ಈ ಹುಡುಗಿ ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯುತ್ತಾಳೆ ಎಂದು 15 ವರ್ಷದ ಹಿಂದೆಯೇ ಹೇಳಿದ್ಯಾರು.?

in ಸಿನಿಮಾ 48 views

ಸ್ವೀಟಿ ಅಲಿಯಾಸ್ ಅನುಷ್ಕಾ ಶೆಟ್ಟಿ ಟಾಲಿವುಡ್​​​​ ಚಿತ್ರರಂಗ ಕಂಡ ಅಪ್ರತಿಮ ಪ್ರತಿಭೆ. ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಾದರೂ ಹೆಸರು ಮಾಡಿದ್ದು, ತೆಲುಗು ಚಿತ್ರರಂಗದಲ್ಲಿ. 2005 ರಲ್ಲಿ ತೆರೆ ಕಂಡ ಪೂರಿ ಜಗನ್ನಾಥ್ ನಿರ್ದೇಶನದ ‘ಸೂಪರ್’ ಚಿತ್ರದ ಮೂಲಕ ಟಾಲಿವುಡ್​​​​ಗೆ ಕಾಲಿಟ್ಟ ಸ್ವೀಟಿ ನಂತರ ಅನುಷ್ಕಾ ಶೆಟ್ಟಿ ಆಗಿ ಬದಲಾದರು. ಈ ಮುದ್ದು ಹುಡುಗಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಅನುಷ್ಕಾ, ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ ಹಿನ್ನೆಲೆ, ಇತ್ತೀಚೆಗೆ ಟಾಲಿವುಡ್​​ ಚಿತ್ರರಂಗ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ‘ಬಾಹುಬಲಿ’ ನಿರ್ದೇಶಕ ಎಸ್​.ಎಸ್. ರಾಜಮೌಳಿ, ತೆಲುಗಿನ ಖ್ಯಾತ ನಿರ್ಮಾಪಕ ಕೆ.ಆರ್. ರಾಘವೇಂದ್ರ ರಾವ್ , ನಿರ್ದೇಶಕ ಪೂರಿ ಜಗನ್ನಾಥ್​​ ಸೇರಿದಂತೆ ಅನುಷ್ಕಾ ಶೆಟ್ಟಿ ಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ಚಿತ್ರರಂಗದ ಇತರ ಗಣ್ಯರು ಹಾಜರಿದ್ದರು.

Advertisement

 

Advertisement

Advertisement

 

Advertisement

ಈ ವೇಳೆ ಮಾತನಾಡಿದ ನಿರ್ದೇಶಕ ರಾಜಮೌಳಿ, ಅನುಷ್ಕಾ ನನ್ನ ಚಿತ್ರದಲ್ಲಿ ದೇವಸೇನ ಪಾತ್ರ ಮಾಡಿದ್ದರ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಆಕೆ ಒಳ್ಳೆ ನಟಿ ಮಾತ್ರವಲ್ಲದೆ ಒಳ್ಳೆ ಮನಸ್ಸು ಇರುವ ಹೆಣ್ಣು ಮಗಳು, ಕಷ್ಟದಲ್ಲಿ ಇರುವವರಿಗೆ ಮಿಡಿಯುವ ಹೃದಯ ಆಕೆಯದ್ದು, ನನ್ನ ಹೃದಯದಲ್ಲಿ ಆಕೆಗೆ ಪ್ರತ್ಯೇಕ ಸ್ಥಾನವಿದೆ. ಆಕೆ ನಮ್ಮ ಕುಟುಂಬದ ಸದಸ್ಯೆ ಇದ್ದಂತೆ ಎಂದು ಹೊಗಳಿದರು. ನಿರ್ಮಾಪಕ ಕೆ. ರಾಘವೇಂದ್ರ ರಾವ್ ಮಾತನಾಡಿ, ಅನುಷ್ಕಾರನ್ನು ನನಗೆ ಪರಿಚಯ ಮಾಡಿಸಿದ್ದು ಅಕ್ಕಿನೇನಿ ನಾಗಾರ್ಜುನ. ಕಾರ್ಯಕ್ರಮವೊಂದರಲ್ಲಿ ಆಕೆಯನ್ನು ಮೊದಲ ಬಾರಿಗೆ ನೋಡಿದೆ. ಆಕೆಯನ್ನು ನೋಡುತ್ತಿದ್ದಂತೆ ಈ ಹುಡುಗಿ ತೆಲುಗು ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯುತ್ತಾಳೆ ಎನ್ನಿಸಿತ್ತು. ಅಂದು ಅದೇ ಮಾತನ್ನು ಆಕೆ ಮುಂದೆ ಹೇಳಿದ್ದೆ.

 

 

 

ಅದೇ ರೀತಿ ಈ ದಿನ ಆಕೆ ತೆಲುಗು ಜನರು ಮಾತ್ರವಲ್ಲ, ತಮಿಳು, ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು. ಎಲ್ಲರ ಹೊಗಳಿಕೆಗೆ ನಾಚಿ ನೀರಾದ ಸ್ವೀಟಿ, ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ. ನನ್ನ ಮೇಲೆ ನೀವೆಲ್ಲರೂ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ನನ್ನ ಬೆಳವಣಿಗೆಗೆ ಕಾರಣರಾದ ಎಲ್ಲಾ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು, ಸಹನಟರು, ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದರು. ಹೆಮ್ಮೆಯ ಕರ್ನಾಟಕದ ಮಗಳು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಹಾರೈಸೋಣ.

-RKS

 

ಉದ್ಯೋಗ, ವಿದ್ಯಾಬ್ಯಾಸ, ಮದುವೆ, ಸಂತಾನ ಸತಿ-ಪತಿ ಕಲಹ ,ಆನಾರೋಗ್ಯ, ಸಾಲಬಾಧೆ, ವ್ಯಾಪಾರ, ನಷ್ಟ, ಕೋರ್ಟ್ ವಾಜ್ಯ, ವಾಸ್ತು ಸಮಸ್ಯೆ ವಶೀಕರಣ, ಲೈಂಗಿಕ ಸಮಸ್ಯೆ, ಗ್ರಹ ದೋಷ, ಜನ ದೃಷ್ಟಿ, ಮಾಟ-ಮಾಂತ್ರಿಕ ದೋಷ, ಇದಲ್ಲದೇ ಇನ್ನು ನಿಮ್ಮ ಸಮಸ್ಯೆ ಯಾವುದೇ ಇದ್ದರು, ಎಷ್ಟೇ ಕಠಿಣವಾಗಿದ್ದರೂ ಶೀಘ್ರ ಶಾಶ್ವತ ಪರಿಹಾರ ತಿಳಿಸುತ್ತಾರೆ. ಶ್ರೀ ಸಾಯಿರಾಂ ಜ್ಯೋತಿಷ್ಯ ಕೇಂದ್ರ ವಿದ್ವಾನ್ ಎಸ್.ಪಿ. ರಾವ್ ಮೊ. 9449224099

Advertisement
Share this on...