ಹಳ್ಳಿಗಳೆಂದು ತಾತ್ಸಾರ ಏಕೆ…ಯಾವ ನಗರಗಳಿಗೂ ಕಡಿಮೆ ಇಲ್ಲ ನೋಡಿ ಭಾರತದ ಈ ಗ್ರಾಮಗಳು..!

in ಕನ್ನಡ ಮಾಹಿತಿ 119 views

ಭಾರತ ಹಳ್ಳಿಗಳ ದೇಶ, 2011 ರ ಜನಗಣತಿ ಪ್ರಕಾರ ಭಾರತದ ಶೇಕಡಾ 68.84% ಜನರು ಹಳ್ಳಿಯಲ್ಲೇ ವಾಸವಿದ್ದಾರೆ. ಇನ್ನು ನಗರಕ್ಕೆ ಹೋಲಿಸಿದರೆ ಹಳ್ಳಿಯಲ್ಲಿ ಜನಜೀವನ ವಿಭಿನ್ನವಾಗಿದೆ. ನಗರದಂತೆ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಿರುವುದಿಲ್ಲ. ಆದರೂ ಭಾರತದ ಕೆಲವು ಹಳ್ಳಿಗಳು ತನ್ನದೇ ಆದ ಕೆಲವೊಂದು ವಿಚಾರಗಳಿಂದ ದೇಶಾದ್ಯಂತ ಹೆಸರಾಗಿದೆ. ಆ ಹಳ್ಳಿಗಳ ಬಗ್ಗೆ ಒಂದಿಷ್ಟು ಮಾಹಿತಿ.

Advertisement

 

Advertisement

Advertisement

ಮಹಾರಾಷ್ಟ್ರದ ಅಹ್ಮದ್​​​ನಗರ್ ಜಿಲ್ಲೆಯಲ್ಲಿ ‘ಶನಿ ಶಿಗ್ನಾಪುರ್’ಎಂಬ ಹಳ್ಳಿಯಿದೆ. ಇಲ್ಲಿನ ಶನಿ ದೇವಸ್ಥಾನದಕ್ಕೆ ಒಮ್ಮೆ ಹೋಗಿ ದರ್ಶನ ಪಡೆದರೆ ಎಲ್ಲಾ ಶನಿದೋಷಗಳು ಮಾಯವಾಗುತ್ತದೆ ಎಂಬ ನಂಬಿಕೆಯಿದೆ. ಈ ಹಳ್ಳಿ ಶಿರಡಿಯಿಂದ ಸುಮಾರು 70 ಕಿಮೀ ದೂರದಲ್ಲಿದೆ. ವಿಶೇಷ ಹಾಗೂ ಆಶ್ಚರ್ಯದ ವಿಚಾರವೆಂದರೆ ಈ ಹಳ್ಳಿಯ ಮನೆಗಳಿಗೆ ಬಾಗಿಲೇ ಇಲ್ಲವಂತೆ. ಮನೆಗಳು ಮಾತ್ರವಲ್ಲ, ಇಲ್ಲಿನ ಅಂಗಡಿ, ಎಟಿಎಮ್, ಬ್ಯಾಂಕ್​​​​​ಗೆ ಕೂಡಾ ಬಾಗಿಲುಗಳೇ ಇಲ್ಲ. ಏಕೆಂದರೆ ಇಲ್ಲಿ ಇದುವರೆಗೂ ಯಾವುದೇ ಕಳ್ಳತನ ಪ್ರಕರಣ ವರದಿಯಾಗಿಲ್ಲ. ಇಲ್ಲಿ ಕಳ್ಳತನ ಮಾಡಲು ಹೆದರುತ್ತಾರಂತೆ. ಒಂದು ವೇಳೆ ಕಳ್ಳತನ ಮಾಡಿದರೆ ಅಂತವರಿಗೆ ಶನಿದೇವರು ಕಠಿಣ ಶಿಕ್ಷೆ ನೀಡುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರಿಗಿದೆ.

Advertisement

 

 

ಉತ್ತರಪ್ರದೇಶದ ‘ಬಲ್ಲಿಯಾ’ ಎಂಬ ಹಳ್ಳಿಯ ನಲ್ಲಿಗಳ ನೀರಿನಲ್ಲಿ ಆರ್ರ್ಸೆನಿಕ್ ಎಂಬ ವಿಷಕಾರಿ ಅಂಶವಿರುವ ಕಾರಣ ಇಲ್ಲಿನ ಜನರಿಗೆ ಚರ್ಮದ ತೊಂದರೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಎಷ್ಟೇ ಬಾರಿ ಮನವಿ ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಜನರು ಬೇಸತ್ತು ಇನ್ನು ಪ್ರಯೋಜನವಿಲ್ಲ ಎಂದು ತಿಳಿದು ಎಲ್ಲರೂ ಒಂದಾಗಿ ಸೇರಿ ಬಾವಿಗಳಲ್ಲಿನ ಹೂಳು ತೆಗೆದು ಅಲ್ಲಿನ ನೀರನ್ನು ಬಳಸುತ್ತಿದ್ದಾರೆ.

 

ಕರ್ನಾಟಕದ ಮಂಡ್ಯ ಜಿಲ್ಲೆಯ ‘ಕೊಕ್ಕರೆ ಬೆಳ್ಳೂರು’ ಕೂಡಾ ಇತರ ದೇಶಗಳಲ್ಲಿ ಖ್ಯಾತಿ ಹೊಂದಿದೆ. ಇಲ್ಲಿನ ಜನರಿಗೆ ಕೊಕ್ಕರೆಗಳ ಮೇಲೆ ವಿಶೇಷ ಪ್ರೀತಿ ಇದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ವಿದೇಶಳಿಂದ ಪೆಲಿಕಾನ್ ಹಾಗೂ ಪೇಂಟೆಡ್​ ಸ್ಟ್ರೋಕ್​​​​ ಪಕ್ಷಿಗಳು ವಲಸೆ ಬರುತ್ತವೆ. ಒಂದು ವೇಳೆ ಪಕ್ಷಿಗಳಿಗೆ ಏನಾದರೂ ತೊಂದರೆಯಾದರೆ ಜನರು ಅವುಗಳ ಮೇಲೆ ವಿಶೇಷ ಕಾಳಜಿ ತೋರುತ್ತಾರೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ಪಕ್ಷಿಗಳಿಗೆ ಚಿಕಿತ್ಸೆ ನೀಡಿ ಅವು ಸಂಪೂರ್ಣ ಗುಣಮುಖವಾಗುವರೆಗೂ ಅಲ್ಲೇ ಇದ್ದು ನೋಡಿಕೊಳ್ಳುತ್ತಾರೆ. ಇಲ್ಲಿನ ಜನರ ಪಕ್ಷಿಗಳ ಮೇಲಿನ ಪ್ರೀತಿಗೆ ವಿದೇಶಿಗರು ಕೂಡಾ ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಹಾರ್​​ನ ‘ಧರ್ನೈ’ ಎಂಬ ಹಳ್ಳಿಯಲ್ಲಿ ಸುಮಾರು 30 ವರ್ಷಗಳಿಂದ ವಿದ್ಯುತ್ ಸಮಸ್ಯೆ ಇತ್ತು. ಇಲ್ಲಿಯೂ ಕೂಡಾ ಜನರು ಸರ್ಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋನವಾಗಲಿಲ್ಲ. ಆದ್ದರಿಂದ ಜನರು ಇಲ್ಲಿ ಸೂರ್ಯನ ಶಕ್ತಿಯನ್ನೇ ತಮ್ಮ ಸಮಸ್ಯೆಗೆ ಪರಿಹಾರವಾಗಿ ಬಳಸುತ್ತಾರೆ. ಇಲ್ಲಿ ಸೋಲಾರ್ ಪವರ್ ಸಿಸ್ಟಮ್ ಜಾರಿಗೆ ತರುತ್ತಾರೆ. ನಮ್ಮ ದೇಶದಲ್ಲಿ ಮೊಟ್ಟಮೊದಲ ಸೋಲಾರ್ ಸಿಸ್ಟಮ್ ವಿಲೇಜ್ ಎಂದು ಹೆಸರಾಗಿದೆ.

 

ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಹೆಚ್ಚು ಅಕ್ಷರಸ್ಥರಿದ್ದಾರೆ. ಈ ರಾಜ್ಯದ ‘ಪೋಥನಿಕ್ಕಡ್’ ಎಂಬ ಹಳ್ಳಿಯಲ್ಲಿ ಇರುವ ಪ್ರತಿಯೊಬ್ಬರೂ ವಿದ್ಯಾವಂತರಾಗಿದ್ದು ಇತರ ರಾಜ್ಯಗಳಿಗೆ ಮಾದರಿಯಾಗಿದೆ. 2011 ಜನಗಣತಿ ಪ್ರಕಾರ ಈ ಹಳ್ಳಿಯಲ್ಲಿದ್ದ 17,563 ಜನರಿದ್ದು ಇವರೆಲ್ಲಾ ಅಕ್ಷರಸ್ಥರು ಎನ್ನಲಾಗಿದೆ.ಗುಜರಾತ್​​ನ ‘ಪುನ್ಸಾರಿ’ ಎಂಬುದು ಬಹಳ ಚಿಕ್ಕ ಹಳ್ಳಿಯಾದರೂ ಸಿಟಿಯಲ್ಲಿರುವ ಎಲ್ಲಾ ಸೌಕರ್ಯಗಳು ಈ ಹಳ್ಳಿಯಲ್ಲಿದೆಯಂತೆ. ದಿನದ 24 ಗಂಟೆ ವೈ-ಫೈ, ಸಿಸಿಟಿವಿ, ಮಿನರಲ್ ವಾಟರ್, ಸೋಲಾರ್ ಸಿಸ್ಟಮ್ ಸೇರಿ ಎಲ್ಲಾ ವ್ಯವಸ್ಥೆಗಳೂ ಇದ್ದು ಯಾವ ನಗರಕ್ಕೇನೂ ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಿದೆ.ಇನ್ನು ಹಳ್ಳಿಯ ಜನರು ಬಡವರು, ಆಹಾರಕ್ಕೂ ಕಷ್ಟಪಡುತ್ತಾರೆ ಎಂಬ ಚಿತ್ರಣವಿದೆ. ಆದರೆ ಮಹಾರಾಷ್ಟ್ರದ ‘ಹೈವೇರ್ ಬಜಾರ್’​​​ ಎಂಬ ಹಳ್ಳಿಯಲ್ಲಿ ಎಲ್ಲರೂ ಶ್ರೀಮಂತರಂತೆ. ಹಳ್ಳಿಯ ಸುಮಾರು 60 ಜನರು ಮಿಲೇನಿಯರ್​​​ಗಳಂತೆ. ಇಲ್ಲಿ ಬಡತನದ ಮಾತೇ ಇಲ್ಲವಂತೆ. ಅಲ್ಲದೆ ಇಡೀ ದೇಶದಲ್ಲಿ ಸಿರಿವಂತ ಹಳ್ಳಿ ಎಂದೇ ಖ್ಯಾತಿ ಪಡೆದಿದೆ.

 

ಇನ್ನು ಹೆಣ್ಣು ಮಗು ಆಯ್ತು ಎಂದರೆ ಮೂಗು ಮುರಿಯುವವರ ನಡುವೆ ರಾಜಸ್ಥಾನದ ‘ಪಿಂಪ್ಲ್ಯಾಟ್ರಿ’ ಎಂಬ ಹಳ್ಳಿಯಲ್ಲಿ ಹೆಣ್ಣು ಮಗು ಜನಿಸಿದರೆ 111 ಗಿಡಗಳನ್ನು ನೆಡುತ್ತಾರಂತೆ, ಅಲ್ಲದೆ ಹಳ್ಳಿಯವರೆಲ್ಲಾ ಸೇರಿ 31 ಸಾವಿರ ರೂಪಾಯಿಯನ್ನು ಮಗುವಿನ ಹೆಸರಿಗೆ 20 ವರ್ಷಗಳ ಕಾಲ ಡೆಪಾಸಿಟ್ ಮಾಡುತ್ತಾರಂತೆ. ಅಲ್ಲದೆ, ಹೆಣ್ಣು ಮಗು ಜನಿಸಿದರೆ ಹಬ್ಬವಾಗಿ ಆಚರಣೆ ಮಾಡುತ್ತಾರಂತೆ. ಇಲ್ಲಿನ ಜನರು ಪ್ರಕೃತಿಪ್ರಿಯರಾಗಿದ್ದು ಇಲ್ಲಿ ಹಸಿರೇ ತುಂಬಿದೆ.ಒಟ್ಟಿನಲ್ಲಿ ಹಳ್ಳಿಗಳು ಎಂದರೆ ಮೂಗು ಮುರಿಯುವವರನ್ನು ಈ ಹಳ್ಳಿಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿರುವುದಂತೂ ನಿಜ. ಈ ಎಲ್ಲಾ ಹಳ್ಳಿಗಳಂತೆ ಭಾರತದ ಎಲ್ಲಾ ಹಳ್ಳಿಗಳೂ ಅಭಿವೃದ್ಧಿಯಾದರೆ ಎಷ್ಟು ಚೆಂದ ಅಲ್ಲವೇ..?

RKS

Advertisement
Share this on...