ಮನೆಕೆಲಸದ ಹುಡುಗನ ಮದುವೆಯಲ್ಲಿ ಈ ಖ್ಯಾತ ನಟ ಮಾಡಿದ್ದೇನು..?

in ಮನರಂಜನೆ/ಸಿನಿಮಾ 1,721 views

ಮನುಷ್ಯ ಬೆಳೆದಷ್ಟು ತಗ್ಗಿ-ಬಗ್ಗಿ ನಡೆಯಬೇಕು. ಆಗಲೇ ಆ ವ್ಯಕ್ತಿ ಪೂರ್ಣ ಮನುಷ್ಯ ಆಗಲು ಸಾಧ್ಯ. ಕೆಲವರಿಗೆ ಸ್ಟಾರ್ ಗಿರಿ ಬಂದರೆ ಸಾಕು ಅವರನ್ನು ಹಿಡಿಯಲು ಆಗುವುದಿಲ್ಲ. ಆದರೆ ಈ ಟಾಪ್ ನಟ ಮಾಡಿದ ಕೆಲಸ ನೋಡಿದರೆ ಹಾರ್ಟ್ ಟಚ್ ಆಗುತ್ತದೆ. ದಕ್ಷಿಣ ಭಾರತದ ಟಾಪ್ ನಟರಲ್ಲಿ ಸೂರ್ಯ ಕೂಡ ಒಬ್ಬರು. ಇವರು ಜುಲೈ 23, 1975 ರಂದು ಚೆನ್ನೈನಲ್ಲಿ ಜನಿಸಿದರು. ಅವರ ಇನ್ನೊಂದು ಹೆಸರು ಶರವಣನ್ ಶಿವಕುಮಾರ್. ನಟ ಸೂರ್ಯ ಅವರು 1997 ರಲ್ಲಿ ತೆರೆಕಂಡ ನಿರುಕೂ ನೀರ್ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೃ ಪಾದಾರ್ಪಣೆ ಮಾಡುತ್ತಾರೆ.  ನಂದಾ, ಮೌನಂ ಪೇಸಿಯದ್ದೆ, ಗಜನಿ, ಆಯನ್, ಸಿಂಗಂ,ಕಪಾನ್, ಸಿಂಗಂ-3, ಬಂದೋಬಸ್ತ್, ಬ್ರದರ್ಸ, ಪ್ರಿಯತಮ ಸೇರಿದಂತೆ 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟ ಸೂರ್ಯ ಅವರು 2006 ರಲ್ಲಿ ನಟಿ ಜ್ಯೋತಿಕ ಅವರನ್ನು ಮದುವೆಯಾಗುತ್ತಾರೆ.ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ. ತನ್ನ ಎಪ್ಪತ್ತು ಕೋಟಿ ಬೆಲೆ ಬಾಳುವ ಮನೆಯನ್ನು ಅನಾಥಾಶ್ರಮಕ್ಕೆ ಕೊಟ್ಟು ಅನಾಥ ಮಕ್ಕಳನ್ನು ಮನೆಯವರಂತೆ ನೋಡಿಕೊಂಡಿದ್ದ ಈ ನಟ ಮತ್ತೊಂದು ಹೃದಯಸ್ಪರ್ಶಿ ಕೆಲಸ ಮಾಡಿದ್ದಾರೆ.

Advertisement

ತನ್ನ ಮನೆಯಲ್ಲಿ ಕೆಲಸ ಮಾಡುವ ಹುಡುಗನಿಗೆ ಮದುವೆ ಫಿಕ್ಸ್ ಆಗಿತ್ತು. ಸಾಮಾನ್ಯವಾಗಿ ಇತರರು ಆದರೆ ಸ್ವಲ್ಪ ಹಣದ ಸಹಾಯ ಮಾಡುತ್ತಾರೆ. ಆದರೆ ನಟ ಸೂರ್ಯ ಹಾಗೆ ಮಾಡಲಿಲ್ಲ. ತಾವೇ ಸ್ವತಃ ಮುಂದೆ ನಿಂತು ಎಲ್ಲಾ ಕೆಲಸಗಳನ್ನು ಮಾಡಿ ಸ್ವಂತ ತಮ್ಮನಂತೆ ಮದುವೆ ಮಾಡಿದ್ದಾರೆ. ಮದುವೆಯ ಎಲ್ಲಾ ಖರ್ಚನ್ನು ತಾನೇ ಬರಿಸಿದ ಸೂರ್ಯ ಎರಡು ದಿನ ಶೂಟಿಂಗ್ ನಿಂದ ರಜೆ ತೆಗೆದುಕೊಂಡು ಮದುವೆ ಎಲ್ಲಾ ಕೆಲಸಗಳನ್ನು ಮಾಡುವ ಜೊತೆಗೆ ಮನೆಕೆಲಸದ ವ್ಯಕ್ತಿಯ ಅಣ್ಣನಂತೆ ಜವಾಬ್ದಾರಿ ಹೊತ್ತು ಮದುವೆ ಸಮಾರಂಭ ಮಾಡಿದ್ದಾರೆ. ಮದುವೆಗೆ ನಟ ಸೂರ್ಯ ಕುಟುಂಬದ ಸದಸ್ಯರೆಲ್ಲರೂ ಭಾಗವಹಿಸಿ ಲವಲವಿಕೆಯಿಂದ ಮದುವೆಯಲ್ಲಿ ತಿರುಗಾಡುತ್ತಿದ್ದರು.

Advertisement


ನಟ ಸೂರ್ಯ ಅವರ ಈ ನಡವಳಿಕೆಯನ್ನು ನೋಡಿದ ಜನ ಬೆರಗಾದರು. ಈ ನಟ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ನಿಜ ಜೀವನದಲ್ಲಿಯೂ ಹೀರೋ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ನಟ ಸೂರ್ಯ. ಮನೆಯ ಹಿರಿಯನಂತೆ ತಾಳಿಯನ್ನು ಸಹ ಸೂರ್ಯನೇ ಖರೀದಿ ಮಾಡಿ ತಂದಿದ್ದರು. ನಟ ಸೂರ್ಯ ಅವರ ಈ ಪ್ರೀತಿ ನೋಡಿ ಮಾತು ಬರೆದೆ ಕಣ್ಣೀರು ಹಾಕಿದ ಆ ಮನೆ ಕೆಲಸದ ಹುಡುಗ. ಹೀಗೆ ತಮ್ಮಂತೆ ತಮ್ಮ ಮನೆಯ ಸುತ್ತಮುತ್ತ ಇರುವವರು ಸಂತೋಷವಾಗಿರಬೇಕು ಎಂದು ಬಯಸುವವರು ತುಂಬಾ ಅಪರೂಪ. ನಟ ಸೂರ್ಯ ಅವರು ಈ ನಡವಳಿಕೆಯಿಂದಲೇ ಅವರ ಅಭಿಮಾನಿಗಳು ಅವರನ್ನು ಇನ್ನೂ ಇಷ್ಟಪಡಲು ಕಾರಣ.

Advertisement

– ಸುಷ್ಮಿತಾ

Advertisement

Advertisement
Share this on...