ಲವ್ ಮಾಕ್ ಟೈಲ್ ನ ನಿಧಿಮಾ ಪಾತ್ರ ಬರೆಯಲು ಪ್ರೇರಣೆ ಯಾರು ಗೊತ್ತಾ..?

in ಸಿನಿಮಾ 50 views

ಸಾಮಾನ್ಯವಾಗಿ ಎಲ್ಲರೂ ತಮ್ಮ ಪ್ರೇಯಸಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಕೊಡುತ್ತಾರೆ, ಹೊರಗಡೆ ಕರೆದುಕೊಂಡು ಹೋಗುತ್ತಾರೆ, ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಅಲ್ಲದೆ ವಿಶೇಷ ರೀತಿಯಲ್ಲಿ ಶುಭ ಕೋರುತ್ತಾರೆ. ಆದರೆ ನಟ ಡಾರ್ಲಿಂಗ್ ಕೃಷ್ಣ ತಮ್ಮ ಗೆಳತಿಯನ್ನ ಬರ್ತಡೇ ದಿನವು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದ ಮೂಲಕ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ. ಇಂದು ಸ್ಯಾಂಡಲ್ ವುಡ್ ನಟಿ ಮಿಲನ ನಾಗರಾಜ್ ಹುಟ್ಟುಹಬ್ಬ ಲವ್ ಮಾಕ್ ಟೈಲ್ ಸಕ್ಸಸ್ ಖುಷಿಯಲ್ಲಿರುವ ಮಿಲನಾಗೆ ಈ ಬಾರಿಯ ಹುಟ್ಟುಹಬ್ಬ ಮತ್ತಿಷ್ಟು ವಿಶೇಷವಾಗಿದೆ. ಆದರೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಿಲನಾ ಅದ್ದೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕವೇ ಅಭಿಮಾನಿಗಳು ಶುಭಾಶಯವನ್ನ ತಿಳಿಸುತ್ತಿದ್ದಾರೆ.
ಲವ್ ಮಾಕ್ ಟೈಲ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು ಅದರಲ್ಲೂ ನಟಿ ಮಿಲನ ಅಭಿನಯಿಸಿದ ನಿಧಿಮಾ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಹೀಗಾಗಿ ಮಿಲನಾಗೆ ಭಾವಿ ಪತಿ ಡಾರ್ಲಿಂಗ್ ಕೃಷ್ಣ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.

Advertisement

 

Advertisement

Advertisement

 

Advertisement

ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕವೇ ವಿಶ್ ಮಾಡ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೆ ನಿನ್ನ ಪ್ರೀತಿ ಪರಿಶುದ್ಧವಾಗಿದೆ, ನಿನ್ನ ಹೃದಯ ಪರಿಶುದ್ಧ, ನಿನ್ನ ನಗು ಕೂಡ ಪರಿಶುದ್ಧವಾಗಿದೆ. ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ ಅಂತ ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಅಲ್ಲದೆ ನೀನು ನಿಜವಾದ ಸಂತೋಷ ಅಂದರೆ ಏನು ಎಂಬುದನ್ನ ತೋರಿಸಿದ್ದೀಯಾ ಇದರಿಂದ ನನಗೆ ನಿಧಿಮಾ ಪಾತ್ರ ಬರೆಯಲು ಪ್ರೇರಣೆ ನೀಡಿದೆ. ಹುಟ್ಟುಹಬ್ಬದ ಶುಭಾಶಯಗಳು ಮಿಲನ ನಾಗರಾಜ್ ಐ ಲವ್ ಯು ಬೇಬೂ ಅಂತ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಕೃಷ್ಣ ಶುಭಕೋರಿದ ತಕ್ಷಣ ಅಭಿಮಾನಿಗಳೂ ಕೂಡ ಕಮೆಂಟ್ ಮಾಡುವ ಮೂಲಕ ಮಿಲನರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

 

 

ಲವ್ ಮಾಕ್ ಟೈಲ್ ಸಿನಿಮಾದಲ್ಲಿ ಆದಿ ಮತ್ತು ನಿಧಿ ಪಾತ್ರದಿಂದ ಕೃಷ್ಣ ಮತ್ತು ಮಿಲನ ನಾಗರಾಜ್ ಮನೆಮಾತಾಗಿದ್ದಾರೆ. ಇತ್ತೀಚೆಗೆ ಲಾಕ್ ಡೌನ್ ಇದ್ದ ಕಾರಣ ಅನೇಕ ದಿನಗಳಿಂದ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಮಿಲನ ಮಿಸ್ಸಿಂಗ್ ಮೈ ಲವ್ ಅಂತ ಡಾರ್ಲಿಂಗ್ ಕೃಷ್ಣರವರ ಜೊತೆಗಿನ ಫೋಟೋವನ್ನ ಹಾಕಿಕೊಂಡು ತಮ್ಮ ಬೇಸರ ವ್ಯಕ್ತಪಡಿಸಿದ್ದರು. ಕೆಲದಿನಗಳ ಹಿಂದೆ ನಟಿ ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಬಗ್ಗೆ ಕೆಲವೊಂದು ಗಾಸಿಪ್ ಗಳು ಹರಿದಾಡುತ್ತಿದ್ದವು. ಆದರೆ ಇಬ್ಬರು ಈ ಬಗ್ಗೆ ಒಪ್ಪಿಕೊಂಡಿರಲಿಲ್ಲ. ಆದರೆ ಲವ್ ಮಾಕ್ ಟೈಲ್ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ತಮ್ಮ ಮದುವೆಯ ಗುಟ್ಟನ್ನ ರಟ್ಟು ಮಾಡಿದರು. ಸಿನಿಮಾ ಚಟುವಟಿಕೆಗಳಲ್ಲಿ ಜೊತೆಯಾಗಿಯೇ ಪಾಲ್ಗೊಳ್ಳುತ್ತಿದ್ದ ಇಬ್ಬರ ಮಧ್ಯೆ ಉತ್ತಮ ಒಡನಾಟ ಇತ್ತು. ಇವರಿಬ್ಬರು ಪ್ರೀತಮ್ ಗುಬ್ಬಿ ನಿರ್ದೇಶನದ ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲಿ ಮೊದಲು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಲವ್ ಮಾಕ್ ಟೈಲ್ ಸಿನಿಮಾದಲ್ಲಿಯೂ ತೆರೆ ಹಂಚಿಕೊಂಡಿದ್ದರು. ಈ ಸಿನಿ ಜರ್ನಿಗೆ ಇವರಿಬ್ಬರ ಮಧ್ಯೆ ಪ್ರೀತಿ ಹಂಚಿಕೊಳ್ಳುವುದಕ್ಕೆ ಕಾರಣವಾಗಿದೆ.

 

Thank u

Posted by Darling Krishna on Tuesday, February 25, 2020

ಡಾರ್ಲಿಂಗ್ ಕೃಷ್ಣ ತಮ್ಮ ಮನದಾಳದ ಬಯಕೆಯನ್ನ ಮಿಲನ ಬಳಿ ಹೇಳಿಕೊಳ್ಳುತ್ತಿದ್ದಂತೆಯೇ ಇಬ್ಬರ ಮನೆಯಲ್ಲೂ ಮದುವೆ ಮಾತುಕತೆ ನಡೆದೇ ಹೋಯಿತು. ಆದರೆ ಈ ವಿಚಾರ ಆಪ್ತರು ಮತ್ತು ಕುಟುಂಬದ ಸದಸ್ಯರಿಗೆ ಮಾತ್ರ ತಿಳಿದಿತ್ತೆ ವಿನಃ ಜೋಡಿ ಈ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ತಮ್ಮ ಲವ್ ಮಾಕ್ ಟೈಲ್ ಸಿನಿಮಾದ ಗೆಲುವಿನ ಖುಷಿಯಲ್ಲಿ ತಮ್ಮ ಪ್ರೀತಿಯನ್ನ ಬಹಿರಂಗ ಪಡಿಸಿದರು. ಸದ್ಯಕ್ಕೆ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಲವ್ ಮಾಕ್ ಟೈಲ್-2 ಚಿತ್ರದ ಕಥೆ ಬರೆಯುವ ಕಾರ್ಯ ಆರಂಭಿಸಿದರು. ಆದರೆ ಕೊರೋನಾ ಲಾಕ್ ಡೌನ್ ಆದ ಪರಿಣಾಮ ಸದ್ಯಕ್ಕೆ ಮನೆಯಲ್ಲಿ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ.

– ಸುಷ್ಮಿತಾ

Advertisement
Share this on...