ಈ ರೀತಿ ತಲೆ ತೊಳೆದರೆ ನಿಮ್ಮ ಕೂದಲು ಹಾಳಾಗೋದು ಗ್ಯಾರಂಟಿ!

in ಕನ್ನಡ ಆರೋಗ್ಯ 21 views

ಬಹುತೇಕ ಹೆಣ್ಣುಮಕ್ಕಳು ನಾವು ಕೂದಲಿಗೆ ಸರಿಯಾಗಿ ಎಣ್ಣೆ ಹಾಕಿದರೂ, ಶಾಂಪೂ ಬಳಸಿದರೂ, ತಲೆ ತೊಳೆದುಕೊಂಡರೂ, ಕೂದಲು ಉದುರುವುದು ನಿಲ್ಲುತ್ತಿಲ್ಲ ಅನ್ನುತ್ತಾರೆ ಅಥವಾ ಕೂದಲು ಸರಿಯಾಗಿ ಬೆಳೆಯುತ್ತಿಲ್ಲ ಎನ್ನುತ್ತಾರೆ. ಆದರೆ ಇಲ್ಲಿ ನೀವು ಎಷ್ಟು ಬಾರಿ ತೊಳೆದಿದ್ದೀರಿ, ಹಚ್ಚಿದ್ದೀರಿ ಎಂಬುದು ಮುಖ್ಯವಲ್ಲ. ಅದನ್ನು ಯಾವ ರೀತಿ ಬಳಸುತ್ತಿದ್ದೀರಿ ಎಂಬುದು ಮುಖ್ಯ. ಆದ್ದರಿಂದ ಕೂದಲ ಪೋಷಣೆಯ ವಿಚಾರದಲ್ಲಿ ಎಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದು, ನೀವಿದನ್ನು ಅನುಸರಿಸುವುದರಿಂದ ಖಂಡಿತವಾಗಿ ಸೊಂಪಾದ ಕೂದಲನ್ನು ಪಡೆಯಬಹುದು.

Advertisement

 

Advertisement

Advertisement

 

Advertisement

ಕೂದಲನ್ನು ಪ್ರತಿದಿನ ತೊಳೆಯಬೇಡಿ
ಕೂದಲನ್ನು ಆಗಾಗ್ಗೆ ತೊಳೆಯುವುದು ನಿಮ್ಮ ಕೂದಲಿಗೆ ಹಾನಿಕಾರಕ ಎಂಬುದನ್ನು ಮರೆಯಬೇಡಿ. ಇದು ನಿಮ್ಮ ನೆತ್ತಿಯ ಮೇಲಿರುವ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ. ನಿಮ್ಮ ಕೂದಲನ್ನು ಒಣಗಿಸುತ್ತದೆ. ಕವಲೊಡೆಯುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ಕೂದಲನ್ನು ಪ್ರತಿದಿನ ತೊಳೆಯಬೇಡಿ. ತೊಳೆಯುವ ಅಗತ್ಯವಿರುವಾಗ ಮಾತ್ರ ತೊಳೆಯಿರಿ. ಸುಮಾರು 2 ದಿನಗಳ ಅಂತರವನ್ನು ನೀಡಿ. ಆದರೆ ಅದನ್ನು 5 ದಿನಗಳಿಗಿಂತ ಹೆಚ್ಚು ಕಾಲ ಬಿಟ್ಟು ತೊಳೆಯಬೇಡಿ.

 

 

ಹೆಚ್ಚು ಬಿಸಿನೀರನ್ನು ಬಳಸಬೇಡಿ
ನಿಮ್ಮ ಕೂದಲನ್ನು ತೊಳೆಯಲು ಹೆಚ್ಚು ಬಿಸಿನೀರನ್ನು ಬಳಸುವುದರಿಂದ ಇದು ನಿಮ್ಮ ಕೂದಲಿನಲ್ಲಿರುವ ಎಣ್ಣೆಯನ್ನು ತೆಗೆದು, ನಿರ್ಜಲೀಕರಣಗೊಳಿಸುತ್ತದೆ. ಇದು ಕೂದಲು ಒಡೆಯುವಿಕೆ ಕಾರಣವಾಗುತ್ತದೆ.

 

 

ಶಾಂಪೂ ಯಾವಾಗ ಹಚ್ಚಬೇಕು?
ಕೂದಲನ್ನು ಚೆನ್ನಾಗಿ ತೊಳೆದು, ನಂತರ ಶಾಂಪೂ ಹಚ್ಚುವುದು ಒಳ್ಳೆಯದು. ಶಾಂಪೂ ಹಚ್ಚುವ ಮೊದಲು ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಲು ಕನಿಷ್ಠ 30 ಸೆಕೆಂಡುಗಳನ್ನು ತೆಗೆದುಕೊಳ್ಳಬೇಕು. ಇದರಿಂದ ನಿಮ್ಮ ಕೂದಲ ಕೊಳೆ ಹೋಗಿ ಸ್ವಚ್ಛವಾಗುತ್ತದೆ.

 

 

 

ಒಂದೇ ಸಮಯಕ್ಕೆ 2 ಬಾರಿ ತೊಳೆಯಿರಿ
ಕೆಲವರು ಕೂದಲು ತೊಳೆಯುವಾಗ ಎರಡು ಬಾರಿ ಶಾಂಪೂ ಹಚ್ಚಿ ತೊಳೆಯುತ್ತಾರೆ. ಇದು ಒಳ್ಳೆಯದೇ. ಆದರೂ ಇದು ನಿಮ್ಮ ಕೂದಲಿನ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮದು ಎಣ್ಣೆಯುಕ್ತ ಕೂದಲಾಗಿದ್ದರೆ ಎರಡೆರೆಡು ಬಾರಿ ಶಾಂಪೂ ಹಚ್ಚುವುದು ಒಳ್ಳೆಯದು. ಇದರಿಂದ ಕೂದಲು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.

 

 

ಒಂದೇ ತರಹದ ಶಾಂಪೂ ಬಳಸಿ
ಪದೇ ಪದೇ ಶಾಂಪೂ ಬದಲಾಯಿಸಬೇಡಿ. ಅಗತ್ಯವಿದ್ದರೆ ಮಾತ್ರ ಬದಲಾಯಿಸಿ. ಕೆಲವರಿಗೆ ಒಂದೇ ತರಹದ ಶಾಂಪೂ ಉಪಯೋಗಿಸಿ, ತಕ್ಷಣ ಬೇರೆ ಬ್ರಾಂಡ್ ಉಪಯೋಗಿಸುವುದರಿಂದಲೂ ಕೂದಲು ಉದುರಬಹುದು. ಆದ್ದರಿಂದ ಆದಷ್ಟು ನಿಮ್ಮ ಕೂದಲಿಗೆ ಹೊಂದಿಕೊಂಡಂತಹ ಒಂದೇ ಶಾಂಪೂ ಬಳಸಿ.

Advertisement
Share this on...