ವಿರಾಟ್ ಕುಡಿಯುವ ನೀರು, ಗಡಿಯಾರ, ಬಟ್ಟೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ !

in ಕ್ರೀಡೆ 36 views

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಐಷಾರಾಮಿ ಜೀವನಶೈಲಿ ನಡೆಸುತ್ತಿರುವುದಕ್ಕೆ ಹೆಸರುವಾಸಿಯಾಗಿರುವ ವಿರಾಟ್, ಇದುವರೆಗೂ ಸಾಕಷ್ಟು ಹಣವನ್ನು ಗಳಿಸಿದ್ದಾರೆ. ವಿರಾಟ್ ಲಕ್ಷಾಂತರ ಮೌಲ್ಯದ, ದುಬಾರಿ ಬ್ರಾಂಡ್ಗಳ ಅನೇಕ ಬಟ್ಟೆಗಳು ಮತ್ತು ಕೈಗಡಿಯಾರಗಳನ್ನು ಧರಿಸುತ್ತಾರೆ ಎಂಬುದು ಬಹುತೇಕ ಅವರ ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಆದ್ದರಿಂದ ಇಂದು ನಾವು ವಿರಾಟ್ ಲೈಫ್ ಸ್ಟೈಲ್ ಬಗ್ಗೆ ಕೆಲವು ಮಾಹಿತಿಗಳನ್ನು ನಿಮಗೆ ತಿಳಿಸಲಿದ್ದೇವೆ.

Advertisement

 

Advertisement

 

Advertisement


ನಿಮಗೆ ಗೊತ್ತಾ ವಿರಾಟ್ ಕೊಹ್ಲಿ ತುಂಬಾ ದುಬಾರಿ ಬೆಲೆಯ ನೀರನ್ನು ಕುಡಿಯುತ್ತಾರೆ. ಹೌದು ವಿರಾಟ್ ಫ್ರಾನ್ಸ್ನ ಇವಿಯನ್ ಕಂಪನಿಯ ನೀರನ್ನು ಕುಡಿಯುತ್ತಾರೆ. ಈ ನೀರಿನ ಬೆಲೆ ಲೀಟರ್’ಗೆ 600 ರೂ.ಗಳಿಂದ ಪ್ರಾರಂಭವಾಗಿ, 35000 ರೂ.ವರೆಗೂ ಲಭ್ಯವಿದೆ. ವಿರಾಟ್ ಮಾತ್ರವಲ್ಲ, ಎಲ್ಲಾ ದೊಡ್ಡ ಆಟಗಾರರೂ ಇದೇ ನೀರನ್ನು ಬಳಸುತ್ತಾರೆ.
ಈ ನೀರನ್ನು ಕುಡಿಯುವುದರಿಂದ ತೂಕ ನಷ್ಟವಾಗುತ್ತದೆ. ಇದರ ಜೊತೆಗೆ ಇದು ಖಿನ್ನತೆಯನ್ನೂ ನಿಯಂತ್ರಿಸುತ್ತದೆ. ಈ ನೀರು ಚರ್ಮಕ್ಕೆ ಸಹ ಪ್ರಯೋಜನಕಾರಿ ಎಂದು ಸಹ ಹೇಳಲಾಗುತ್ತದೆ. ಅಮೆಜಾನ್ನಲ್ಲಿರುವ ಈ ಒಂದು ಲೀಟರ್ ನೀರಿನ ಬಾಟಲಿಯ ಬೆಲೆ ಸುಮಾರು 450 ರೂಪಾಯಿಗಳು.

Advertisement

 


ಹಾಗೆಯೇ ವಿರಾಟ್ ಕೊಹ್ಲಿ ಬಳಿ ಅಮೂಲ್ಯವಾದ ಕೈಗಡಿಯಾರಗಳ ಉತ್ತಮ ಸಂಗ್ರಹವಿದೆ. ಹೆಚ್ಚು ಕಡಿಮೆ ವಿರಾಟ್ ಕೊಹ್ಲಿ ಬಳಿ 70-70 ಲಕ್ಷ ರೂ ಬೆಲೆ ಬಾಳುವ ವಾಚುಗಳ ಸಂಗ್ರಹವಿದೆ. ಈ ಹಿಂದೆ ಅನುಷ್ಕಾ ಶರ್ಮಾ ಅವರೊಂದಿಗೆ ವಿರಾಟ್ ಕೊಹ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ, ಅವರ ಕೈಯಲ್ಲಿದ್ದ ಗಡಿಯಾರದಲ್ಲಿ ಚಿನ್ನ, ನೀಲಮಣಿ ಮತ್ತು ವಜ್ರಗಳು ಇದ್ದವು. ಇದರ ಬೆಲೆ ಸುಮಾರು 70 ಲಕ್ಷ ರೂಪಾಯಿ.

 

ಈ ಹಿಂದೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಳಿ ಇದ್ದ ಅನೇಕ ಐಷಾರಾಮಿ ಬ್ರಾಂಡ್ ಹ್ಯಾಂಡ್ ಬ್ಯಾಗ್’ಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದೆವು. ಇವುಗಳಲ್ಲಿ ಕೆಲವು ಬ್ಯಾಗ್’ಗಳು ನೋಡಲು ಕಾಮನ್ ಬ್ಯಾಗ್ ಅಂತೆ ಕಂಡರೂ, ವಾಸ್ತವವಾಗಿ ಅವುಗಳ ಬೆಲೆ ನೀವು ಅಂದಾಜು ಮಾಡಲು ಸಾಧ್ಯವಾಗದಷ್ಟು ಇತ್ತು.

Advertisement
Share this on...