‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್ ಬದಲಿಗೆ ರಾಜ್​ಕುಮಾರ್ ನಟಿಸಬೇಕಿದ್ದ ವಿಷಯ ನಿಮಗೆ ಗೊತ್ತಾ…?

in ಸಿನಿಮಾ 291 views

ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅಭಿನಯದ ಮೊದಲ ಸಿನಿಮಾ ‘ನಾಗರಹಾವು’. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಸಿನಿಮಾ 1972 ರಲ್ಲಿ ಬಿಡುಗಡೆಯಾಗಿ ವಿಷ್ಣುವರ್ಧನ್ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತು. ಈ ಸಿನಿಮಾ ತ.ರಾ. ಸುಬ್ಬರಾವ್ ಅವರ ‘ನಾಗರಹಾವು’, ‘ಒಂದು ಗಂಡು ಎರಡು ಹೆಣ್ಣು’ ಹಾಗೂ ‘ಸರ್ಪ ಮತ್ಸರ’ ಪುಸ್ತಕ ಆಧರಿಸಿ ತೆಗೆದ ಸಿನಿಮಾ.ಈ ಸಿನಿಮಾದಲ್ಲಿ ಮೊದಲು ಡಾ. ರಾಜ್​​ಕುಮಾರ್ ನಟಿಸಬೇಕಿತ್ತಂತೆ. ಚಿತ್ರದಲ್ಲಿ ರಾಜ್​ಕುಮಾರ್ ನಟಿಸಬೇಕೆನ್ನುವುದು ತ.ರಾ.ಸು ಅವರ ಆಸೆಯಾಗಿತ್ತಂತೆ. ಇದರ ಬಗ್ಗೆ ವಿವರ ಇಲ್ಲಿದೆ. 1966 ರಲ್ಲಿ ಕೆ.ಎಸ್​​​​. ಎಲ್​ ಸ್ವಾಮಿ ಅವರು ‘ತೂಗುದೀಪ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದರು. ಆ ಚಿತ್ರದ ನಂತರ ಮತ್ತೊಂದು ಒಳ್ಳೆ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಉದ್ಧೇಶದಿಂದ ತ.ರಾ.ಸು ಅವರ ಬಳಿ ಮಾತನಾಡಿದಾಗ ಈ ಚಿತ್ರ ಮಾಡುವುದಾದರೆ ಡಾ. ರಾಜ್​​ಕುಮಾರ್ ಅವರೇ ನಾಯಕರಾಗಬೇಕು ಎಂದು ಷರತ್ತು ವಿಧಿಸಿದ್ದಾರೆ. ಎಲ್ಲಾ ಓಕೆ ಆದರೂ ನಿರ್ಮಾಪಕರು ಮುಂದೆ ಬರದ ಕಾರಣ ಈ ಚಿತ್ರ ಮಾಡಲಾಗಲಿಲ್ಲ.

Advertisement

 

Advertisement

Advertisement

ಕೆಲವು ವರ್ಷಗಳ ನಂತರ ಮೈಸೂರಿನ ನಿರ್ಮಾಪಕರೊಬ್ಬರು ರಾಜ್​​​​​ಕುಮಾರ್ ಅವರ ಸಿನಿಮಾ ಮಾಡುವ ಆಸೆಯಿಂದ ಪುಟ್ಟಣ್ಣ ಕಣಗಾಲ್ ಅವರ ಬಳಿ ಬಂದು ಒಂದು ಸಿನಿಮಾ ಮಾಡಿಕೊಡಿ ಎಂದು ಕೇಳಿದ್ದಾರೆ. ಆಗ ‘ಸಾಕ್ಷ್ಯಾತ್ಕಾರ’ ಚಿತ್ರ ಮಾಡುತ್ತಿದ್ದ ಪುಟ್ಟಣ್ಣ ಕಣಗಾಲ್​​​, ರಾಜ್​ಕುಮಾರ್ ನಾಯಕ ಎಂದರೆ ಒಳ್ಳೆ ಕಥೆಯನ್ನೇ ಮಾಡಬೇಕು ಎಂದುಕೊಂಡು ತ.ರಾ.ಸು ಅವರ ಇದೇ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Advertisement

 

ಇನ್ನು ತಮ್ಮ ಚಿತ್ರಕ್ಕೆ ರಾಜ್​ಕುಮಾರ್ ಅವರೇ ನಾಯಕನಾಗಬೇಕು ಎಂದು ತ.ರಾ.ಸು ಅವರು ಆಸೆ ಪಡಲು ಒಂದು ಕಾರಣವಿದೆ. ತ.ರಾ.ಸು ಅವರಿಗೆ ಪರಿಚಯವಿದ್ದ ಚಿತ್ರ ಕಲಾಕಾರ ಹಾಗೂ ಅವರ ಗುರುಗಳ ನಡುವೆ ಬಹಳ ಬಾಂಧವ್ಯ ‘ನಾಗರಹಾವು’ ಕಥೆ ಬರೆಯಲು ಸ್ಫೂರ್ತಿಯಂತೆ. ಆದರೆ ರಾಮಾಚಾರಿ ಅವರ ಗುಣಕ್ಕೆ ತ.ರಾ.ಸು ಅವರು ತಮ್ಮ ಬಾಲ್ಯ ಹಾಗೂ ಯೌವ್ವನದಲ್ಲಿದ್ದ ಗುಣಗಳನ್ನು ತುಂಬಿದ್ಧಾರೆ. ಈ ಸಿನಿಮಾ ಕಥೆಯಾಗಿ ಹೊರಬರಬೇಕಾದರೆ ತನ್ನದೇ ಪಾತ್ರ ತೆರೆ ಮೇಲೆ ಹೇಗೆ ಬರಲಿದೆ ನೋಡಬೇಕು, ಹಾಗೂ ಆ ಪಾತ್ರವನ್ನು ನಿಭಾಯಿಸಲು ರಾಜ್​​ಕುಮಾರ್ ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂಬ ಭಾವ ಅವರ ಮನಸ್ಸಿನಲ್ಲಿ ಮೂಡಿದೆ. ಅದರಂತೆ ಎಲ್ಲಾ ಫೈನಲ್ ಆಗಿ ರಾಮಾಚಾರಿ ಪಾತ್ರಕ್ಕೆ ರಾಜ್​ಕುಮಾರ್, ಮಾರ್ಗರೇಟ್ ಪಾತ್ರಕ್ಕೆ ಜಯಂತಿ ಹಾಗೂ ಅಲಮೇಲು ಪಾತ್ರಕ್ಕೆ ಕಲ್ಪನಾ ಅವರನ್ನು ಆಯ್ಕೆ ಮಾಡಿದ್ದಾರೆ.

 

ಪುಟ್ಟಣ್ಣ ಕಣಗಾಲ್ ಅವರಿಗೆ ಆಶ್ರಯ ಬೇಕು, ಆದ್ದರಿಂದ ಅವರು ರಾಜ್​​​ಕುಮಾರ್ ಹಿಂದೆ ಹೋಗುತ್ತಿದ್ದಾರೆ ಎಂದು ಆ ಸಮಯದಲ್ಲಿ ಅನೇಕರು ಪುಟ್ಟಣ್ಣ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿದ್ದರಿಂದ ಪುಟ್ಟಣ್ಣ ಅವರ ಮನಸಿಗೆ ನೋವಾಗಿ ಇನ್ಮುಂದೆ ನಾನು ಡಾ. ರಾಜ್​ಕುಮಾರ್ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ನಿರ್ಧರಿಸಿದ್ಧಾರೆ. ಅದೇ ವೇಳೆ ಎನ್​. ವೀರಾಸ್ವಾಮಿ ಅವರು ಸಿನಿಮಾವೊಂದರನ್ನು ಮಾಡಲು ಯೋಚಿಸುತ್ತಿದ್ದಾಗ ಈ ಮೊದಲೇ ನಿರ್ಧರಿಸಿದ್ದ ನಾಗರಹಾವು ಕಥೆಯನ್ನೇ ವಿಷ್ಣುವರ್ಧನ್​​ ಅವರನ್ನು ನಾಯಕನಾಗಿ ಪರಿಚಯಿಸಿ ಸಿನಿಮಾ ಮಾಡಿದ್ದಾರೆ. ಮೊದಲೇ ಕಥೆಗೆ ಅನುಮತಿ ನೀಡಿದ್ದರಿಂದ ತರಾಸು ಅವರು ಕೂಡಾ ನಾಯಕ ಬದಲಾದರೂ ಏನೂ ಮಾತನಾಡಲಿಲ್ಲ.

 

ಆದರೆ ಸಿನಿಮಾ ಬಿಡುಗಡೆಯಾದಾಗ ಪರ, ವಿರೋಧ ಚರ್ಚೆಗಳು ಆರಂಭವಾಗಿದೆ. ತರಾಸು ಅವರು ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದಾಗ ಇದಕ್ಕಿಂತ ಒಳ್ಳೆ ಚಿತ್ರ ಬೇಕೆ ಎಂದು ತರಾಸು ಅವರನ್ನು ಎಷ್ಟೋ ಮಂದಿ ಟೀಕಿಸಿದ್ದರಂತೆ. ಡಾ. ರಾಜ್​​ಕುಮಾರ್ ಅವರನ್ನು ಪಾತ್ರದಲ್ಲಿ ನೋಡಲಾಗಲಿಲ್ಲವಲ್ಲ ಎಂದು ಅವರ ಅಭಿಮಾನಿಗಳು ಬೇಸರಗೊಂಡರೆ, ಡಾ. ವಿಷ್ಣುವರ್ಧನ್ ಅವರಂತ ಮಹಾನ್ ನಟನನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಪುಟ್ಟಣ್ಣ ಅವರಿಗೆ ವಿಷ್ಣುವರ್ಧನ್ ಅಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಹಾಗೂ ಡಾ. ವಿಷ್ಣುವರ್ಧನ್ ಅವರ ಪಾತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಎಂದೆಂದಿಗೂ ಅಜರಾಮರ

Advertisement
Share this on...