ಯಾವ ರಾಶಿಯವರು ಯಾವ ವ್ಯಾಪಾರ ಮಾಡಿದರೆ ಸೂಕ್ತ

in ಜ್ಯೋತಿಷ್ಯ 5,436 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ದ್ವಾದಶಿ ತಿಥಿ,  ಪೂರ್ವಾಫಾಲ್ಗುಣಿ ನಕ್ಷತ್ರ,  ಶುಕ್ಲ ಯೋಗ,  ತೈತುಲ ಕರಣ, ಅಕ್ಟೋಬರ್ 14  ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಮಧ್ಯಾಹ್ನ 2 ಗಂಟೆ 52 ನಿಮಿಷದಿಂದ 4 ಗಂಟೆ 19 ನಿಮಿಷದವರೆಗೂ ಇದೆ.

Advertisement

ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಪ್ರತಿಯೊಬ್ಬರು ಒಂದೊಂದು ರೀತಿಯ ವೃತ್ತಿ ವ್ಯವಹಾರಗಳಲ್ಲಿ ತೊಡಗಿರುತ್ತಾರೆ. ಅದರಲ್ಲೂ ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಕಳೆಯುವಂತಹ ಅದ್ಭುತವಾದ ಸ್ಥಳ ದೇವಸ್ಥಾನವೆಂದರೆ ನಾವು ಕೆಲಸ ಮಾಡುವ ಸ್ಥಳ. ಯಾವ ಕೆಲಸವಾದರೂ ಸರಿ ಏಕ ಚಿತ್ತವಾಗಿ ಅದಕ್ಕೆ ಗೌರವ ಕೊಟ್ಟು ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಬ್ಯೂಟಿ ಪಾರ್ಲರ್ ಗಿಫ್ಟ್ ಶಾಪ್ ತೆರೆಯಲು ನಿಮ್ಮ ಜಾತಕದಲ್ಲಿ  ಬುಧ ಚೆನ್ನಾಗಿರಬೇಕು ಶುಕ್ರ ಕೂಡ ಚೆನ್ನಾಗಿರಬೇಕು ಆಗ ವ್ಯಾಪಾರ ಚೆನ್ನಾಗಿರುತ್ತದೆ. ಬುಧ ಚೆನ್ನಾಗಿದ್ದರೆ ವ್ಯಾಪಾರಿಗಳನ್ನು ಸೆಳೆಯುವ ಶಕ್ತಿನಯ ನಾಜೂಕು  ನಿಮಗಿರುತ್ತದೆ. ಕುಂಭ ರಾಶಿಯವರು ಮೀನ ರಾಶಿಯವರು ಯಾವುದೇ ಕಾರಣಕ್ಕೂ ಮೂಲ ಚೆನ್ನಾಗಿ ಇಲ್ಲದಿರುವುದರಿಂದ ಬ್ಯೂಟಿ ಪಾರ್ಲರ್ ಅನ್ನು ತೆರೆಯಬಾರದು. ಮೇಷ ರಾಶಿಯಲ್ಲಿ  ಷಷ್ಠಮಾಧಿಪತಿ ಬುಧ ಇರುವುದರಿಂದ ನೀವು ಕೂಡ  ಬ್ಯೂಟಿ ಪಾರ್ಲರ್ ತೆರೆಯುವಂತಿಲ್ಲ. ಜೊತೆಗೆ ವೃಶ್ಚಿಕ  ರಾಶಿಯವರು ಕೂಡ ಬ್ಯೂಟಿ ಪಾರ್ಲರ್ ಉದ್ಯೋಗವನ್ನು ಮಾಡುವಂತಿಲ್ಲ.

Advertisement

Advertisement

ಸಿಂಹ ರಾಶಿಯವರು ಬುಧ ಲಾಭದಾಯಕವಾಗಿ ಇರುವುದರಿಂದ ಬ್ಯೂಟಿ ಪಾರ್ಲರ್ ಅನ್ನು ಬೇರೆಯವರ ಹೆಸರಿನಲ್ಲಿ ಮಾಡಿ ಅದರ ಸೂಪರ್ವೈಸರ್ ಆಗಿ ಕಾರ್ಯವನ್ನು ನಿರ್ವಹಿಸಬಹುದು. ಕಟಕ ರಾಶಿಯವರು ಈ ಉದ್ಯೋಗದಿಂದ ಲಾಭಕ್ಕಿಂತ ಕಚ್ಚೆ ಹೆಚ್ಚಾಗಿ ಮಾಡಬೇಕಾಗುತ್ತದೆ.  ಧನುಸ್ಸು ರಾಶಿಗೂ ಕೂಡ ಈ ಉದ್ಯೋಗ ಆಗಿ ಬರುವುದಿಲ್ಲ. ಮಿಥುನ ರಾಶಿ ಕನ್ಯಾ ರಾಶಿ ವೃಷಭ ರಾಶಿ ಈ ರಾಶಿಯವರು ಬ್ಯೂಟಿ ಪಾರ್ಲರ್ ಅನ್ನು ಉದ್ಯೋಗವಾಗಿ ಆರಿಸಿಕೊಳ್ಳಬಹುದು.  ಈ ಮೂರು ರಾಶಿಯವರಿಗೆ ಕೈಗಂಟಿದ ಕೆಲಸವಿದು ಈ ರಾಶಿಯಲ್ಲೇ ನಾದರೂ ಬುಧ ಶುಕ್ರ ಚೆನ್ನಾಗಿದ್ದರೆ ಅತ್ಯದ್ಭುತ. ತುಲಾ ರಾಶಿಯವರು ಮಾಡಬಹುದು ಆದರೆ ಲಾಭಕ್ಕಿಂತ ಖರ್ಚೇ ಹೆಚ್ಚಾಗುತ್ತದೆ ಹೆಚ್ಚು ತೊಳಲಾಟ ವಿರುತ್ತದೆ. ಜಾತಕ ಪರಾಮರ್ಶೆ ಇಲ್ಲದೆ ಬ್ಯೂಟಿಪಾರ್ಲರ್ ನ್ನು ಇಡಲು ಹೋಗಬೇಡಿ ಇದರಿಂದ ಕೈ ಸುಟ್ಟುಕೊಳ್ಳುತ್ತಾರೆ ನಷ್ಟವನ್ನು ಕೂಡ ಅನುಭವಿಸುತ್ತೀರ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

 

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಚಂದ್ರ ಶುಕ್ರನ ಸಾರದಲ್ಲಿ ಇರುವುದರಿಂದ ಕಲಾ ಮಾಧ್ಯಮದಲ್ಲಿ ಇರುವವರಿಗೆ ಒಳ್ಳೆಯ ಶುಭ ಯೋಗದ ದಿನ.

ವೃಷಭ ರಾಶಿ : ಟೂಲ್ಸ್ , ಟ್ರಾವೆಲ್ಸ್ , ವೆಹಿಕಲ್ಸ್ , ಎಂಟರ್ ಟೈನ್ಮೆಂಟ್,  ಹೋಟೆಲ್,  ಬೇಕರಿ,  ಥಿಯೇಟರ್, ಈ ಕೆಲಸ ಕಾರ್ಯಗಳಲ್ಲಿ ತೊಡಗಿರುವವರಿಗೆ ಅರೆಕಾಸಿನ ಮಜ್ಜಿಗೆಯಷ್ಟು ನಿಮಗೆ ಭಗವಂತ ಕೊಡುತ್ತಿದ್ದಾನೆ ತೆಗೆದುಕೊಳ್ಳಿ.

ಮಿಥುನ ರಾಶಿ : ಸೋದರಿ ವರ್ಗದಿಂದ ಸಹಾಯ,  ಧೈರ್ಯ ಮತ್ತು ಆನಂದದ ದಿನ ಇಂದು.

ಕರ್ಕಾಟಕ ರಾಶಿ : ಅಪರೂಪಕ್ಕೆ ಅಲಂಕಾರ ಮಾಡಿಕೊಳ್ಳುತ್ತೀರಾ ಮೈತುಂಬ ಒಡವೆ ಬರುವ ಸುಯೋಗವಿದೆ.

ಸಿಂಹ ರಾಶಿ : ರಾಜ ಭೋಜನ ಇಂದು ನಿಮಗೆ.

ಕನ್ಯಾ ರಾಶಿ : ರಾಜ ಭೋಜನ, ಪಾಟಿ ತರಹದ ದಿನ,  ನಿಮಗೆ ಕೆಲಸ ಕಾರ್ಯ , ವೃತ್ತಿಪರವಾಗಿ  ಅದ್ಭುತವಾದಂತಹ ದಿನ.

ತುಲಾ ರಾಶಿ : ಡ್ಯಾನ್ಸ್ ಮಾಸ್ಟರ್,  ಮ್ಯೂಸಿಕ್ ಮಾಸ್ಟರ್,  ಹೂವು, ಹಣ್ಣು, ಬೇಕರಿ, ಸ್ವೀಟ್, ತುಪ್ಪ, ಹಾಲು ,ಬೆಣ್ಣೆ, ಮೊಸರು, ಗ್ರಂಥಿಕೆ, ಪೂಜಾ ಸಾಮಗ್ರಿಗಳು, ಈ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅದ್ಭುತವಾದ ದಿನ.

ವೃಶ್ಚಿಕ ರಾಶಿ : ತುಂಬಾ ದಿನದ ನಂತರ ಮೇಕಪ್,  ಜಿಮ್ ಮಾಡಲು ಪ್ರಯತ್ನಿಸುತ್ತೀರಿ .

ಧನಸ್ಸು ರಾಶಿ : ಕೆಲಸ ಇದ್ದಾಗ ಕೆಲಸ ಕೆಲಸಕ್ಕೆ ಫ್ಯಾಷನ್ ಆಗಿ ಹೋಗುತ್ತೀರಾ.

ಮಕರ ರಾಶಿ :   ಸಂಗಾತಿಯಿಂದ ಸಹಕಾರ, ಒಂದಷ್ಟು ದುಡ್ಡು ಮತ್ತು ಗುಡ್ ನ್ಯೂಸ್ ಕೂಡ ಸಿಗುತ್ತದೆ.

ಕುಂಭ ರಾಶಿ : ಕುಂಭ ರಾಶಿಯವರು ಯಾವಾಗಲೂ ಮೂಡಿಗಳು,  ಆದರೆ ಇಂದು ಗತ್ತು, ತೂಕ ವ್ಯವಹಾರಗಳೆಲ್ಲವೂ ಕೂಡ ಕೂಡಿ ಬರುವಂತಹ ಅದ್ಭುತವಾದ ದಿನ.

ಮೀನ ರಾಶಿ : ಎಲ್ಲಾ ಇದೆ ಆದರೆ ಅದನ್ನು ಅನುಭವಿಸಲಾಗದ ಸ್ಥಿತಿ ಇರುತ್ತದೆ. ಅನುಭವಿಸುವಂತಹ ದಿನವೂ ಕೂಡ ಬರುತ್ತದೆ ಆ ದಿನಗಳನ್ನು ದೇವರು ಕೊಡುವ ತನಕ ಸಮಾಧಾನವಾಗಿ ಇರಬೇಕು.

All Rights reserved Namma  Kannada Entertainment.

Advertisement
Share this on...