ಮಹಾಭಾರತದ ಈ ಒಂದು ಸನ್ನಿವೇಶದಲ್ಲಿ ಅಂದರೆ ಪಗಡೆ ಆಟ ಆಡುವ ಸಮಯದಲ್ಲಿ ಸಂದಿಗ್ನ ಪರಿಸ್ಥಿತಿಯಲ್ಲಿದ್ದ ಪಾಂಡವರ ಪರ ಶ್ರೀಕೃಷ್ಣಪರಮಾತ್ಮ ಯಾಕೆ ಬರಲಿಲ್ಲ ಗೊತ್ತಾ!

in ಕನ್ನಡ ಮಾಹಿತಿ 959 views

ನಮ್ಮ ಭಾರತ ದೇಶದಲ್ಲಿ ಶ್ರೇಷ್ಠ ಗ್ರಂಥಗಳಲ್ಲಿ ಒಂದಾದ ಅಂತಹ ಮಹಾಭಾರತ ಗ್ರಂಥವೊಂದು ಅದೆಷ್ಟು ಬಾರಿ ಮಹಾಭಾರತವನ್ನು ನೀವು ಓದಿದರು ನಿಮಗೆ ತೃಪ್ತಿ ಅನ್ನಿಸುವುದಿಲ್ಲ ಅಂತಹ ಗ್ರಂಥ ನಮ್ಮ ಮಹಾಭಾರತ ಗ್ರಂಥ ಪ್ರತಿಯೊಂದು ಪಾತ್ರಗಳ ಅನಾವರಣ ಆಗುವುದು ಒಂದೊಂದು ವಿಶೇಷವಾಗಿರುತ್ತದೆ ಮತ್ತು ಅದಕ್ಕೆ ಪೂರಕವೆಂಬಂತೆ ಸಾಕಷ್ಟು ಪುರಾವೆಗಳು ಸಿಗಲು ಆರಂಭವಾಗುತ್ತದೆ ಮತ್ತು ಮಹಾಭಾರತವನ್ನು ನೀವು ಎಷ್ಟು ಬಾರಿ ಓದಿದರೂ ನಿಮಗೆ ಪೂರ್ಣಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಒಂದು ವೇಳೆ ನೀವು ಮಹಾಭಾರತವನ್ನು ಅರ್ಥಮಾಡಿಕೊಂಡಿದ್ದೇ ಆದಲ್ಲಿ ನೀವು ನಿಮ್ಮ ಜೀವನವನ್ನು ಸುಂದರವಾಗಿ ಸುಖವಾಗಿ ಸುಗಮವಾಗಿ ನೆಮ್ಮದಿಯಿಂದ ನಡೆಸಿಕೊಂಡು ಹೋಗಬಹುದು ಅಂತಹ ಜೀವನದ ಪಾಠದ ಅಧ್ಯಾಯಗಳು ನಮ್ಮ ಮಹಾಭಾರತದ ಗ್ರಂಥದಲ್ಲಿ ಸಿಗುತ್ತವೇ.

Advertisement

 

Advertisement

Advertisement

 

Advertisement

ಸ್ನೇಹಿತರೆ ಅವತ್ತು ಶಕುನಿಯು ಧರ್ಮರಾಯನ ಮನೆಗೆ ಬಂದು ಪಗಡೆ ಆಟವಾಡಲು ಪಾಂಡವರ ದೊಡ್ಡಣ್ಣ ಧರ್ಮರಾಯನಿಗೆ ಆಹ್ವಾನ ನೀಡುತ್ತಾನೆ ಪೂರ್ವಾಪರ ಯೋಚಿಸದೆ ಅವತ್ತು ಧರ್ಮರಾಯ ಶಕುನಿಯ ಮಾತನ್ನು ಕೇಳಿದಾಗ ಯಾವುದೇ ರೀತಿಯಾದ ವಿವೇಚನೆ ಮತ್ತು ಆಲೋಚನೆಯನ್ನು ಮಾಡದೆ ಮತ್ತು ಶಕುನಿಯ ಕುತಂತ್ರ ಅರ್ಥಮಾಡಿಕೊಳ್ಳದ ಧರ್ಮರಾಯ ಶಕುನಿಯ ಮಾತನ್ನು ಕೇಳಿ ಪಗಡೆಯಾಟಕ್ಕೆ ಸಿದ್ಧವಾಗುತಾನೇ ನೆನಪಿರಲಿ ಸ್ನೇಹಿತರೆ ಇಲ್ಲಿ ಧರ್ಮರಾಯ ಎಂದು ಶ್ರೀಕೃಷ್ಣ ಪರಮಾತ್ಮನ ಆಜ್ಞೆ ಇಲ್ಲದೇ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ ಆದರೆ ಪಗಡೆ ಆಟ ಆಡುವ ವಿಚಾರವನ್ನು ಮಾತ್ರ ಶ್ರೀಕೃಷ್ಣ ಪರಮಾತ್ಮನಿಗೆ ಧರ್ಮರಾಯ ತಿಳಿಸುವುದಿಲ್ಲ ಕಾರಣ ಧರ್ಮರಾಯನಿಗೆ ಇದು ಸುಲಭ ಆಟ ಈ ಆಟದಿಂದ ನಾವು ನಮ್ಮ ಐದು ಹಳ್ಳಿಗಳನ್ನು ಯುದ್ಧ ಮಾಡದೆ ಯಾವುದೇ ಸಾವು-ನೋವುಗಳು ಇಲ್ಲದೆ ಸುಲಭವಾಗಿ ಪಡೆದುಕೊಳ್ಳಬಹುದು ಯಾವುದೇ ಕಿರಿಕಿರಿ ಇಲ್ಲದೆ ಪಡೆದುಕೊಳ್ಳಬಹುದು ಮತ್ತು ಇದು ಅಲ್ಪ ಸಮಯದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಭಾವಿಸುತ್ತಾನೆ ಇಲ್ಲಿ ಧರ್ಮರಾಯ.

 

 

ಇಲ್ಲೇ ಪ್ರಿಯ ಮಿತ್ರರೇ ಧರ್ಮರಾಯನ ವಿವೇಕ ಮತ್ತು ಆಲೋಚನೆ ಕಳೆದುಕೊಂಡಿದ್ದು ಧರ್ಮರಾಯನಿಗೆ ಶಕುನಿ ಬಂದು ಪರಿಪರಿಯಾಗಿ ಪಗಡೆ ಆಟ ಆಡು ಎಂದಾಗ ಅದರಲ್ಲಿ ಏನೋ ಇದೆ ಎಂದು ಅರ್ಥಮಾಡಿಕೊಳ್ಳದಷ್ಟು ಮೂರ್ಖನಾಗಿ ಧರ್ಮರಾಯ ಈ ಒಂದು ಸನ್ನಿವೇಶದಲ್ಲಿ ಮತ್ತು ಮಹಾಭಾರತದಲ್ಲಿ ಧರ್ಮರಾಯ ನಮಗೆ ಕಾಣಿಸುತ್ತಾರೆ,ಇಲ್ಲಿ ಆಟದ ನಿಯಮ ಒಬ್ಬ ರಾಜ ಮತ್ತು ಇನ್ನೊಬ್ಬ ರಾಜನ ವಿರುದ್ಧ ಪಗಡೆ ಆಟ ಆಡಬೇಕು ಆದರೆ ಇಲ್ಲಿ ದುರ್ಯೋಧನ ಪರ ಶಕುನಿ ಆಟ ಆಡಲು ಆರಂಭಿಸುತ್ತಾನೆ ಆಗಲಾದರೂ ಎಚ್ಚೆತ್ತುಕೊಳ್ಳುತ್ತಾನಾ ಇಲ್ಲ ಸ್ನೇಹಿತರೆ ಇಲ್ಲಿ ಕೂಡ ಧರ್ಮರಾಯ ತನ್ನ ಪರವಾಗಿ ಶ್ರೀಕೃಷ್ಣ ಪರಮಾತ್ಮನನ್ನು ಕರೆದಿದ್ದರೆ ಬಹುಶಃ ಅಲ್ಲಿ ಒಂದು ದುರ್ಘಟನೆ ನಡೆಯುತ್ತಿರಲಿಲ್ಲವೇನೋ.

 

 

ಇಲ್ಲೂ ಮತ್ತೆ ತನ್ನ ವಿವೇಕ ಮತ್ತು ಆಲೋಚನೆಯನ್ನು ಕಳೆದುಕೊಂಡ ಧರ್ಮರಾಯ ಪಗಡೆಯಾಟದಲ್ಲಿ ತನ್ನ ನಾಲ್ವರು ತಮ್ಮಂದಿರನ್ನು ಸೋತು ಮತ್ತೆ ತನ್ನನ್ನು ತಾನೇ ಪಗಡೆಯಾಟದಲ್ಲಿ ಪಣಕ್ಕೆ ಇಟ್ಟುಕೊಳ್ಳುತ್ತಾನೇ ಕಡೆಗೆ ತಾನು ಸೋತು ಕೌರವರ ದಾಸನಾಗುತ್ತಾನೆ ಕೌರವರ ಮುಂದೆ ನಾಚಿಕೆಯಿಂದ ತಲೆತಗ್ಗಿಸಿ ಕೂತುಕೊಳ್ಳುತ್ತಾರೆ ಇಷ್ಟಾದಮೇಲೂ ಸಹ ಧರ್ಮರಾಯ ತನ್ನ ವಿವೇಚನೆ ಮತ್ತು ಆಲೋಚನೆಯನ್ನು ಮರೆತು ಎಷ್ಟು ಮೂರ್ಖನಾಗಿ ವರ್ತಿಸುತ್ತಾನೆ ಎಂದರೆ ಅಲ್ಲಿ ಶಕುನಿಯ ಮಾತಿನ ತಂತ್ರ-ಕುತಂತ್ರ ಗಳನ್ನು ಅರ್ಥಮಾಡಿಕೊಳ್ಳದೆ ಮಾನವೀಯ ಮೌಲ್ಯಗಳನ್ನು ಮರೆತು ಅಲ್ಲಿ ಶಕುನಿ ಹೇಳಿದ ಒಂದು ಮಾತನ್ನು ಕೇಳುತ್ತಾನೆ.

 

 

ಶಕುನಿ ಪರಿಪರಿಯಾಗಿ,ಇದೊಂದು ಸಲ ಪ್ರಯತ್ನಿಸಿ ನೋಡಿ ದರ್ಮರಾಯ ಯಾರಿಗೆ ಗೊತ್ತು ಅದೃಷ್ಟಲಕ್ಷ್ಮಿ ನಿನ್ನ ಪಾಲಾದರೂ ಆಗಬಹುದು ಎಂದು ಶಕುನಿ ಹೇಳಿದಾಗ ನೀನು ಕಳೆದುಕೊಂಡ ನಿನ್ನ ಇಂದ್ರಪ್ರಸ್ಥ ಮತ್ತು ಹಳ್ಳಿಗಳು ಮತ್ತು ನಿನ್ನ ಸರ್ವಸ್ವವಾದ ತಮ್ಮಂದಿರನ್ನು ಮತ್ತು ನಿನ್ನನ್ನು ದಾಸ ಮುಕ್ತರನ್ನಾಗಿ ಮಾಡುತ್ತೇವೆ ಆದರೆ ನೀನು ಪಗಡೆಯಾಟದಲ್ಲಿ ದ್ರೌಪದಿಯನ್ನು ಪಣವಾಗಿ ಇಡು ಯಾರಿಗೆ ಗೊತ್ತು ಧರ್ಮರಾಯ ಅದೃಷ್ಟಲಕ್ಷ್ಮಿ ಈ ಬಾರಿ ನಿಮಗೆ ಆಗಬಹುದಲ್ಲ ಮತ್ತೆ ನೀನು ಕಳೆದುಕೊಂಡಿರುವ ರಾಜ್ಯ ಮತ್ತು ನಿನ್ನ ತಮ್ಮಂದಿರು ನೀನು ದುರ್ಯೋಧನನಿಂದ ನೀವು ದಾಸ ಮುಕ್ತರಾಗಬಹುದು ಎಂದು ಶಕುನಿ ಹೇಳಿದಾಗ ಮತ್ತೆ ಮತ್ತೆ ಕೇಳಿದಾಗಲೂ ಅರ್ಥಮಾಡಿಕೊಳ್ಳದ ಧರ್ಮರಾಯ ದ್ರೌಪತಿಗೆ ಒಂದು ಮಾತನ್ನು ಕೇಳದೆ ಪಗಡೆಯಾಟದಲ್ಲಿ ದ್ರೌಪದಿಯನ್ನು ಪಣವಾಗಿ ಇಡುತ್ತಾನೆ.

 

 

 

ಇಲ್ಲೂ ಕೊಡಾ ದ್ರೌಪತಿಯನ್ನು ಸೋತು ನಾಚಿಕೆಯಿಂದ ತಲೆತಗ್ಗಿಸಿ ಧರ್ಮರಾಯ ಸುಮ್ಮನೆ ಇರುತ್ತಾನೆ ಅಗಾ ಇಡಿ ಕೌರವ ಸಭೆ ಇವರನ್ನು ನೋಡಿ ನಗುತ್ತಿರುತ್ತದೆ ಆಗಲೇ ದುರ್ಯೋಧನ ಶಕುನಿ ಮಾಮ ಶ್ರೀ ಆ ಪಾಂಚಾಲಿಯನ್ನು ನಮ್ಮ ರಾಜ್ಯಸಭೆ ಕರೆದುಕೊಂಡು ಬನ್ನಿ ಇದು ನನ್ನ ಆಜ್ಞೆ ಎಂದು ಹೇಳಿದ ತಕ್ಷಣ ದುಶ್ಯಾಸನ ಇಂದ್ರಪ್ರಸ್ಥಕ್ಕೆ ಹೋಗಿ ದ್ರೌಪದಿಯನ್ನು ಎಳೆದು ಕೌರವನ ಮುಂದೆ ನಿಲ್ಲಿಸುತ್ತಾನೆ ಆಗ ಇದರ ವಿರುದ್ಧ ವಿರೋಧಿಸುವನು ಇದು ನೆನಪಿರಲಿ ಸ್ನೇಹಿತರೇ ನಿಮಗೆ ಕೌರವ ಸಭೆಯಲ್ಲಿ ಕೌರವರ ವಿರುದ್ಧ ಓಬ್ಬ ಕೌರವ ಮಾತನಾಡುತ್ತಾನೇ ಆತ ಬೇರೆ ಯಾರು ಅಲ್ಲ ದುರ್ಯೋಧನನ ತಮ್ಮ ವಿಕಿರಣ ಮಾತ್ರ ಕೌರವರ ವಿರುದ್ಧ ಮಾತನಾಡುತ್ತಾನೆ.

 

 

 

ಈತ ದುರ್ಯೋಧನನ ಸಹೋದರ ಆದರೆ ಈತನ ಮಾತಿಗೆ ಯಾರು ಬೆಲೆ ಕೊಡುವುದಿಲ್ಲ ದುಶ್ಯಾಸನ ದ್ರೌಪದಿಯ ಸೀರೆಯನ್ನು ಏಳಿಯು ಸಮಯದಲ್ಲಿ ದ್ರೌಪತಿ ವಿವೇಚನೆವಂತೇ ಯಾಗಿ ತನ್ನ ಅಣ್ಣನಾದ ಶ್ರೀಕೃಷ್ಣನನ್ನು ಕೃಷ್ಣ ಅಭಯಂ ಶ್ರೀಕೃಷ್ಣ ಅಭಯಂ ಎಂದು ಕೇಳಿದ ತಕ್ಷಣ ಶ್ರೀಕೃಷ್ಣ ತನ್ನ ಲೀಲಾಜಾಲದಿಂದ ದ್ರೌಪದಿಯ ಮಾನವನ್ನು ಉಳಿಸುತ್ತಾನೆ ನೋಡಿದ್ರಲ್ಲ ಸ್ನೇಹಿತರೆ ಇದು ಧರ್ಮರಾಯನ ಅವಿವೇಕಿತನ ಮತ್ತು ವಿವೇಚನಾರಹಿತವಾದ ಯೋಚನೆಗಳು ಅಲ್ಲಿ ಶ್ರೀಕೃಷ್ಣ ಬರಲು ಆಗಲಿಲ್ಲ ಮತ್ತು ಶ್ರೀಕೃಷ್ಣನ್ನು ಬಿಟ್ಟುಹೋದ ಸಮಯ ಈ ರೀತಿಯಾದ ಕೆಟ್ಟ ಸಂದರ್ಭಗಳು ಪಾಂಡವರಿಗೆ ಬರಲು ಮುಖ್ಯ ಕಾರಣವಾಯಿತು ಇದೇ ಕಾರಣಕ್ಕೆ ಶ್ರೀಕೃಷ್ಣ ಪರಮಾತ್ಮ ಪಗಡೆಯಾಟದಲ್ಲಿ ಇರಲಿಲ್ಲ ಯಾವಾಗ ದ್ರೌಪತಿಯ ವೇದೇನೆಯ ಮನವಿಯನ್ನು ಆಲಿಸಿದ ಆಗಲೇ ಶ್ರೀಕೃಷ್ಣಪರಮಾತ್ಮ ಅಲ್ಲಿ ತನ್ನ ಲೀಲಾಜಲದಿಂದ ದ್ರೌಪದಿಯ ಮಾನವನ್ನು ಉಳಿಸಿ ದ್ರೌಪತಿಯ ಪ್ರಾರ್ಥನೆಗೆ ಅಭಯ ತೋರಿಸಿ ಕಾಪಾಡಿದ್ದು.

Article by :sandhi chidananda

Advertisement
Share this on...