ಯಾವ ಉಪ್ಪು ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದು?

in ಕನ್ನಡ ಆರೋಗ್ಯ 130 views

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ರಿಯಲ್ ಸ್ಟಾರ್ ಉಪ್ಪಿ ಹಾಡಿ ಕುಣಿದದ್ದು ನಿಮಗೆಲ್ಲಾ ಗೊತ್ತೇ ಇದೆ. ಏಕೆಂದರೆ ಉಪ್ಪು ಇರದಿದ್ದರೆ ಊಟ ರುಚಿಸದು. ಜಗತ್ತಿನಲ್ಲಿ ಉಪ್ಪಿನ ರುಚಿ ಗೊತ್ತಿರದ ವ್ಯಕ್ತಿಯೇ ಇಲ್ಲವೇನೋ. ಆದರೆ ಇಲ್ಲಿ ನಾವು ನೋಡಬಹುದಾದ ಒಂದೇ ವ್ಯತ್ಯಾಸವೆಂದರೆ ಕೆಲವರು ಕಡಿಮೆ ಉಪ್ಪು ಸೇವಿಸುತ್ತಾರೆ. ಇನ್ನು ಕೆಲವರಿಗೆ ರುಚಿಗೆ ಅನುಗುಣವಾಗಿರಬೇಕು. ಅಂದಹಾಗೆ ಉಪ್ಪಿನಲ್ಲೂ ನಾವು ಅನೇಕ ವಿಧಗಳನ್ನು ಕಾಣಬಹುದಾಗಿದೆ. ಅದರಲ್ಲಿ ಕೆಲವು ಉಪ್ಪು ನಮಗೆ ಹಾನಿ ಮಾಡುತ್ತದೆ. ಇನ್ನು ಕೆಲವು ಆರೋಗ್ಯಕ್ಕೆ ಪ್ರಯೋಜನಕಾರಿ. ಇಲ್ಲಿ ಯಾವ ಉಪ್ಪು ನಮಗೆ ಹೆಚ್ಚು ಉಪಯುಕ್ತ ಎಂದು ಇಂದು ನಾವು ನಿಮಗೆ ಹೇಳಲಿದ್ದೇವೆ.

Advertisement

 

Advertisement

Advertisement

 

Advertisement

ಟೇಬಲ್ ಸಾಲ್ಟ್ ಅಥವಾ ಪ್ಲೇನ್ ಸಾಲ್ಟ್
ಈ ಟೇಬಲ್ ಸಾಲ್ಟ್’ನಲ್ಲಿ ಅತ್ಯಧಿಕ ಪ್ರಮಾಣದ ಸೋಡಿಯಂ, ಸಾಕಷ್ಟು ಪ್ರಮಾಣದಲ್ಲಿ ಅಯೋಡಿನ್ ಇರುತ್ತದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಉಪ್ಪನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಪ್ರಯೋಜನಕಾರಿ.

 

 

ಕಲ್ಲು ಉಪ್ಪು ಅಥವಾ ರಾಕ್ ಸಾಲ್ಟ್
ಈ ಉಪ್ಪನ್ನು ಫಾಸ್ಟಿಂಗ್ ಸಾಲ್ಟ್ ಎಂದೂ ಕರೆಯುತ್ತಾರೆ. ಈ ಉಪ್ಪನ್ನು ಪರಿಷ್ಕರಿಸದೆ ತಯಾರಿಸಲಾಗುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ಪೊಟ್ಯಾಶಿಯಮ್ ಮತ್ತು ಮೆಗ್ನೀಶಿಯಂ ಪ್ರಮಾಣವು ಪ್ಲೇನ್ ಸಾಲ್ಟ್ ಪ್ರಮಾಣಕ್ಕಿಂತ ಹೆಚ್ಚಾಗಿದೆ.

 

 

ಕಪ್ಪು ಉಪ್ಪು ಅಥವಾ ಬ್ಲಾಕ್ ಸಾಲ್ಟ್
ಕಪ್ಪು ಉಪ್ಪು ತಿನ್ನುವುದರಿಂದ ಮಲಬದ್ಧತೆ, ಅಜೀರ್ಣ, ಹೊಟ್ಟೆ ನೋವು, ತಲೆತಿರುಗುವಿಕೆ, ವಾಂತಿ ಮತ್ತು ಹೆದರಿಕೆ ಮುಂತಾದ ಸಮಸ್ಯೆಗಳು ದೂರವಾಗುತ್ತವೆ, ಆದ್ದರಿಂದ ಇದನ್ನು ಸೇವಿಸುವುದರಿಂದ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

 

 

ಕಡಿಮೆ ಸೋಡಿಯಂ ಇರುವ ಉಪ್ಪು
ಈ ಉಪ್ಪನ್ನು ಮಾರುಕಟ್ಟೆಯಲ್ಲಿ ಪೊಟ್ಯಾಶಿಯಮ್ ಉಪ್ಪು ಎಂದೂ ಕರೆಯುತ್ತಾರೆ. ಆದರೂ ಇದರಲ್ಲಿ ಪ್ಲೇನ್ ಸಾಲ್ಟ್’ನಂತೆ ಸೋಡಿಯಂ ಮತ್ತು ಪೊಟ್ಯಾಶಿಯಮ್ ಕ್ಲೋರೈಡ್ ಕೂಡ ಇದೆ. ರಕ್ತದೊತ್ತಡ ಸಮಸ್ಯೆ ಇರುವ ಜನರು ಕಡಿಮೆ ಸೋಡಿಯಂ ಇರುವ ಉಪ್ಪನ್ನು ತೆಗೆದುಕೊಳ್ಳಬೇಕು.

 

 

ಸಮುದ್ರ ಉಪ್ಪು ಅಥವಾ ಸೀ ಸಾಲ್ಟ್
ಈ ಉಪ್ಪನ್ನು ಆವಿಯ ಮೂಲಕ ತಯಾರಿಸಲಾಗುತ್ತದೆ. ಇದು ಪ್ಲೇನ್ ಉಪ್ಪಿನಂತೆ ಇರುವುದಿಲ್ಲ. ವಾಯು, ಒತ್ತಡ, ಉಬ್ಬುವುದು, ಕರುಳಿನ ಅನಿಲ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳ ಸಮಯದಲ್ಲಿ ಸೀ ಸಾಲ್ಟ್ ಸೇವನೆ ಒಳ್ಳೆಯದು.

Advertisement
Share this on...