ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ಯಾರಾ ಸ್ವಿಮ್ಮರ್​​…ಈ ಯುವಕ ಸಿನಿಮಾವೊಂದರ ಹೀರೋ ಕೂಡಾ ಹೌದು..!

in ಕನ್ನಡ ಮಾಹಿತಿ 31 views

ಸಾಧನೆ ಎಂಬುದು ಎಲ್ಲರಿಗೂ ಒಲಿಯುವುದಿಲ್ಲ. ನಿರಂತರ ಶ್ರಮ, ಛಲ, ಅಭ್ಯಾಸದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ. ಇನ್ನು ಸಾಧನೆ ಮಾಡಲು ಇಂತವರೇ ಆಗಬೇಕು ಎಂದೇನಿಲ್ಲ. ಫಿಟ್​​​​​​​​​​​​​​ ಇರುವವರು ಮಾತ್ರವಲ್ಲ, ವಿಶೇಷ ಚೇತನರೂ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅದು ಯಾವುದೇ ಕ್ಷೇತ್ರವಾಗಿರಬಹುದು. ಕೆ.ಎಸ್​. ವಿಶ್ವಾಸ್​, ಅಂತಾರಾಷ್ಟ್ರೀಯ ಪ್ಯಾರಾ ಸ್ವಿಮ್ಮರ್. ಸ್ವಿಮ್ಮಿಂಗ್​​​​​​​​​​​ ಪ್ರಮುಖವಾಗಿ ಬೇಕಿರುವುದು ಕೈ ಹಾಗೂ ಕಾಲುಗಳು. ಆದರೆ ವಿಶ್ವಾಸ್ ಅವರಿಗೆ ಎರಡೂ ಕೈಗಳಿಲ್ಲ. 10 ವರ್ಷದವರಿದ್ದಾಗ ವಿದ್ಯುತ್ ಅಪಘಾತದಿಂದ ಎರಡೂ ಕೈಗಳನ್ನು ಕಳೆದುಕೊಂಡ ವಿಶ್ವಾಸ್ ಎರಡು ತಿಂಗಳ ಕಾಲ ಕೋಮಾದಲ್ಲಿದ್ದರು. ಜೀವ ಏನೋ ಉಳಿಯಿತು. ಆದರೆ ಬದುಕು…?

Advertisement

 

Advertisement

Advertisement

ವಿಶ್ವಾಸ್​​​​​​​​ ಧೈರ್ಯಗೆಡಲಿಲ್ಲ. ತಮಗಿದ್ದ ಅಂಗವೈಕಲ್ಯವನ್ನೇ ಉಪಯೋಗಿಸಿಕೊಂಡು ಸ್ವಿಮ್ಮಿಂಗ್​​ನಲ್ಲಿ ಸಾಧನೆ ಮಾಡಿದರು. ರಾಜ್ಯಮಟ್ಟ, ರಾಷ್ಟ್ರೀಯ ಮಟ್ಟ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಬಾಚಿದರು.ವಿಶ್ವಾಸ್ ಈಗ ದಾಂಪತ್ಯ ಜೀವನಕ್ಕೂ ಕಾಲಿರಿಸಿದ್ದಾರೆ. ಮೇ 10 ರಂದು ಲಾಕ್​​ಡೌನ್ ಸಮಯದಲ್ಲಿ ವಿಶ್ವಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಸಂಗಾತಿಗೆ ವಿಶ್ವಾಸ್ ಕಾಲಿನಲ್ಲೇ ಮಾಂಗಲ್ಯ ಕಟ್ಟಿ, ಹಣೆಗೆ ಕುಂಕುಮ ಇಟ್ಟಿದ್ದಾರೆ. ವಿಶ್ವಾಸ್ ಅವರ ಮದುವೆ ಫೋಟೋಗಳು ವೈರಲ್ ಆಗುತ್ತಿವೆ. ವಿಶ್ವಾಸ್​​​​ಗೆ ಸ್ನೇಹಿತರು ಶುಭ ಕೋರಿದ್ದಾರೆ.

Advertisement

 

ಸದ್ಯಕ್ಕೆ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವಾಸ್, ‘ಅರಬ್ಬೀ’ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಇದು ವಿಶ್ವಾಸ್ ಜೀವನದ ನೈಜ ಘಟನೆಯಾಗಿದ್ದು ಜೋಡಿಹಕ್ಕಿ ಖ್ಯಾತಿಯ ಚೈತ್ರಾ ರಾವ್ ವಿಶ್ವಾಸ್​​ಗೆ ಜೊತೆಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕದ ಸಿಂಗಂ ಅಣ್ಣಾಮಲೈ ಕೂಡಾ ನಟಿಸಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಶ್ವಾಸ್ ಮತ್ತಷ್ಟು ಸಾಧನೆ ಮಾಡಲಿ, ಅವರ ವೈವಾಹಿಕ ಜೀವನ ಸಂತೋಷದಿಂದ ಕೂಡಿರಲೇ ಎಂಬುದೇ ನಮ್ಮ ಹಾರೈಕೆ.

Advertisement
Share this on...