ಹನಿಮೂನ್ ಗೆ ಹೋಗಿದ್ದ ಈ ಜೋಡಿ ಅರ್ಧಕ್ಕೆ ವಾಪಸ್ ಬಂದಿದ್ಧು ಯಾಕೆ.?

in Kannada News 44 views

ಕನ್ನಡದ ರಾಪ್ ಮಾಂತ್ರಿಕ ಚಂದನ್ ಶೆಟ್ಟಿ ಹಾಗೂ ಮೈಸೂರಿನ ಬೊಂಬೆ ನಿವೇದಿತಾ ಗೌಡ ಅವರು ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮಧುಮಂಚದಲ್ಲಿ ತೇಲಾಡವ ಸಲುವಾಗಿ ವಿದೇಶಕ್ಕೆ ತೆರಳಿದ್ದರು. ಇದೀಗ ಮೈಸೂರಿಗೆ ಮರಳಿ ಬಂದಿರುವ ಈ ಜೋಡಿ, ಪ್ರವಾಸದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕ್ಲಾರಿಟಿ ನೀಡಿದ್ದಾರೆ. ಹೌದು, ದೇಶಾದ್ಯಂತ ಹರಡಿರುವ ಮಾರಣಾಂತಿಕ ಸೋಂಕು ಕೊರೋನಾ ಬಿಸಿ, ಚಂದು ಮತ್ತು ನಿವಿ ಅವರ ಹನಿಮೂನ್ ಗೂ ಸಹ ತಟ್ಟಿದ್ದು, ಮೈಸೂರಿಗೆ ಆಗಮಿಸುತ್ತಿದ್ದಂತೆ ನವ ಜೋಡಿಗಳನ್ನು ಸೆಲಬ್ರಿಟಿ ಎಂದು ಬಿಟ್ಟುಕೊಡದೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಅಧ್ಯಕ್ಷ ರಫೀಕ್ ಅಲಿ ಅವರು ಮನವಿ ಸಲ್ಲಿಸಿದ್ದರು.

Advertisement

 

Advertisement

Advertisement

 

Advertisement

ಇದೀಗ ತಮ್ಮ ಪ್ರವಾಸ ಹಾಗೂ ಕೊರೋನಾ ಬಗ್ಗೆ ಮಾತನಾಡಿರುವ ಈ ನವಜೋಡಿಗಳು, ಇದೇ ತಿಂಗಳು ಒಂದನೇ ತಾರೀಖು ನಾವು ನೆದರ್ಲ್ಯಾಂಡ್ ಗೆ ತೆರಳಿದ್ದು, ನಂತರ ಅಲ್ಲಿ ಮೂರು ದಿನಗಳ ಕಾಲ ಉಳಿದುಕೊಂಡಿದ್ದೆವು. ನೆದರ್ಲ್ಯಾಂಡ್ ಪ್ರವಾಸದ ನಂತರ ಪ್ಯಾರಿಸ್ ಗೆ ಹೋಗಬೇಕಿತ್ತು. ಆದರೆ ಅಲ್ಲಿನ ಪರಿಸ್ಥಿತಿ ಸರಿಯಾಗಿಲ್ಲದ ಕಾರಣ ಅಲ್ಲಿನ ಪ್ರವಾಸವನ್ನು ಕ್ಯಾನ್ಸಲ್ ಮಾಡಿಕೊಂಡೆವು. ನಂತರ ಆರನೇ ತಾರೀಖು ನಾವು ಕರ್ನಾಟಕಕ್ಕೆ ಮರಳಿ ಬಂದು ಬಿಟ್ಟಿದ್ದೇವೆ. ನಾವು ಹೋದ ಜಾಗದಲ್ಲಿ ಕೂರೋನಾ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆ ಸೋಂಕು ಅಷ್ಟಾಗಿ ಎಲ್ಲಿಯೂ ಕೂಡ ಹರಡಿರಲಿಲ್ಲ ಎಂದು ತಿಳಿಸಿದ್ದಾರೆ.

 

 

 

ಇನ್ನು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರವಾಸಕ್ಕೆ ಹೊರಡಬೇಕು ಎಂದು ನಿರ್ಧರಿಸಿದಾಗ ಬೇರೆ ಯಾವ ದೇಶದಲ್ಲೂ ಈ ಕೊರೋನಾ ಸೋಂಕು ಹರಡಿರಲಿಲ್ಲ. ಚೀನಾದಲ್ಲಿ ಮಾತ್ರ ಇದು ಕಂಡು ಬಂದಿತ್ತು.ಈ ನವ ಜೋಡಿಗಳು ಪ್ರವಾಸಕ್ಕೆ ಹೋದಾಗ ಮಾತ್ರ ಈ ವೈರಸ್ ಎಲ್ಲೆಡೆ ಹರಡಿದೆ ಎಂಬುದು ತಿಳಿದು ಬಂದಿದೆ. ಆದ ಕಾರಣ ನೆದರ್ಲ್ಯಾಂಡ್ ಪ್ರವಾಸ ಮುಗಿಯುತ್ತಿದ್ದಂತೆ ಪ್ಯಾರೀಸ್ ಪ್ರವಾಸವನ್ನು ಕ್ಯಾನ್ಸಲ್ ಮಾಡಿಕೊಂಡು ಮತ್ತೆ ಭಾರತ ದೇಶಕ್ಕೆ ಹಿಂತಿರುಗಿದ್ದಾರೆ. ಇನ್ನು ಚೀನಾ ಸೇರಿದಂತೆ ಇಟಲಿ ದೇಶದಲ್ಲೂ ಈ ಕೊರೋನ ವೈರಸ್ ಹೆಚ್ಚಾಗಿ ಹರಡಿಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ನವಜೋಡಿಗಳು ಇಟಲಿಯಲ್ಲಿ ಹನಿಮೂನ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಟ್ರಾಲ್ಸ್ ಗಳು ಸುದ್ದಿಗಳು ಹರಿದಾಡುತ್ತಿತ್ತು.

 

 

Image result for chandan and niveditha gowda

 

ಇದೀಗ ಈ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಈ ನವ ಜೋಡಿಗಳು ನಾವು ಇಟಲಿಗೆ ಹೋಗಿಲ್ಲ. ಸುಮ್ಮನೆ ಇಟಲಿಗೆ ಹೋಗಿದ್ದೇವೆ ಅಂತ ಯಾಕೆ ರೂಮರ್ಸ್ ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ಸಾಕ್ಷಿ ಪುರಾವೆಗಳು ಇಲ್ಲದೆ ಸುಮ್ಮನೆ ಈ ರೀತಿ ಮಾತನಾಡುತ್ತಿರುವುದು ತಪ್ಪು ಎಂದು ಹೇಳಿದ್ದಾರೆ. ಮೊದಲು ನಮ್ಮ ಆರೋಗ್ಯ ಮುಖ್ಯ ಆದ ಕಾರಣ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿ ಹಿಂತಿರುಗಿ ಮರಳಿ ಬಂದಿರುವುದಾಗಿ ಈ ನವ ಜೋಡಿಗಳು ತಿಳಿಸಿದ್ದಾರೆ. ಸದ್ಯ ನವ ಜೋಡಿಗಳು ಇದೀಗ ಮೈಸೂರಿನಲ್ಲಿದ್ದಾರೆ.

 

“ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯಾಲಯ” ಪ್ರೀತಿ-ಪ್ರೇಮ ವಿಚಾರದಲ್ಲಿ, ನೀವು ಇಷ್ಟ ಪಟ್ಟವರು ನಿಮ್ಮಂತ ಆಗಲು ಕರೆಮಾಡಿ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ . ಡಾ. ಪವನ್ ಶರ್ಮ ಗುರೂಜಿ 9535242057

Advertisement
Share this on...