ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರಿನಲ್ಲಿದೆ ಆರೋಗ್ಯದ ಗುಟ್ಟು… ಅದೇನು ಅಂಥ ತಿಳಿದಿದೆಯಾ?

in ಕನ್ನಡ ಆರೋಗ್ಯ 168 views

ಮಾನವನ ಉಗಮದಿಂದ ಅವನು ಬಳಸಿದ ಅನೇಕ ಸಾಮಗ್ರಿಗಳಲ್ಲಿ ತಾಮ್ರ ಕೂಡಾ ಒಂದು. ಶಿಲಾಯುಧಗಳನ್ನು ಬಳಸುತ್ತಿದ್ದ ಮಾನವ ನಂತರ ತಾಮ್ರವನ್ನು ಬಳಸಲು ಪ್ರಾರಂಭಿಸಿದ. ಆಯುರ್ವೇದದ ಅನೇಕ ಗ್ರಂಥಗಳು ಕೂಡಾ ತಾಮ್ರದ ಪಾತ್ರೆಗಳಲ್ಲಿ ನೀರನ್ನು ಶೇಖರಿಸಿಟ್ಟು ಸೇವಿಸುವ ಕುರಿತು ಉಲ್ಲೇಖಿಸಿದೆ. ಆಯುರ್ವೇದ ಪದ್ಧತಿ ಹಾಗೂ ಭಾರತೀಯ ವೈದ್ಯಕೀಯ ವ್ಯವಸ್ಥೆಯು ಪ್ರಚಲಿತಕ್ಕೆ ಬರುತ್ತಿದ್ದಂತೇ ಮನೆಗಳಲ್ಲಿ ತಾಮ್ರದಿಂದ ಮಾಡಿದ ಕಪ್, ಪಾತ್ರೆಗಳನ್ನು ಹೆಚ್ಚೆಚ್ಚು ಉಪಯೋಗಿಸತೊಡಗಿದರು. ಇಷ್ಟೆಲ್ಲಾ ವಿಶೇತಗಳನ್ನು ಹೊಂದಿರುವ ತಾಮ್ರದ ಬಾಟಲಿ ಹಾಗೂ ಪಾತ್ರೆಗಳ ಆರೋಗ್ಯ ಸಂಬಂಧಿ ಉಪಯೋಗಗಳೇನು ಎನ್ನುವುದನ್ನು ನೋಡೋಣ ಬನ್ನಿ. ಎಂಟು ಅಥವಾ ಹೆಚ್ಚು ಗಂಟೆಗಳ ಕಾಲ ತಾಮ್ರದ ಪಾತ್ರೆಗಳಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ದೇಹಕ್ಕೆ ಅತ್ಯುತ್ತಮ. ತಾಮ್ರದಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳಿದೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ತಾಮ್ರವು ಕ್ಯಾನ್ಸರ್ ಆಕ್ರಮಣವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳನ್ನು ಒಳಗೊಂಡಿದೆ. ವ್ಯಕ್ತಿಯ ಕಣ್ಣು ಹಾಗೂ ಚರ್ಮದ ಬಣ್ಣಕ್ಕೆ ಕಾರಣವಾಗುವ ಮೆಲನಿನ್ ಅಂಶಗಳ ಹೆಚ್ಚುವಿಕೆಗೆ ಆಗುತ್ತದೆ ಹಾಗೂ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ.

Advertisement

Advertisement

ಯಾವ ವ್ಯಕ್ತಿಗಳಲ್ಲಿ ತಾಮ್ರದ ಅಂಶದ ಕೊರತೆ ಕಂಡುಬರುತ್ತದೆಯೋ ಅವರಲ್ಲಿ ಅತಿಯಾಗಿ ರಕ್ತದೊತ್ತಡವನ್ನು ಕಾಣಬಹುದು. ಹಾಗಾಗಿ ದೇಹದಲ್ಲಿನ ರಕ್ತದೊತ್ತಡವನ್ನು ಸುಸ್ಥಿಯಲ್ಲಿಡಲು ಒಂದಷ್ಟು ಪ್ರಮಾಣದ ಕಾಪರ್ ಮುಖ್ಯ. ಹಾಗಾಗಿ ಬಾಲ್ಯದಿಂದಲೇ ಇಂತಹ ಅಂಶಗಳನ್ನು ದೇಹಕ್ಕೆ ಸೇರಿಸಿದರೆ ಖಾಯಿಲೆಗಳಿಂದ ದೂರವಿರಬಹುದು.

Advertisement

ತಜ್ಞರ ಪ್ರಕಾರ ಥೈರಾಯ್ಡ್ ಸಮಸ್ಯೆ ಕಂಡುಬರುವ ಅನೇಕರಲ್ಲಿ ತಾಮ್ರದ ಅಭಾವತೆ ಕಂಡುಬರುತ್ತದೆ. ಹಾಗಾಗಿ ತಾಮ್ರದ ಬಳಕೆಯು ಇದರ ಸೂಕ್ತ ಕಾರ್ಯಕ್ಕೆ‌ ಸಹಕಾರಿ. ಆದರೆ ಅತಿಯಾದ ಬಳಕೆಯೂ ಇಲ್ಲಿ ಮುಳುವಾಗಬಹುದು. ಹಾಗಾಗಿ ಸೂಕ್ತ ಪ್ರಮಾಣದ ಬಳಕೆ ಉತ್ತಮ. ರಕ್ತಹೀನತೆಯ ಸಮಸ್ಯೆಯಲ್ಲಿ, ಈ ಪಾತ್ರೆಯಲ್ಲಿ ಇಟ್ಟಿರುವ ಕುಡಿಯುವ ನೀರು ಪ್ರಯೋಜನಕಾರಿಯಾಗಿದೆ. ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುವುದರಿಂದ ರಕ್ತಹೀನತೆಯನ್ನು ಎದುರಿಸಲು ಸಹಾಯ ಮಾಡುತ್ತದೆ.

Advertisement

ದೇಹವು ನೋವು, ಸೆಳೆತ ಮತ್ತು ಊತದ ಸಮಸ್ಯೆಗಳಿಂದ ಬಳಲುತ್ತಿದ್ದಲ್ಲಿ ತಾಮ್ರವು ಅದರಿಂದ ದೂರವಿಡುತ್ತದೆ. ಸಂಧಿವಾತದ ಸಮಸ್ಯೆಯನ್ನು ನಿಭಾಯಿಸುವಲ್ಲಿ ತಾಮ್ರದ ನೀರು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮೂಳೆಗಳ ಬಲವರ್ಧನೆಗೆ ಕೂಡಾ ಸಹಕಾರಿ. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಚರ್ಮದ ಗುಳ್ಳೆಗಳನ್ನು ಮತ್ತು ಇತರ ಚರ್ಮದ ಕಾಯಿಲೆಗಳನ್ನು ತಡೆಯಬಹುದು ಮತ್ತು ನಿಮ್ಮ ಚರ್ಮವು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಬೆಳಿಗ್ಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದಲ್ಲದೆ, ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಇದು ಅತ್ಯಂತ ಸಹಾಯಕವಾಗಿದೆ. ಹೊಟ್ಟೆಹುಣ್ಣು, ಅಜೀರ್ಣ, ಸೋಂಕು, ಹೊಟ್ಟೆ ನೋವು, ಗ್ಯಾಸ್, ಆಸಿಡಿಟಿ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ. ದೇಹದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿದ್ದಲ್ಲಿ ಅದನ್ನು ಕರಗಿಸುವಲ್ಲಿ ತಾಮ್ರವು ಸಹಕಾರಿ. ಆದ್ರೆ ಹೆಚ್ಚು ತಾಮ್ರವು ಕೊಬ್ಬು ಅಧಿಕ ಕೊಬ್ಬನ್ನು ಕರಗಿಸಬಲ್ಲದು ಅನ್ನೋದಲ್ಲ‌ ಇದರ ಅರ್ಥ. ನಿಯಮಿತವಾದ ಬಳಕೆ ಅಗತ್ಯ.

ಶುದ್ಧ ತಾಮ್ರದಿಂದ ಮಾಡಿದ ಪಾತ್ರೆ ಅಥವಾ ಬಾಟಲ್‌ಗಳನ್ನು ಮಾತ್ರ ಖರೀದಿಸಿ. ತಾಮ್ರದಲ್ಲಿ ಶೇಖರಿಸಿಟ್ಟ ನೀರನ್ನು ರೆಫ್ರಿಜರೇಟ್ ಮಾಡಬೇಡಿ.‌ ಅತಯಾದರೆ ಅಮೃತವೂ ವಿಷ ಅನ್ನೋ ಮಾತಿನಂತೆ, ಅತಿಯಾದ ತಾಮ್ರದ ಅಂಶಗಳ ಒಳಸೇರುವಿಕೆ ದೇಹಕ್ಕೆ ಹಾನಿಯನ್ನೂ ಉಂಟುಮಾಡಬಹುದು. ದಿನಕ್ಕೆರಡು ಬಾರಿ ಮಾತ್ರ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಸೇವಿಸಿದರೂ ದೇಹಕ್ಕೆ ಬೇಕಾದ ಅಂಶಗಳು ಧಾರಾಳವಾಗಿ ದೊರೆಯುತ್ತದೆ.
– ಅಹಲ್ಯಾ

Advertisement