200 ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗ ಹರಡಿದಾಗ ಮೈಸೂರು ರಾಜಮಾತೆ ಏನು ಮಾಡಿದ್ದರು…?

in ಕನ್ನಡ ಮಾಹಿತಿ 427 views

ಕಳೆದ ವರ್ಷ ಡಿಸೆಂಬರ್​​​ನಲ್ಲಿ ಚೀನಾದ ವುಹಾನ್​​​ನಲ್ಲಿ ಆರಂಭವಾದ ಕೊರೊನಾ ವೈರಸ್ ಈಗ ಸುಮಾರು 200ಕ್ಕಿಂತಲೂ ಹೆಚ್ಚು ದೇಶಗಳಿಗೆ ಹರಡಿ ಜನರನ್ನು ಬಲಿ ಪಡೆಯುತ್ತಿದೆ. ಕೊರೊನಾ ಭೀತಿಗೆ ಹೆದರಿ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಆದರೆ ಈ ವೈರಸ್​​​​​ಗಳ ಕಾಟ ಇಂದು ನಿನ್ನೆಯದಲ್ಲ, ರಾಜ ಮಹಾರಾಜರ ಕಾಲದಿಂದಲೂ ಈ ವೈರಸ್​​​​ನಿಂದ ಸಾವಿರಾರು ಜನರು ಸಾವನ್ನಪ್ಪಿದ್ದರು ಎಂಬ ವಿಚಾರ ನಿಮಗೆ ಗೊತ್ತಾ..? 1807 ರಲ್ಲಿ ನಮ್ಮ ಮೈಸೂರು ಸಂಸ್ಥಾನದಲ್ಲಿ ವೈರಸ್​​​​ನಿಂದ ಉಂಟಾದ ತೊಂದರೆ ಬಗ್ಗೆ ಇತಿಹಾಸಜ್ಞ ಧರ್ಮೇಂದ್ರ ಕುಮಾರ್ ಆರೇನಹಳ್ಳಿಯವರು ಮಾಹಿತಿ ನೀಡಿದ್ಧಾರೆ.

Advertisement

 

Advertisement

Advertisement

 

Advertisement

1799 ರಲ್ಲಿ ಶ್ರೀರಂಗಪಟ್ಟಣ ಯುದ್ಧದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅಜ್ಜಿ ಲಕ್ಷ್ಮಿ ಅಮ್ಮಣ್ಣಿ ಅವರೊಂದಿಗೆ ಮೈಸೂರಿಗೆ ಬಂದು ಅರಮನೆ ಕಟ್ಟಿಸಿಕೊಂಡು ವಾಸ ಮಾಡಲು ಆರಂಭಿಸಿದರು. ಈಗ ಮೈಸೂರಿನಲ್ಲಿ ಇರುವ ಕೋಟೆಯೇ ಅಂದಿನ ಮೈಸೂರು ಸಾಮ್ರಾಜ್ಯ. ಈ ಕೋಟೆ ಒಳಗೆ ಸುಮಾರು 8 ಸಾವಿರ ಪ್ರಜೆಗಳು ವಾಸವಿದ್ದರಂತೆ. ಅರಮನೆ ಮುಂಭಾಗ ಇರುವ ದೊಡ್ಡಕೆರೆ ಮೈದಾನದಿಂದ ಪ್ರಜೆಗಳು ಎಲ್ಲದಕ್ಕೂ ನೀರು ಬಳಸುತ್ತಿದ್ದರು. ಆದರೆ 1807 ರಲ್ಲಿ ಮಲೇರಿಯಾ ಬಂದು ಸಾವಿರಾರು ಮಂದಿ ಸಾವನ್ನಪ್ಪಿದ್ಧಾರೆ. 1802 ರಲ್ಲೇ ಮಲೇರಿಯಾಗೆ ಇಂಜಕ್ಷನ್ ಕಂಡುಹಿಡಿದಿದ್ದರೂ ದಕ್ಷಿಣ ಭಾರತದಲ್ಲಿ ಈ ಇಂಜಕ್ಷನ್ ತೆಗೆದುಕೊಳ್ಳಲು ಯಾರೂ ಮುಂದೆ ಬಂದಿರಲಿಲ್ಲ. ಇದಕ್ಕೆ ಕಾರಣ ಆ ಇಂಜಕ್ಷನ್ ತೆಗೆದುಕೊಂಡರೆ ಇನ್ನೂ ಹೆಚ್ಚಿನ ತೊಂದರೆ ಆಗಿ ಸಾವನ್ನಪ್ಪಬಹುದು ಎಂಬ ಭಯ ಎಲ್ಲರನ್ನೂ ಕಾಡಿತ್ತು.

 

 

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಅವರು ಈ ವೇಳೆ ಮಲೇರಿಯಾಗೆ ತುತ್ತಾದ ವ್ಯಕ್ತಿಗೆ ಧೈರ್ಯ ಹೇಳಿ ಇಂಜಕ್ಷನ್ ಕೊಡಿಸಿದ್ಧಾರೆ. ಆ ವ್ಯಕ್ತಿ ಗುಣಮುಖರಾದಾಗ ಕಾಯಿಲೆಯಿಂದ ಬಳಲುತ್ತಿದ್ದ ಎಲ್ಲರೂ ಇಂಜಕ್ಷನ್ ತೆಗೆದುಕೊಂಡು ಗುಣಮುಖರಾಗಿದ್ದಾರೆ. ಇಡೀ ದಕ್ಷಿಣ ಭಾರತದಲ್ಲೇ ಮಲೇರಿಯಾ ಕಾಯಿಲೆಗೆ ಇಂಜಕ್ಷನ್ ತೆಗೆದುಕೊಂಡಿದ್ದು ಮೈಸೂರಿನ ವ್ಯಕ್ತಿ ಎಂಬುದು ಈಗ ಇತಿಹಾಸ. ಇದಕ್ಕೂ ಮುನ್ನ 1802 ರಲ್ಲಿ ಮುಂಬೈನಲ್ಲಿ 3 ವರ್ಷದ ಮಗುವಿಗೆ ಈ ಇಂಜಕ್ಷನ್ ನೀಡಲಾಗಿತ್ತು.

 

 

ಈ ಘಟನೆ ನಡೆದು ಸುಮಾರು 95 ವರ್ಷಗಳ ಬಳಿಕ ಇದೇ ಮೈಸೂರು ಸಂಸ್ಥಾನದ ಪ್ರಜೆಗಳು ಪ್ಲೇಗ್​​ ಕಾಯಿಲೆಗೆ ತುತ್ತಾದರು. ಇದಕ್ಕೆ ಕಾರಣ ಪ್ರತಿಯೊಂದಕ್ಕೂ ದೊಡ್ಡ ಕೆರೆ ಮೈದಾನದ ನೀರನ್ನು ಬಳಸುತ್ತಿದ್ದು. ಹಸು, ಕರುಗಳನ್ನು ತೊಳೆಯಲು, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಸ್ನಾನ ಮಾಡಲು, ಕುಡಿಯಲು ಇದೇ ಕೆರೆ ನೀರನ್ನು ಬಳಸಲಾಗುತ್ತಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಾಣಿ ವಿಲಾಸ ಸನ್ನಿಧಾನ ( ರಾಜಮಾತೆ ಕೆಂಪ ನಂಜಮ್ಮಣ್ಣಿ) ಅವರು ದೊಡ್ಡ ಕೆರೆ ಮೈದಾನದ ನೀರನ್ನು ದಳವಾಯಿ ಕೆರೆಗೆ ವರ್ಗಾಯಿಸಿ, ದೊಡ್ಡ ಕೆರೆ ಮೈದಾನಕ್ಕೆ ಹೊಸ ನೀರನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಿದರು. ಇದೇ ವೇಳೆಗೆ ಸ್ವಚ್ಛತೆಗೆ ಆದ್ಯತೆ ನೀಡಿದ ಅವರು ಮೈಸೂರು ಸಂಸ್ಥಾನದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿಸಿದರು. ಇಡೀ ಭಾರತದಲ್ಲೇ ಒಳಚರಂಡಿ ವ್ಯವಸ್ಥೆ ಮಾಡಿಸಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ಸೇರುತ್ತದೆ.

 

ಒಟ್ಟಿನಲ್ಲಿ ಮೈಸೂರು ಅನೇಕ ಮೊದಲಿಗೆ ಸಾಕ್ಷಿಯಾಗಿದೆ. ಅಲ್ಲದೆ ಮೈಸೂರು ರಾಜ ಮನೆತನದ ಇಬ್ಬರು ಮಹಾರಾಣಿಯರಿಗೆ ಪ್ರಜೆಗಳ ಮೇಲೆ ಎಷ್ಟು ಕಾಳಜಿ ಇತ್ತು ಎಂಬುದು ಈ ಕಥೆಯಿಂದ ತಿಳಿದುಬರುತ್ತದೆ.

Advertisement
Share this on...