ಸಾವು-ಬದುಕಿನ ಜೊತೆ ಹೋರಾಡುತ್ತಿರುವ ಕನ್ನಡದ ನಟ-ವಿಶ್ವನಾಥ್ ರಿಗೆ ಸಹಾಯ ಹಸ್ತ ಚಾಚಬೇಕಿದೆ

in ಸಿನಿಮಾ 204 views

ಪಡುವಾರಹಳ್ಳಿ ಪಾಂಡವರು ,ಪುಟ್ಟಣ್ಣ ಕಣಗಾಲರ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುವ ಮುಖೇನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಬೆಳಕಿಗೆ ಬಂದ ವಿಶ್ವನಾಥ್‌, ನಂತರ ದಿನಗಳಲ್ಲಿ ವರನಟ ಡಾ.ರಾಜ್‌ಕುಮಾರ್ ನಟಿಸಿದ ಚಲಿಸುವ ಮೊಡಗಳು ಆದಿಯಾಗಿ ಐದು ಸಿನಿಮಾಗಳಲ್ಲಿ ಡಾ,ರಾಜ್‌ಕುಮಾರ್ ಎದುರು ಸರಿಸಮನಾಗಿ ನಟಿಸಿ ರಾಜಕುಮಾರರಿಂದ ಮೆಚ್ಚುಗೆ ಪಡೆದ ನಟ. ನಂತರದ ದಿನಗಳಲ್ಲಿ ತಮಿಳಿನಲ್ಲಿ ಕೆ.ಬಾಲಚಂದರ್ ಅವರ ಸಿನಿಮಾಗಳಲ್ಲಿ ನಟಿಸಿ, ನಂತರ ತೆಲುಗು ಮತ್ತು ಹಿಂದಿಯ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮರ ಮೊದಲ ತೆಲುಗು ನಿರ್ದೇಶನದ ನಾಗಾರ್ಜುನ ನಟಿಸಿರುವ ಭಾರೀ ಯಶಸ್ಸುಗೊಂಡ ‘ಶಿವ’ ದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದುರು. ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ ವಿಶ್ವನಾಥ್ ನಂತರದ ದಿನಗಳಲ್ಲಿ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು.
ಪುನೀತ್ ರಾಜ್ಕುಮಾರ್ ನಟಿಸಿದ ‘ವಂಶಿ’ ಯಲ್ಲಿ ಕೂಡ ವಿಶ್ವನಾಥ್ ನಟಿಸಿದ್ದರು’ ನಂತರದ ದಿನಗಳಲ್ಲಿ ಅವಕಾಶಗಳು ಇಲ್ಲದೆ ‘ಕೆಲಸವಿಲ್ಲದೆ ಕೂತ ವಿಶ್ವನಾಥ್ ಕಳೆದ ವರ್ಷವಷ್ಟೆ ‘ಸಹಿಷ್ಣು’ ಎಂಬ ಪ್ರಯೊಗಾತ್ಮಕ ಸಿನಿಮಾದಲ್ಲಿ ನಟಿಸಿದ್ದರು .ವಿಶ್ವನಾಥ್ ಜಗ್ಗೇಶ್ ಅಭಿನಯದ ‘ಜಿತೇಂದ್ರ’ ಸಿನಿಮಾವನ್ನ ನಿರ್ದೇಶನ ಮಾಡಿದ್ದರು ,ಈ ಸಿನಿಮಾದ ನಿರ್ಮಾಪಕರು ಹೆ.ಡಿ .ಕುಮಾರಸ್ವಾಮಿ.

Advertisement

Advertisement

ಪ್ರಸ್ತುತ ವಿಶ್ವನಾಥ್ ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು ಕಾಲಿನ ಆಪರೇಷನ್ ಕೂಡ ಇತ್ತಿಚೆಗೆ ಆಗಿದ್ದು ವಿಜಯನಗರದ ಪೈಪ್‌ಲೈನ್ ರಸ್ತೆಯಲ್ಲಿರುವ ಬಿ.ಜಿ.ಎಸ್ ಆಸ್ಪತ್ರೆಯಲ್ಲಿ ಸುಮಾರು ಹದಿನೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ,ಆಸ್ಪತ್ರೆಯ ಚಿಕಿತ್ಸೆಗೆ ಸಾಕಷ್ಟು ಹಣದ ಅಗತ್ಯತೆಯಿದೆ. ಹೀಗಾಗಿ ಕನ್ನಡಚಿತ್ರರಂಗದ ನಟರು ಹಾಗೂ ಕನ್ನಡದ ಪ್ರೇಕ್ಷಕ ಪ್ರಭುಗಳಲ್ಲಿ ಸಹಾಯ ಮಾಡುವಂತೆ ಕೋರುತ್ತಿದ್ದಾರೆ.

Advertisement

ಕನ್ನಡ ಚಿತ್ರರಂಗದ ಸಹೃದಯರು ಮತ್ತು ದಾನಿಗಳು ಸಹಾಯಮಾಡಬೇಕಾಗಿ ವಿನಂತಿ. ಹಿರಿಯ ಕಲಾವಿದರಾದ ವಿಶ್ವನಾಥ್ ರಿಗೆ ಸಹಾಯ ಮಾಡಲಿಚ್ಚಿಸುವವರು ಅವರ ಬ್ಯಾಂಕಿನ ಖಾತೆಯ ವಿವರ ಕೆಳಗಿನಂತಿದೆ ದಯಾಮಾಡಿ ತಮ್ಮ ಸಹಾಯ ಹಸ್ತವನ್ನ ಚಾಚಿ
ವಿಶ್ವನಾಥ್‌ ಅವರ ಖಾತೆ ವಿವರ–

Advertisement

ಕೆ.ವಿಶ್ವನಾಥ್ A/C No:0442010062749
IFSC Code: 0000440
Syndicate Bank
ವಿಶ್ವನಾಥ್ ಅವರ ಮೋಬೈಲ್ ಸಂಖ್ಯೆ: 8792744142

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...