aravind ayyar

ಅಡುಗೆ ಭಟ್ಟ ಆಗಿ ಮೋಡಿ ಮಾಡುತ್ತಿರುವ ಈ ನಟ ಯಾರು ಗೊತ್ತೆ?

in ಮನರಂಜನೆ/ಸಿನಿಮಾ 124 views

ಎಲ್ಲರನ್ನು ತನ್ನತ್ತ ಆಕರ್ಷಿಸುವ ಕಲೆ ಕೆಲವರನ್ನಷ್ಟೇ ಆರಿಸಿಕೊಳ್ಳುತ್ತದೆ. ಹಾಗೇ ಆರಿಸಲ್ಪಟ್ಟವರು ಶ್ರದ್ದೆ ಭಕ್ತಿಯಂದ ಕಲೆಯ ಆರಾಧನೆ ಮಾಡಿದರೆ ಅವರಿಗೆ ಕಲಾ ಸರಸ್ವತಿ ಒಲಿಯುತ್ತಾಳೆ ಎಂಬುದಕ್ಕೆ ಅರವಿಂದ್ ಅಯ್ಯರ್ ಅವರೇ ಉತ್ತಕ ನಿದರ್ಶನ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿ ತೆರೆಯಲ್ಲಿ ಜನಪ್ರಿಯರಾದ ಅರವಿಂದ್ ಅಯ್ಯರ್ ಇದೀಗ ಕಾರ್ತಿಕ್ ಸರಗೂರು ನಿರ್ದೇಶನದ ಭೀಮಸೇನ ನಳಮಹಾರಾಜ ಸಿನಿಮಾದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ವೆಬ್ ಸಿರೀಸ್ ಹೇಟ್ ಯೂ ರೋಮಿಯೋದಲ್ಲಿ ನಾಯಕರಾಗಿ ನಟಿಸಿದ್ದು ಇವೆರಡೂ ಇದೀಗ ಬಿಡುಗಡೆಗೆ ಸಿದ್ದವಾಗಿದೆ. ಇಂಜಿನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅರವಿಂದ್ ಅವರು ಬಣ್ಣದ ಲೋಕಕ್ಕೆ ಬಂದ ವಿಚಾರ ನಿಜಕ್ಕೂ ರೋಚಕವಾದುದು! ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಅರವಿಂದ ಅವರು ಯುರೋಪಿನಲ್ಲಿ ಅಟೋಮೋಟಿವ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ವಿದ್ಯಾಭ್ಯಾಸದ ಬಳಿಕ ಫೋರ್ಡ್, ಜಾಗ್ವಾರ್ ಕಂಪೆನಿಗಳಲ್ಲಿ ಕೆಲಸ ಮಾಡಿರುವ ಅರವಿಂದ್ ಅವರಿಗೆ ಶಾಲಾ ಕಾಲೇಜಿನಲ್ಲಿ ನಟನೆಯಲ್ಲಿ ವಿಶೇಷ ಆಸಕ್ತಿ ಇತ್ತು. ಮಾತ್ರವಲ್ಲ ಬಣ್ಣದ ಲೋಕಕ್ಕೆ ಬರುವ ಹಂಬಲವೂ ಇತ್ತು‌.

Advertisement

Advertisement

ಸಿನಿಮಾದ ಹುಚ್ಚು ಜಾಸ್ತಿಯಾದಾಗ ಕೆಲಸಕ್ಕೆ ಬಾಯ್ ಹೇಳಿ ಬೆಂಗಳೂರಿಗೆ ಬಂದ ಅರವಿಂದ್ ಸೀದಾ ಸೇರಿದ್ದು ರಂಗಾಯಣಕ್ಕೆ‌ ಅಲ್ಲಿ ಮೂರು ವರ್ಷಗಳ ಕಾಲ ನಟನೆಯ ಪಯಣ ಮುಂದುವರಿಸಿದ ಅರವಿಂದ್ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ‌. ಕಹಿ ಇವರ ಮೊದಲ ಸಿನಿಮಾದ ಮೂಲಕ ಸಿನಿ ಪಯಣ ಶುರು ಮಾಡಿದ ಅರವಿಂದ್ ಅವರಿಗೆ ಹೆಸರು ತಂದು ಕೊಟ್ಟಿದ್ದು ಕಿರಿಕ್ ಪಾರ್ಟಿ ಸಿನಿಮಾ.

Advertisement

ಇದೀಗ ಅರವಿಂದ್ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಭೀಮಸೇನ ನಳಮಹಾರಾಜ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇದರಲ್ಲಿ ಅರವಿಂದ್ ಅವರು ಅಡುಗೆ ಭಟ್ಟನಾಗಿ ನಟಿಸಿದ್ದು, ರುಚಿಗಳನ್ನು ಪ್ರತಿನಿಧಿಸುವ ಹಲವು ಪಾತ್ರಗಳಿವೆ. ಒಟ್ಟಿನಲ್ಲಿ ಅಡುಗೆ ಭಟ್ಟ ಉಪ್ಪು ,ಹುಳಿ, ಖಾರ ಈ ಎಲ್ಲಾ ರಸಗಳನ್ನು ಸೇರಿಸಿ ಹೇಗೆ ಅಡುಗೆ ಮಾಡುತ್ತಾನೋ ಹಾಗೆ ಬೇರೆ ಬೇರೆ ಮನಸ್ಥಿತಿಯ ಜನರನ್ನು ಒಂದೇ ಕುಟುಂಬದಂತೆ ನೋಡಿಕೊಳ್ಳುವ ಪಾತ್ರ ನನ್ನದು ಎನ್ನುತ್ತಾರೆ ಅರವಿಂದ್.

Advertisement

ಇದರ ಜೊತೆಗೆ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಹೇಟ್ ಯೂ ರೋಮಿಯೋ ವೆಬ್ ಸಿರೀಸ್ ನಲ್ಲಿ ನಾಯಕನಾಗಿ ನಟಿಸಿದ್ದಾರೆ. ಇದರಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಇದು ಹಾಸ್ಯ ಹಾಗೂ ರೊಮ್ಯಾನ್ಸ್ ನ ಮೇಲೆ ಸಾಗುವ ಕತೆಯಾಗಿದೆ.

ಬಣ್ಣದ ಲೋಕದಲ್ಲಿ ಸದ್ಯ ಗುರುತಿಸಿಕೊಳ್ಳುತ್ತಿರುವ ಅರವಿಂದ್ ಅಯ್ಯರ್ ಅವರಿಗೆ ಈಗಾಗಲೇ ಬೇರೆ ಬೇರೆ ಭಾಷೆಗಳಿಂದ ಆಫರ್ ಬರುತ್ತಿದೆ. ಆದರೆ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ಅವರ ಜೀವನದ ಮುಖ್ಯ ಗುರಿ.
– ಅಹಲ್ಯಾ

Advertisement
Share this on...