ವಿರಾಟ್ ಕೋಹ್ಲಿ ಒಂದು ಪೋಸ್ಟ್‌ ಗೆ ಎಷ್ಟು ಹಣ ಪಡೆಯಾತ್ತಾರೆ ಗೊತ್ತಾ?

in ಕನ್ನಡ ಮಾಹಿತಿ/ಕ್ರೀಡೆ 89 views

ಕಿಂಗ್ ಕೊಹ್ಲಿ ಭಾರತ ತಂಡದ ಮೋಸ್ಟ್ ಅಗ್ರೆಸಿವ್ ನಾಯಕ. ಕೊಹ್ಲಿ ಕಣಕ್ಕಿಳಿದರೆ ಒಂದಲ್ಲ ಒಂದು ದಾಖಲೆಗಳು ಬರದೇ ಹಿಂದಿರುಗುತ್ತಾರೆ ಎನ್ನುವ ಮಾತುಗಳಿವೆ. ವಿಶ್ವದ ನಂಬರ್ ಒನ್ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ ಆಟಿಟ್ಯೂಡ್, ಸ್ಟೈಲಿಶ್ ಮತ್ತು ಅಗ್ರೆಸಿವ್ ಕ್ಯಾಪ್ಟನ್ ಸಿಯಿಂದ,ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ! ದಿನದಿಂದ ದಿನಕ್ಕೆ ವಿರಾಟ್ ಕೊಹ್ಲಿ ಅವರು ಲೆಜೆಂಡರಿ ಬ್ಯಾಟ್ಸ್ ಮನ್ ಗಳ ದಾಖಲೆಗಳನ್ನು ನುಚ್ಚುನೂರು ಮಾಡುತ್ತಿದ್ದಾರೆ.ಇನ್ನು ಕೊಹ್ಲಿ ಕ್ರೀಸ್ ನಲ್ಲಿ ಇದ್ದರೆ ಬೌಲರ್ಗಳ ಎದೆಯಲ್ಲಿ ನಡುಕ ಶುರು ಆಗುವುದಂತೂ ಕಟ್ಟಿಟ್ಟ ಬುತ್ತಿ ! ದಾಖಲೆಗಳ ಸರದಾರ ಎಂದೆನಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಮತ್ತೊಂದು ದಾಖಲೆ ಬರೆದಿದ್ದಾರೆ ! ಭಾರತದ ಕ್ರಿಕೇಟ್ ಜಗತ್ತಿನ ರನ್ ಮಿಷನ್ ವಿರಾಟ್ ಕೊಹ್ಲಿ ಅವರು ತಮ್ಮ ಒಂದು ಇನ್‍ಸ್ಟಾಗ್ರಾಮ್ ಪೋಸ್ಟ್ ಗೆ ಬರೋಬ್ಬರಿ 82,43,400 ರೂ. ಪಡೆಯುತ್ತಿದ್ದಾರೆ. ಈ ಮೂಲಕ ಭಾರತದ ಪರ ಅತ್ಯಧಿಕ ಮೊತ್ತ ಪಡೆಯುವ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

Advertisement

 

Advertisement

Advertisement

ಹಾವರ್ ಎಚ್ ಕ್ಯೂ ಡಾಟ್ ಕಾಮ್ ಎಂಬುವಂತಹ ಜಾಗತಿಕ ಸಂಸ್ಥೆಯೊಂದು ಸಮೀಕ್ಷೆಯನ್ನು ನಡೆಸಿ ಈ ರೀತಿಯಾದ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಫೇಸ್‍ಬುಕ್ ಮಾಲೀಕತ್ವದ ಇನ್‍ಸ್ಟಾಗ್ರಾಮ್ ಸಿರಿವಂತ ಆಟಗಾರರ ಈ ಪಟ್ಟಿಯಲ್ಲಿ ಇರುತ್ತಾರೆ. ಈ ಸಮೀಕ್ಷಾ ವರದಿಯಲ್ಲಿ ವಿಶ್ವದ ವಿವಿಧ ಕ್ರೀಡಾಪಟುಗಳ ಹೆಸರು ಹೊಂದಿದ್ದು, ಭಾರತದ ಹೆಮ್ಮೆಯ ನಾಯಕ ಕಿಂಗ್ ಕೊಹ್ಲಿ ಅವರು 17ನೇ ಸ್ಥಾನ ಪಡೆದಿದ್ದಾರೆ.

Advertisement

 

ಇನ್ನು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು, ಪೋರ್ಚುಗಲ್ ನ ಫುಟ್ಬಾಲ್ ಆಟಗಾರ ಹಾಗೂ ತಂಡದ ನಾಯಕರಾದ ಕ್ರಿಸ್ಟಿಯನೊ ರೊನಾಲ್ಡೊ. ಇವರು ಒಂದು ಪೋಸ್ಟ್ ಗೆ ಬರೋಬ್ಬರಿ 5 ಕೋಟಿ ರೂ. ಗಳನ್ನು ಪಡೆಯುತ್ತಾರೆ. ನಂತರ ಸ್ಥಾನದಲ್ಲಿ ಬ್ರೆಜಿಲ್ ನ ಸ್ಟಾರ್ ಆಟಗಾರ ನೇಮರ್ ಹಾಗೂ ಅರ್ಜೆಂಟೆನಾ ತಂಡದ ಮೆಸ್ಸಿ ಕ್ರಮವಾಗಿ 4,12,23,000 ಕೋಟಿ ರೂ. ಹಾಗೂ 3,43,52,500 ಕೋಟಿ ರೂ. ಗಳನ್ನು ಪ್ರತಿ ಪೋಸ್ಟ್ ಗೆ ಪಡೆಯುತ್ತಾರೆ.

 

ಇನ್ನು ಹಣ ಹೇಗೆ ಲಭಿಸುತ್ತದೆ ಎಂದರೆ ಯಾವುದೇ ಸ್ಟಾರ್ ಆಟಗಾರ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ್ದರೆ ಅವರಿಗೆ ವಿವಿಧ ಕಂಪೆನಿಗಳು ತಮ್ಮ ಸಂಸ್ಥೆಯ ಪರ ರಾಯಭಾರಿಯಾಗಿ ನೇಮಿಸಿಕೊಳ್ಳುತ್ತದೆ. ಇದರಂತೆ ಆ ಬ್ರಾಂಡ್ ಗೆ ಸಂಬಂಧಿಸಿದ ವಸ್ತುಗಳ ಪ್ರಚಾರ ಮಾಡಲು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ವೇಳೆ ಸಂಸ್ಥೆಯ ಉತ್ಪನ್ನಗಳು ಬಹುಬೇಗ ಹೆಚ್ಚಿನ ಮಂದಿಯನ್ನು ತಲುಪುತ್ತದೆ. ಸದ್ಯ ಕೊಹ್ಲಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ 2.32 ಕೋಟಿ ಮಂದಿ ಹಿಂಬಾಲಕರನ್ನು ಹೊಂದಿದ್ದು ಒಂದು ಪೋಸ್ಟ್ ಗೆ 82 ಲಕ್ಷ ರೂ. ಪಡೆಯುತ್ತಾರೆ.

Advertisement
Share this on...