golden star ganesh

6 ತಿಂಗಳು ದೂರವಿದ್ದ ನಾವಿಬ್ಬರೂ ಈಗ ಮತ್ತೆ ಒಂದಾಗಿದ್ದೇವೆ…ಗಣೇಶ್ ಈ ರೀತಿ ಹೇಳಿದ್ದು ಯಾರ ಬಗ್ಗೆ..?

in ಮನರಂಜನೆ/ಸಿನಿಮಾ 372 views

ಅಕ್ಟೋಬರ್ 15 ರಿಂದ ದೇಶಾದ್ಯಂತ ಥಿಯೇಟರ್​​​ಗಳು ತೆರೆದಿವೆ. ರಾಜ್ಯದಲ್ಲೂ ಮಲ್ಟಿಪ್ಲೆಕ್ಸ್​​ಗಳು ಸಿಂಗಲ್ ಥಿಯೇಟರ್​​ಗಳು ತೆರೆದಿವೆ. 7 ತಿಂಗಳಿಂದ ಧೂಳು ತುಂಬಿಕೊಂಡಿದ್ದ ಥಿಯೇಟರ್​​​ಗಳನ್ನು ಮಾಲೀಕರು ಶುಚಿಗೊಳಿಸಿ, ಸ್ಯಾನಿಟೈಜ್ ಮಾಡಿ ಪ್ರೇಕ್ಷಕರನ್ನು ಸ್ವಾಗತ ಮಾಡಿದ್ದಾರೆ. ಆದರೆ ಥಿಯೇಟರ್​​​​​​​​​ಗಳು ತೆರೆದರೂ ಜನರು ಮಾತ್ರ ಥಿಯೇಟರ್​​​ಗೆ ಬಂದು ಸಿನಿಮಾ ನೋಡಲು ಧೈರ್ಯ ತೋರದ ಕಾರಣ ಜನರೂ ನಿರ್ಮಾಪಕರು ಕೂಡಾ ಕೋಟಿ ಕೋಟಿ ಬಂಡವಾಳ ಹೂಡಿ ತೆಗೆದಿರುವ ಸಿನಿಮಾಗಳನ್ನು ಬಿಡುಗಡೆ ಮಾಡಲು ಸಿದ್ಧರಿಲ್ಲ. ಆದರೆ ಜನವರಿ ಆರಂಭದಿಂದ ಮಾರ್ಚ್​ನಲ್ಲಿ ಕೊರೊನಾ ಲಾಕ್​ಡೌನ್ ಆರಂಭವಾದ ನಡುವೆ ಬಿಡುಗಡೆಯಾದ ಸಿನಿಮಾಗಳು ಇದೀಗ ಮರುಬಿಡುಗಡೆಯಾಗಿವೆ. ನರಗುಂದ ಬಂಡಾಯ, ಶಿವಾಜಿ ಸುರತ್ಕಲ್, ಲವ್ ಮಾಕ್​ಟೇಲ್, ಶಿವಾರ್ಜುನ, ದಿಯಾ ಸಿನಿಮಾಗಳು ಮರುಬಿಡುಗಡೆಯಾಗಿವೆ. ಸುಮಾರು 50 ಕ್ಕೂ ಹೆಚ್ಚು ದೊಡ್ಡ ಬಜೆಟ್​​​ ಸಿನಿಮಾಗಳು ಬಿಡುಗಡೆಯ ಪಟ್ಟಿಯಲ್ಲಿ ಕಾದು ನಿಂತಿವೆ. ಅರ್ಧ ಪ್ರೇಕ್ಷಕರಿಗಾಗಿ ನಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧರಿಲ್ಲ ಎಂದು ಸಲಗ ಚಿತ್ರತಂಡ ಈಗಾಗಲೇ ಹೇಳಿದೆ.

Advertisement

Advertisement

ಈ ನಡುವೆ ನಟ-ನಟಿಯರು ಕೂಡಾ ಇಷ್ಟು ದಿನ ವಿಶ್ರಾಂತಿ ಪಡೆಯುತ್ತಿದ್ದವರು ಇದೀಗ ಒಬ್ಬೊಬ್ಬರಾಗಿ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಧೀರ್ಘಕಾಲದ ವಿರಾಮದ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಗಣೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ತ್ರಿಬಲ್ ರೈಡಿಂಗ್ ಚಿತ್ರೀಕರಣ ಆರಂಭವಾಗಿದೆ. ಇದೊಂದು ಲವ್ , ಆ್ಯಕ್ಷನ್, ಕಾಮಿಡಿ ಚಿತ್ರವಾಗಿದ್ದು ಎಲ್ಲಾ ಮುನ್ನೆಚರಿಕೆ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ಮಾಡಲಾಗುತ್ತಿದೆ. ವಿನೋದ್ ಪ್ರಭಾಕರ್ ನಟನೆಯ ರಗಡ್ ಚಿತ್ರವನ್ನು ನಿರ್ದೇಶಿಸಿದ್ದ ಮಹೇಶ್ ಗೌಡ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ರಾಮ್​​​ಗೋಪಾಲ್ ನಿರ್ಮಾಣ ಮಾಡಿದ್ದು ಸಾಯಿ ಕಾರ್ತಿಕ್ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

Advertisement

ಇನ್ನು ಗೋಲ್ಡನ್ ಸ್ಟಾರ್ ಬಹಳ ದಿನಗಳ ನಂತರ ಚಿತ್ರೀಕರಣಕ್ಕೆ ಹಾಜರಾಗುತ್ತಿರುವ ಬಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಮ್ಮ ಟ್ವಿಟ್ಟರ್​​​ನಲ್ಲಿ ಬರೆದುಕೊಂಡಿರುವ ಗಣೇಶ್, ಸಿನಿಮಾಗೂ ನಮಗೂ ಇರುವ ಅವಿನಾಭಾವ ಸಂಬಂಧವನ್ನು ವ್ಯಕ್ತಪಡಿಸಿದ್ದಾರೆ. “ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ನಾ ಅತ್ತಾಗ ಅತ್ತು, ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೋ, 6 ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಮತ್ತಾರೂ ಅಲ್ಲ, ನನ್ನ ಬದುಕಿನ ಒಂದು ಭಾಗವಾದ ಕ್ಯಾಮರಾ. ತ್ರಿಬಲ್ ರೈಡಿಂಗ್ ಚಿತ್ರೀಕರಣ ಆರಂಭವಾಗಿದೆ ನಿಮ್ಮ ಹಾರೈಕೆ ಇರಲಿ” ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.

Advertisement

 

 

View this post on Instagram

 

ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ. 6ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ “ಕ್ಯಾಮೆರಾ” “ತ್ರಿಬಲ್ ರೈಡಿಂಗ್” ಚಿತ್ರೀಕರಣ ಶುರು ನಿಮ್ಮ ಹಾರೈಕೆಯಿರಲಿ

A post shared by Ganesh (@goldenstar_ganesh) on

ಲಾಕ್​ಡೌನ್ ಆರಂಭವಾದಾಗಿನಿಂದ ಗಣೇಶ್ ತಮ್ಮ ಪತ್ನಿ ಶಿಲ್ಪಾ ಹಾಗೂ ಮಕ್ಕಳಾದ ಚಾರಿತ್ರ್ಯ ಹಾಗೂ ವಿಯಾನ್ ಜೊತೆ ಮನೆಯಲ್ಲೇ ಕಾಲ ಕಳೆಯುತ್ತಿದ್ದರು. ಇದೀಗ ಮತ್ತೆ ಅವರು ಶೂಟಿಂಗ್ ಹಾಜರಾಗಿದ್ದಾರೆ. ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಗಣೇಶ್ ಜೊತೆ ಮೂವರು ನಾಯಕಿಯರು ಇದ್ದಾರೆ. ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಮೂವರು ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. ಉಳಿದ ಇಬ್ಬರು ನಾಯಕಿಯರು ಆಯ್ಕೆಯಾಗಬೇಕಿದೆ.

Advertisement
Share this on...