ನಟಿ ಮೀನಾ ಈಗ ಎಲ್ಲಿದ್ದಾರೆ..? ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ..?

in ಮನರಂಜನೆ 295 views

ದಕ್ಷಿಣ ಭಾರತದ ಸಿನಿಮಾಗಳಲ್ಲಿ ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದ ಮೋಹಕ ನಟಿ ಮೀನಾ ಸೆಪ್ಟಂಬರ್ 16, 1976ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಮೀನ ಜನಿಸಿದರು. ತಮಿಳು ಚಿತ್ರವೊಂದರ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಹಲವಾರು ಸಿನಿಮಾಗಳಲ್ಲಿ ತಮಿಳು, ತೆಲುಗು, ಮಲೆಯಾಳಂನಲ್ಲಿ ಮೀನಾ ಬಾಲನಟಿಯಾಗಿ ನಟಿಸಿದ್ದಾರೆ. ನಂತರ ನಾಯಕಿಯಾಗಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿ ಮೀನಾ ನಟಿಸಿದ್ದರು.

Advertisement

 

Advertisement

Advertisement

 

Advertisement

ಮೀನಾ 8 ನೇ ತರಗತಿ ಓದುತ್ತಿರುವಾಗಲೇ ಶಾಲೆಗೆ ಗುಡ್ ಬಾಯ್ ಹೇಳಿ ಅಭಿನಯದತ್ತ ಹೆಚ್ಚು ಆಸಕ್ತಿ ತೋರಿದರು. ನಂತರ ಅವಕಾಶಗಳು ಕಡಿಮೆಯಾದಾಗ 10ನೇ ತರಗತಿ ಪರೀಕ್ಷೆಯನ್ನು ಬರೆದು ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿ ಫೇಮಸ್ ನಟಿಯಾಗಿ ಬೆಳೆದರು. ರವಿಚಂದ್ರನ್ ರವರ ‘ಪುಟ್ನಂಜ’ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ಮೀನಾ ನಂತರ ರವಿಚಂದ್ರನ್ ರವರ ಜೊತೆಯಲ್ಲಿ ಮೊಮ್ಮಗ, ಚೆಲುವ ಚಿತ್ರದಲ್ಲಿ ನಟಿಸಿದ್ದರು.

 

 

ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ‘ಸಿಂಹಾದ್ರಿಯ ಸಿಂಹ’ ಹಾಗೂ ಕಿಚ್ಚ ಸುದೀಪ್ ರವರ ‘ಸ್ವಾತಿಮುತ್ತು’ ಹಾಗೂ ‘ಮೈಆಟೋಗ್ರಾಫ್’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಇನ್ನು ಮುಂತಾದ ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

 

 

 

2009ರಲ್ಲಿ ಸಾಫ್ಟ್ ವೇರ್ ಉದ್ಯಮಿ ವಿದ್ಯಾಸಾಗರ್ ಎಂಬುವವರನ್ನು ಮದುವೆಯಾದರು ಮೀನಾ. ನಂತರ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗು ಇದ್ದ ಕಾರಣ ಮೀನಾ ನಟನೆಯತ್ತ ಮುಖ ಮಾಡಲಿಲ್ಲ. ಮಗು ಮತ್ತು ಗಂಡನ ಬಗ್ಗೆ ಹೆಚ್ಚು ಒಲವು ತೋರುವ ಮೀನಾ ಗಂಡ ಮತ್ತ ಮಗಳೇ ನನ್ನ ಪ್ರಪಂಚ ಎಂದು ಬದುಕುತ್ತಿದ್ದು ತಮ್ಮ ಸುಂದರ ಸಂಸಾರದಲ್ಲಿ ಸುಖ ಕಾಣುತ್ತಿದ್ದಾರೆ.

 

 

ಮಗಳ ಭವಿಷ್ಯದ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳುವ ಮೀನಾ ತನ್ನ ಮಗಳಿಗೆ ಒಳ್ಳೆ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಮಗಳಿಗೆ ನಟನೆಯತ್ತಲು ಗಮನಹರಿಸುವಂತೆ ಪ್ರೇರೇಪಿಸಿದ್ದಾರೆ. ಇನ್ನೂ ಮೀನಾರವರ ಮಗಳು ಬೇಬಿ ನೈನಿಕ ತಮಿಳು ಹೀರೋ ವಿಜಯ್ ನಟನೆಯ ‘ತೇರಿ’ ಎಂಬ ಚಿತ್ರದಲ್ಲಿ ಹಾಗೂ ಭಾಸ್ಕರ್ ರವರ ‘ರಾಸ್ಕಲ್’ ಎಂಬ ಚಿತ್ರದಲ್ಲಿ ನಟಿಸಿದ್ದಾಳೆ.

– ಸುಷ್ಮಿತಾ

Advertisement
Share this on...