೆ. ಚಂಚಲ ಕುಮಾರಿ ನಾಗ ಕನ್ನಿಕೆ ಸಿನಿಮಾಗಳ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡುತ್ತಾರೆ. ಸುಮಾರು ಐದು ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಗಂಧದ ಗುಡಿಯ ರಾಣಿ  ಹೊನ್ನಮ್ಮ ಬಿಂಕದ ಸಿಂಗಾರಿ ನಮ್ಮೆಲ್ಲರ ನೆಚ್ಚಿನ ಹಿರಿಯ ತಾರೆ ಡಾಕ್ಟರ್ ಎಂ ಲೀಲಾವತಿ. ಲೀಲಾವತಿ ರವರ ಮಗ ವಿನೋದ್ ರಾಜ್.

Advertisement

 

Advertisement


ಕನ್ನಡದ ಹಿರಿತೆರೆಯ ಪ್ರತಿಭಾನ್ವಿತರಲ್ಲಿ ಸಕಲಕಲಾವಲ್ಲಭರಾಗಿ ಖ್ಯಾತಿ ಗಳಿಸಿದವರು ಕೇವಲ ಬೆರಳೆಣಿಕೆಯಷ್ಟೇ ಮಂದಿ. ಗಾಯನ ನಟನೆ ಅದರಲ್ಲೂ ವಿಶೇಷವಾಗಿ ನರ್ತನ ಕಲೆಯಲ್ಲಿ ತರ ಕಲಾ ಮಲಕ ಮಾಡಿಕೊಂಡು ಡ್ಯಾನ್ಸ್ ರಾಜಾ ಎಂದು ಖ್ಯಾತಿ ಗಳಿಸಿದವರು ವಿನೋದ್ ರಾಜ್. ವಿನೋದ್ರಾಜ್ ಜನಿಸಿದ್ದು ಚೆನ್ನೈನಲ್ಲಿ. ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಪಡೆದಿರುವ ದ್ವಾರಕೀಶ್ ಅವರ ಕಡೆಯಿಂದ ವಿನೋದ್ ರಾಜ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು . ಡ್ಯಾನ್ಸ್ ರಾಜಾ ಡ್ಯಾನ್ಸ್  ಚಿತ್ರದ ನೃತ್ಯ ಲಹರಿಯಿಂದ ಕೀರ್ತಿ ಪತಾಕೆಯನ್ನು ಹಾರಿಸಿದವರು. ಕೃಷ್ಣ ನೀ ಕುಣಿದಾಗ, ಕಾಲೇಜ್  ಹೀರೋ,  ಯುದ್ಧ ಪರ್ವ,  ವಂದೇ ಮಾತರಂ, ಕನ್ನಡದ ಕಂದ  ಮುಂತಾದ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ನಟಿಸುವುದಲ್ಲದೆ ಪೋಷಕ ನಟನಾಗಿ ಕೂಡ ಪಾತ್ರ ನಿರ್ವಹಿಸಿದ್ದಾರೆ.

Advertisement

Advertisement

ಮೈಕೆಲ್ ಜಾಕ್ಸನ್  ತಮ್ಮ ನಟನೆ ಮತ್ತು ನೃತ್ಯಕ್ಕೆ ಸ್ಫೂರ್ತಿ ಎಂದು ಹೇಳಿಕೊಳ್ಳುವ ವಿನೋದ್ ರಾಜ್ ಡ್ಯಾನ್ಸ್ ಕಾರ್ಯಕ್ರಮದ ತೀರ್ಪುಗಾರರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲರ ಹಣೆಬರಹವನ್ನು ಬರೆಯುವವನು ದೇವರು. ಆದರೆ ನನ್ನ ಹಣೆಯ ಬರಹವನ್ನು ಬರೆದವರು ನನ್ನ ತಾಯಿ ಎಂದು ಹೇಳಿಕೊಳ್ಳುವ ವಿನೋದ್ ರಾಜ್ ನಿಜಕ್ಕೂ ತಾಯಿಗೆ ತಕ್ಕ ಮಗ ಎಂದರೆ ತಪ್ಪಾಗಲಾರದು.ಇಂತಹ ಸಕಲಕಲಾ ವಲ್ಲಭ ಐವತ್ತು ವರ್ಷವಾದರೂ  ವಿನೋದ್   ರಾಜ್ ಇಂದಿಗೂ ಕೂಡ ಮದುವೆಯಾಗಿಲ್ಲ. ಇತ್ತೀಚೆಗೆ ವಿನೋದ್ ರಾಜ್ ತಾನು ಮದುವೆಯಾಗದಿರಲು ಇರುವ ಕಾರಣಗಳನ್ನು ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ. ವಿನೋದ್ ರಾಜ್ ರವರ ಪ್ರಕಾರ ಅವರ  ತಾಯಿಯನ್ನು  ಅವರಿಗಿಂತ ಚೆನ್ನಾಗಿ ನೋಡಿಕೊಳ್ಳುವವರು ಈ ಪ್ರಪಂಚದಲ್ಲಿ ಮತ್ತೊಬ್ಬರಿಲ್ಲ.  ಬರುವಂತಹ ಹುಡುಗಿ ಯಾವ ರೀತಿ ಇರುತ್ತಾರೆ ಗೊತ್ತಿಲ್ಲ.

 

ಆದ್ದರಿಂದ ಬದುಕಿರುವವರೆಗೂ ತನ್ನ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡು ಅವರ ಜೊತೆ ಸಮಯವನ್ನು ಕಳೆಯುತ್ತೇನೆ ಎಂದು ಹೇಳಿಕೊಂಡಿದ್ದಾರೆ. ನಿಜಕ್ಕೂ ಇಂತಹ ನಟರು ಸಿಗುವುದು ಬಹಳ ಅಪರೂಪ. ಹೆಂಡತಿ ಬಂದ ಮೇಲೆ ತಾಯಿಯನ್ನು ಕಡೆಗಣಿಸುವ ಎಷ್ಟೋ ಜನರನ್ನು ನಟರನ್ನ ನೋಡಿದ್ದೇವೆ  ಆದರೆ ಇಂಥವರ ಮಧ್ಯೆ ವಿನೋದ್ ರಾಜ್ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ.

 

ಇದ್ದರೆ ಎಲ್ಲರಿಗೂ ಇಂತಹ ಮಗ ಇರಬೇಕು ನಮ್ಮದು ಎಲ್ಲ ತಾಯಂದಿರ ಆಶಯ. ಇಂದಿಗೂ ಕೂಡ ತಾಯಿ ಮಗ ಭೂಮಿ ತಾಯಿಯ ಸೇವೆಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

Advertisement
Share this on...