ಈ ರಾಶಿಯವರಿಗೆ ಆರ್ಭಟಿಸುವ ಧೈರ್ಯವಿರುತ್ತದೆ, ಆದರೆ …..?

in ಜ್ಯೋತಿಷ್ಯ 1,116 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ದ್ವಿತೀಯ ತಿಥಿ, ರೇವತಿ   ನಕ್ಷತ್ರ, ವ್ಯಾಘಟ ಯೋಗ,  ತುಲಾ ಕರಣ, ಅಕ್ಟೋಬರ್ 03  ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ  ಬೆಳಗ್ಗೆ ಬಹುಬೇಗ ಬರುವುದರಿಂದ ಉಲ್ಲೇಖ ಮಾಡಿಲ್ಲ.

Advertisement

ವೃಶ್ಚಿಕ ರಾಶಿಯಲ್ಲಿ ಕೇತು ಕುಳಿತಿರುವುದು ವೃಶ್ಚಿಕ ರಾಶಿಯನ್ನು  ಜಲರಾಶಿ ಎಂದು ಕೂಡ ಕರೆಯುತ್ತಾರೆ. ವೃಶ್ಚಿಕ ರಾಶಿಯನ್ನು ಒಳಗಿನ ನಾಯಕ ಎಂದು ಕರೆಯಲಾಗುತ್ತದೆ. ಹೊರಗಿನ ನಾಯಕ ಮೇಷ ರಾಶಿ ಉದಾಹರಣೆಯೆಂದರೆ ವಿರಾಟ ಪರ್ವದಲ್ಲಿ ಬರುವ ವಿರಾಟ ರಾಜನ ಮಗ ಉತ್ತರ ಕುಮಾರ. ಈ ಉತ್ತರ ಕುಮಾರನಿಗೆ ಒಳಗಡೆ ಧೈರ್ಯವಿರಲಿಲ್ಲ ಮೇಲೆ ಮಾತ್ರ ಧೈರ್ಯದಿಂದ ಇರುವಂತೆ ತೋರಿಸಿಕೊಳ್ಳುತ್ತಿದ್ದ ಇದೇ ಹೊರಗಿನ ನಾಯಕ. ಹೊರಗಡೆ ಆರ್ಭಟಿಸುವ ಧೈರ್ಯವಿರುತ್ತದೆ ಆದರೆ ಒಳಗಡೆ ಅತಿಯಾದ ಭಯವಿರುತ್ತದೆ. ಒಳಗಡೆ ಎಷ್ಟೇ ಶಕ್ತಿ ಇದ್ದರೂ ಕೂಡ ಹೊರಗಡೆ ಅದನ್ನು ತೋರಿಸಲು ಪ್ರಕೃತಿ ಬಿಡುವುದಿಲ್ಲ ಅದಕ್ಕೆ ಉತ್ತಮವಾದ ಉದಾಹರಣೆ ಎಂದರೆ ವೃಶ್ಚಿಕ ಲಗ್ನದಲ್ಲಿ ಜನಿಸಿದಂತಹ ಹನುಮಂತ. ಒಳಗಡೆ ಮಹಾಜ್ಞಾನಿ ಮಹಾತಪಸ್ವಿ ಅದನ್ನು ಎಲ್ಲಿ ಹೇಳಿಕೊಳ್ಳುವುದಿಲ್ಲ ತೋರಿಸುವುದೂ ಇಲ್ಲ. ವೃಶ್ಚಿಕ ರಾಶಿಯಲ್ಲಿ ಕೇತು ಕುಳಿತಿರುವುದರಿಂದ ಕೃಷಿ ವ್ಯವಹಾರದಲ್ಲಿ ಎಳೆದಾಟ,  ಮಿಡಿತಗಳ ಕಾಟವಿರುತ್ತದೆ. ವೃಶ್ಚಿಕ ರಾಶಿಯಲ್ಲಿ ರಾಹು ಕೇತುಗಳು ಉಚ್ಚ ಗತವಾಗಿ ಇರುವುದರಿಂದ ಒಳಗಿನ ದುಷ್ಟ ಇನ್ನಷ್ಟು ದುಷ್ಟ ನಾಗುತ್ತಾನೆ. ಒಳಗಿನ ಶತ್ರುಗಳು ತುಂಬಾ ಹೆಚ್ಚು ಕೇತು ಉಚ್ಚಂಗತ ನಾಗಿರುವುದರಿಂದ ಆಧ್ಯಾತ್ಮಿಕತೆಯ ಪರಾಕಾಷ್ಠತೆ ಎಂದು ಹೇಳಲಾಗುತ್ತದೆ.

Advertisement

Advertisement

ಅಂತರ್ಮುಖಿಯಾಗಿ ಇರುವವರು ಬಹಿರ್ಮುಖಿ ಯಾಗಿ ಕಾಣಿಸಿಕೊಳ್ಳುವುದಿಲ್ಲ ಬಹಿರ್ಮುಖಿವಾಗಿರುವವರು ಅಂತರ್ಮುಖಿಗಳಾಗಿರಲು  ಬಯಸುವುದಿಲ್ಲ. ಕೆಲವೊಂದು ಅಪರೂಪದ ಕಾಂಬಿನೇಷನ್ ನಲ್ಲಿ ಮಾತ್ರ ಇವರು ವಿಸ್ಫೋಟ ಆಗುತ್ತಾರೆ. ಅದರಲ್ಲೂ ವೃಶ್ಚಿಕ ರಾಶಿ ವೃಶ್ಚಿಕ ಲಗ್ನದಲ್ಲಿ ಹುಟ್ಟಿದವರು, ಅದರಲ್ಲೂ ಕೇತುವಿನ ಭಾವದಲ್ಲಿ ಹುಟ್ಟಿದ್ದರೆ ಅವರು ಯಾವಾಗಲೂ ಮನಸ್ಸಿನಲ್ಲಿ  ಲೆಕ್ಕಾಚಾರ ಮಾಡುತ್ತಿರುತ್ತಾರೆ. ಈ ರಾಶಿಯವರಿಗೆ ಅರ್ಧ ಸುಖ ಮಾತ್ರ. ಕರ್ಣ ಕೂಡ ಹಾಗೇ ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರಾಗಿದ್ದು ಎಷ್ಟೇ ಬಲ ಶಕ್ತಿ ಇದ್ದರೂ ಒಳಗಡೆ ಬೇಗುದಿಯಿಂದ  ಬೇಯುತ್ತಿದ್ದರು. ವೃಶ್ಚಿಕ ರಾಶಿಯವರಿಗೆ ಇಷ್ಟು ದಿನ ಬಲಗಳಿಗೆ ಇದ್ದ ದೋಷವನ್ನು ದೂರ ಮಾಡಿಕೊಳ್ಳಲು ರಾಹು ಅನುವು ಮಾಡಿಕೊಡುತ್ತಿದ್ದಾರೆ. ಸಪ್ತಮದಲ್ಲಿ ರಾಹು ಬಲ ಉಚ್ಚಂಗತ .  ಆ ಭಾಗ್ಯಾಧಿಪತಿ ಶುಕ್ರ ನಿಮ್ಮ ಮನೆಯಲ್ಲೇ ಇದ್ದಾನೆ. ರಾಜಕೀಯ,  ಪೊಲೀಸ್,  ರಕ್ಷಣಾ ಇಲಾಖೆ,  ಕಸ್ಟಮ್ಸ್,  ರೆವಿನ್ಯೂ ಡಿಪಾರ್ಟ್ಮೆಂಟ್,  ಈ ಕೆಲಸಗಳಲ್ಲಿ ಇರುವವರಿಗೆ ಸ್ವಲ್ಪ ಒತ್ತಡ ಹೆಚ್ಚಿದ್ದರೂ ಗೆಲುವು ಮಾತ್ರ ಕಟ್ಟಿಟ್ಟ ಬುತ್ತಿ.

Advertisement

ನಿಮ್ಮನ್ನು ಗೆಲುವಿನಿಂದ ತಡೆಯುವ ಶಕ್ತಿ ಯಾರಿಗೂ ಇರುವುದಿಲ್ಲ ಆದರೆ ಇದು ನಿಜವಾ ಇಲ್ಲಾ ಎಂಬ ಭ್ರಮೆಯ ಭಾವದಲ್ಲಿ ರುತ್ತೀರಿ. ಆಕಸ್ಮಿಕವಾಗಿ ಭೂಮಿಯಿಂದ ಲಾಭ ಅಥವಾ ಧನ ಲಾಭವನ್ನು ಪಡೆಯುವ ಸುಯೋಗವಿದೆ. ತುಂಬಾ ಇಷ್ಟಪಟ್ಟು ಕೊಂಡುಕೊಂಡ ಮನೆ ಅಥವಾ ಜಾಗವನ್ನು ಕಳೆದುಕೊಳ್ಳುವ ಸಂಭವವೂ ಕೂಡ ಇದೆ. ವೃಶ್ಚಿಕ ರಾಶ್ಯಾಧಿಪತಿ ಯಾದ ಕುಜ ವಕ್ರವಾಗಿ ದ್ದಾನೆ. ಅಷ್ಟಮಾಧಿಪತಿಯಾದ ಬುಧ ಹನ್ನೆರಡನೇ ಮನೆಯಲ್ಲಿ ಇರುವುದರಿಂದ ಟೆಕ್ನಿಕಲ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಎಂಜಿನಿಯರ್ ಬಿಟೆಕ್,  ಎಂ ಟೆಕ್, ಅಂತಾರಾಷ್ಟ್ರೀಯ ವ್ಯಾಪಾರ ಹೀಗೆ ಮುಂತಾದ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಉತ್ತಮವಾದ ಪ್ರಗತಿಯನ್ನು ಕಾಣುವಂತಹ ಸಂಕಲ್ಪ.  ವೃಶ್ಚಿಕ ರಾಶಿಯವರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಚಂದ್ರ ಸುಖ ಕಾರಕ ಸುಖಕ್ಕೋಸ್ಕರ ದಿನ ಪೂರ್ತಿ ಖರ್ಚು ವೆಚ್ಚಗಳ ಲೆಕ್ಕಾಚಾರದಲ್ಲೇ  ಸಮಯವನ್ನು ಕಳೆದು ಬಿಡುತ್ತೀರಿ.

ವೃಷಭ ರಾಶಿ : ಬುಧ ಚೆನ್ನಾಗಿದ್ದಾನೆ ಆದ್ದರಿಂದ ಬುದ್ಧಿಯನ್ನು ಉಪಯೋಗಿಸಿ ಮಾಡಿಸು ಮಾಡುವ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ ಆದರೆ ಅತಿಯಾದ ಪ್ಲಾನಿಂಗ್ ಬೇಡ ಭೂತಕಾಲದ ಬಗ್ಗೆ ಮತ್ತು ಭವಿಷ್ಯತ್ಕಾಲದ ಬಗ್ಗೆ ಚಿಂತಿಸಬೇಡಿ ವರ್ತಮಾನದಲ್ಲಿ ಬದುಕಿ.

ಮಿಥುನ ರಾಶಿ : ಚೆನ್ನಾಗಿದೆ ಬುಧ ಚೆನ್ನಾಗಿ ಇರುವುದರಿಂದ ಯಾರಿಗೂ ಮಾತನ್ನು ಕೊಟ್ಟು ಸಿಕ್ಕಿ ಹಾಕಿಕೊಳ್ಳಬೇಡಿ.

ಕರ್ಕಾಟಕ ರಾಶಿ : ಚೆನ್ನಾಗಿದೆ ಸುಖದ ಸ್ಥಾನದಲ್ಲಿ ಬುಧನಿದ್ದು ರಾಶಿಯ ಅಧಿಪತಿಯಾದಂತಹ ಚಂದ್ರ ಮೀನ ರಾಶಿಯಲ್ಲಿ ರುವುದರಿಂದ ಯಾವುದೋ ಒಂದು ಧನಮೂಲ ಆತ್ಮೀಯರ ಸಹಕಾರದಿಂದ ನಿಮ್ಮ ಸಮಸ್ಯೆಗಳೆಲ್ಲವೂ ದೂರವಾಗುತ್ತವೆ.

ಸಿಂಹ ರಾಶಿ : ವಿಪರೀತವಾದ ಬಲವಂತ ಆಗದ ಕೆಲಸಗಳೆಲ್ಲವೂ ಕೂಡ ಆಗುವಂತಹ ಅದ್ಭುತವಾದ ದಿನ. ಸೋದರಿ ವರ್ಗದಿಂದ ಹೇಳಿಕೆ.

ಕನ್ಯಾ ರಾಶಿ : ಚಂದ್ರ ಬುಧನ ಸಾರದಲ್ಲಿ ರುವುದರಿಂದ ನೀವು ಯಾವಾಗಲೂ ಲೆಕ್ಕಾಚಾರದ ರಾಶಿಯವರು. ತುಂಬಾ ಲೆಕ್ಕಾಚಾರ ಮಾಡಲು ಹೋಗಬೇಡಿ. ಎಲ್ಲವೂ ಚೆನ್ನಾಗಿದೆ ತಕ್ಕಮಟ್ಟಿಗೆ ಊಟ ಬಟ್ಟೆ ಬದುಕು ಚೆನ್ನಾಗಿದೆ.

ತುಲಾ ರಾಶಿ : ನಾಳೆಯ ಲೆಕ್ಕಾಚಾರ  ಮಾಡಿಕೊಂಡು ಕುಳಿತು ಬಿಡುತ್ತೀರಾ ಅದನ್ನು ನಾಳೆಗೆ ಬಿಡಿ ಇಂದಿನ ದಿನವನ್ನು ಎಂಜಾಯ್ ಮಾಡಿ.

ವೃಶ್ಚಿಕ ರಾಶಿ : ವ್ಯವಹಾರ ಹಣಕಾಸು ವಿಚಾರದಲ್ಲಿ ಅದ್ಭುತವಾದ ಅನುಕೂಲಕರವಾದ ದಿನ.

ಧನಸ್ಸು ರಾಶಿ : ಶತ್ರುಗಳಿಂದಲೂ ಅನುಕೂಲವಾಗುವಂತಹ ಸಹಾಯವಾಗುವಂತ ದಿನ.  ನಿಮ್ಮ ಅಡ್ವೈಸ್ ನಿಂದ  ಬೇರೆಯವರಿಗೆ ಅನುಕೂಲವಾಗುವಂತಹ  ದಿನ. ಬುಧ ಉಚ್ಚಂಗತ ಮಕ್ಕಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೀರಿ.  ಮಕ್ಕಳ ಓದಿನ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ಅವರ ಕಡೆ ಗಮನ ಕೊಡಿ.  ಮಕ್ಕಳಿಗೆ ಅವರ ಬಲ ಹೊರ ಬರಲು ಬ್ರಹ್ಮ ಶಂಕರವನ್ನು ತಿನ್ನಿಸಿ.

ಮಕರ ರಾಶಿ : ಭಾಗ್ಯಾಧಿಪತಿ ದಶಮ ಸ್ಥಾನದಲ್ಲಿದ್ದು ಸಪ್ತಮಾಧಿಪತಿ ಭಾಗ್ಯಾಧಿಪತಿಯ ಸಂಕೇತದಲ್ಲಿರುವುದರಿಂದ ಮಾಡುವ ಕೆಲಸಗಳೆಲ್ಲವೂ ಅದ್ಭುತವಾಗಿ ಇರುವಂತಹದ್ದು ಜೊತೆಗೆ ಯೋಜನೆಗೆ ತಕ್ಕಂತೆ ಅದ್ಭುತವಾಗಿ ಫಲ ಕೊಡುವಂತಹ ದಿನ.

ಕುಂಭ ರಾಶಿ : ಪೂರ್ವ ಪುಣ್ಯ ಧಿಪತಿ ಭಾಗ್ಯ ಸ್ಥಾನದಲ್ಲಿದ್ದು ಆ ಭಾಗ್ಯಾಧಿಪತಿ ಅಷ್ಟಮದಲ್ಲಿರುವುದರಿಂದ ಆ ಅಷ್ಟಮಾಧಿಪತಿ ಭಾವದಲ್ಲಿ ಚಂದ್ರ ಇರುವುದರಿಂದ ಸ್ವಲ್ಪ ತಲೆ ಕೆಡಿಸುವುದು ಮನೆ ಮನ ಕೆಡಿಸುವುದು ಮಾತಿನ ಎಳೆದಾಟ ಲೆಕ್ಕಾಚಾರದಲ್ಲಿ ಏರುಪೇರಾಗುವ ಸಂಭವವಿದೆ. ಅಕ್ಕ ತಂಗಿಯರ ಮಕ್ಕಳಿದ್ದರೆ ಎಂಟು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ತಾಂಬೂಲ ಅಥವಾ ಸಿಹಿಯನ್ನು ಕೊಡಿ ಇದರಿಂದ ಒಳ್ಳೆಯದಾಗುತ್ತದೆ. ಗಲಿಬಿಲಿ ಮಾಡಿಕೊಳ್ಳಬೇಡಿ ಹೆಸರು ಬೇಳೆ ಪಾಯಸ ವನ್ನು ಮಾಡಿ ದೇವರಿಗೆ ನೈವೇದ್ಯವಿಟ್ಟು ಅದನ್ನು ಮನೆಯವರೆಲ್ಲರಿಗೂ  ಕೊಟ್ಟು ನೀವು ಕೂಡ ಸೇವಿಸಿ  ಒಳ್ಳೆಯದಾಗುತ್ತದೆ.

ಮೀನ ರಾಶಿ : ಕೊಡುವುದು ತೆಗೆದುಕೊಳ್ಳುವುದರಲ್ಲಿ ಸ್ವಲ್ಪ ಎಚ್ಚರಿಕೆ ಯಾರೂ ನಿಮ್ಮ ತಲೆಯನ್ನು ಕೆಡಿಸುತ್ತಾರೆ. ಷಷ್ಟಾಮಾಧಿಪತಿ ಸಪ್ತಮದಲ್ಲಿ   ಸಪ್ತಮಾಧಿಪತಿ ಅಷ್ಟಮದಲ್ಲಿಇರುವುದರಿಂದ ಯಾವುದೇ ರೀತಿಯ ಇನ್ವೆಸ್ಟ್ ವನ್ನು ಮಾಡಲು ಹೋಗಬೇಡಿ.  ಮಾಡಲೇಬೇಕು ಎಂದಾದರೆ ಬಂಗಾರದ ಮೇಲೆ ಹೂಡಿಕೆ ಮಾಡಿ ಒಳ್ಳೆಯದು.

All Rights reserved Namma  Kannada Entertainment.

Advertisement
Share this on...