ಯಾವ ಆಟಗಾರರಿಗೂ ಕಡಿಮೆ ಇಲ್ಲ ಈ ಶ್ವಾನಗಳು ವಾಲಿಬಾಲ್ ಆಡಿರುವ ವಿಡಿಯೋ ನೋಡಿ

in ಮನರಂಜನೆ 77 views

ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಮೊದಲೆಲ್ಲಾ ನಾಯಿಯನ್ನು ಮನೆ ಕಾಯುವ ಉದ್ದೇಶದಿಂದ ಮಾತ್ರ ಸಾಕುತ್ತಿದ್ದರು. ಆದರೂ ಮಾಲೀಕರು ಆ ನಾಯಿಗಳನ್ನು ತಮ್ಮ ಮನೆಯ ಸದಸ್ಯನಂತೆ ಕಾಣುತ್ತಿದ್ದರು. ಆಧುನಿಕ ಯುಗದಲ್ಲಿ ನಾಯಿಗಳು ಮನೆ ಕಾಯಲು ಮಾತ್ರವಲ್ಲ, ದೇಶ ಕಾಯಲು, ಅಪರಾಧಿಗಳನ್ನು ಪತ್ತೆ ಹತ್ತಲು, ಬಾಂಬ್​ ಪತ್ತೆ ಮಾಡಲು ಸಹಾಯ ಮಾಡುತ್ತಿವೆ. ಪೊಲೀಸ್ ಇಲಾಖೆಯಲ್ಲಿ ಶ್ವಾನದಳವಿದ್ದು ಬಹಳಷ್ಟು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಪೊಲೀಸ್ ಇಲಾಖೆಗೆ ಸಹಾಯ ಮಾಡಿದೆ. ಎಷ್ಟೋ ಬಾರಿ ಬಾಂಬ್​​​​​​​​ ಪತ್ತೆ ಹಚ್ಚಿ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಿವೆ. ಕೆಲವರು ನಾಯಿಗಳನ್ನು ಫ್ಯಾಷನ್​​ಗಾಗಿ ಸಾಕುತ್ತಾರೆ. ಇವುಗಳಿಗಾಗಿಯೇ ಡಾಗ್ ಪಾರ್ಲರ್ ಇದ್ದು ಮುದ್ದಿನ ನಾಯಿಗಳಿಗಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತಾರೆ. ಆಗ್ಗಾಗ್ಗೆ ಏರ್ಪಡಿಸಲಾಗುವ ಡಾಗ್ ಶೋನಲ್ಲಿ ಕೂಡಾ ತಮ್ಮ ಪ್ರೀತಿಯ ನಾಯಿಗಳನ್ನು ಕರೆತಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಕೆಲವರಿಗೆ ಶ್ವಾನಗಳ ಮೇಲೆ ಎಷ್ಟು ಪ್ರೀತಿ ಇರುತ್ತದೆ ಎಂಬುದಕ್ಕೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾದ ಕೋಟಿ ನಾಯಿ ಒಡೆಯ ಸತೀಶ್ ಅವರೇ ಉದಾಹರಣೆ. ಅವರ ಬಳಿ ಕೋಟಿ ರೂಪಾಯಿ ಬೆಲೆ ಬಾಳುವ ನಾಯಿಗಳಿವೆ. ಸತೀಶ್ ಅವರಿಗೆ ಶ್ವಾನಗಳ ಬಗ್ಗೆ ಎಷ್ಟು ಕ್ರೇಜ್ ಇದೆ ಎಂಬುದು ಇದರಿಂದ ತಿಳಿಯುತ್ತದೆ.

Advertisement

Advertisement

ಬಹಳಷ್ಟು ಶ್ವಾನಗಳು ತಮ್ಮ ಒಡೆಯನ ಬೇಸರ ಕಳೆಯುತ್ತವೆ. ಮಾಲೀಕನೊಂದಿಗೆ ಕಷ್ಟ-ಸುಖದಲ್ಲಿ ಭಾಗಿಯಾಗುತ್ತವೆ. ಮಾಲೀಕನ ಮೇಲಿನ ಶ್ವಾನಗಳ ಪ್ರೀತಿ ಬಗ್ಗೆ ನಿಜ ಜೀವನದಲ್ಲಿ ನಡೆದ ಬಹಳಷ್ಟು ಘಟನೆಗಳನ್ನು ಕೇಳಿದ್ದೇವೆ. ಇನ್ನೂ ಕೆಲವು ಶ್ವಾನಗಳು ತಮ್ಮ ಮಾಲೀಕರೊಂದಿಗೆ ಆಟ ಕೂಡಾ ಆಡುತ್ತವೆ. ಲಾಕ್​ಡೌನ್ ಸಮಯದಲ್ಲಿ ಮನೆಯಿಂದ ಹೊರ ಬಾರಲು ಆಗದ ಕೆಲವರು ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆದರು. ಮತ್ತೆ ಕೆಲವರು ಟೈಂ ಪಾಸ್​​​ಗಾಗಿ ಹೊಸ ದಾರಿಯನ್ನು ಕಂಡುಕೊಂಡಿದ್ದರು. ನಾರ್ವೆಯ ವಾಲಿಬಾಲ್ ತಂಡದ ಮೂವರು ಶ್ವಾನದೊಂದಿಗೆ ವಾಲಿಬಾಲ್​ ಆಡಿ ಆ ವಿಡಿಯೋವನ್ನು ಇಂಟರ್​​​ನೆಟ್​ನಲ್ಲಿ ಅಪ್​ಲೋಡ್ ಮಾಡಿದ್ದರು. ಕೈರಾ ಎಂಬ ಈ ನಾಯಿ ವಾಲಿಬಾಲ್ ಆಡುತ್ತಿದ್ದ ವಿಡಿಯೋ ಕೆಲವು ದಿನಗಳ ಹಿಂದೆ ಸಖತ್ ವೈರಲ್ ಆಗಿತ್ತು. ಇದೀಗ ಇಂತದ್ದೇ ಇಂದು ವಿಡಿಯೋ ವೈರಲ್ ಆಗುತ್ತಿದೆ.

Advertisement

 

Advertisement
View this post on Instagram

 

Kiara the volley-dog is back at it again 🤩 @kiarathevolleydog Can you set like Kiara? 🙌 ft. @mathiasberntsen96 & @olimstademilie . . . . #volleyball #volley #dogsofinstagram #dogs #sport #dogoftheday @volleyballworld @beachvolleyballworld @myvolleywood @bouncebeach @kingofthecourtbeach @barstoolsports @espn @sportscenter

A post shared by Beachvolley Vikings (@beachvolleyvikings) on

ಆದರೆ ಈ ಬಾರಿ ವಿದೇಶದಲ್ಲಿ ಅಲ್ಲ, ಕೇರಳದಲ್ಲಿ ಶ್ವಾನವೊಂದು ಮಕ್ಕಳೊಂದಿಗೆ ವಾಲಿಬಾಲ್ ಆಡಿ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಕೂಡಾ ಲಾಕ್​ಡೌನ್ ಸಮಯದಲ್ಲಿ ಸೆರೆ ಹಿಡಿಯಲಾಗಿದ್ದು ಈಗ ವೈರಲ್ ಆಗುತ್ತಿದೆ. ಲಾಕ್​​ಡೌನ್ ವೇಳೆ ಕೇರಳದ ಪಾಲಕ್ಕಾಡ್​​​ನಲ್ಲಿ​​​​ ಮಕ್ಕಳು ಬೇಸರ ಕಳೆಯಲು ತಮ್ಮ ಮನೆ ಬಳಿಯ ಸಣ್ಣ ಕಾಲುವೆಯೊಂದರಲ್ಲಿ ನೆಟ್ ಕಟ್ಟಿ ವಾಲಿಬಾಲ್ ಆಡಿದ್ದಾರೆ. ಈ ಆಟದಲ್ಲಿ ಸೀಜರ್ ಹೆಸರಿನ ಲಾಬ್ರೆಡಾರ್ ನಾಯಿ ಕೂಡಾ ಭಾಗಿಯಾಗಿದೆ. ಸೀಜನ್ ತನ್ನ ಮಾಲೀಕ ಮುಬೀನ್ ಹಾಗೂ ಆತನ ಗೆಳೆಯರೊಂದಿಗೆ ವಾಲಿಬಾಲ್ ಆಡುತ್ತಿರುವ ವಿಡಿಯೋ ಈಗ ಇಂಟರ್​​ನೆಟ್​​ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗಳನ್ನು ನೋಡಿದ ನೆಟಿಜನ್ಸ್ ಈ ಶ್ವಾನಗಳ ಬುದ್ಧಿವಂತಿಕೆಗೆ ಮರುಳಾಗಿದ್ದಾರೆ.

ಪ್ರಾಣಿಗಳೇ ಗುಣದಲಿ ಮೇಲು…ಮಾನವನದಕ್ಕಿಂತ ಕೀಳು…ಎಂದು ಡಾ. ರಾಜ್​ಕುಮಾರ್ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಹಾಡಿದ್ದಾರೆ. ಸಹಾಯ ಮಾಡಿದವರನ್ನು ಮರೆಯುವ ಜನರ ನಡುವೆ ಅನ್ನ ಹಾಕಿ, ಸಾಕಿ ಸಲಹಿದ ಜನರನ್ನು ಕೊನೆಯವರೆಗೂ ನೆನಪಿನಲ್ಲಿಟ್ಟುಕೊಳ್ಳುವ, ಕೃತಜ್ಞತೆ ಸಲ್ಲಿಸುವ ಈ ಶ್ವಾನಗಳು ಮನುಷ್ಯನಿಗಿಂತ ನೂರು ಪಟ್ಟು ಮೇಲು.

Advertisement
Share this on...