ನಾನು ಸರ್ಕಸ್​​​​​​​ನಲ್ಲಿರುವ ಜಗ್ಲರ್​​​ನಂತೆ ಅನ್ನಿಸುತ್ತಿದೆ….ಕ್ಯೂಟ್ ಹುಡುಗಿ ಶ್ರೀಲೀಲಾ ಹೀಗೆ ಹೇಳಿದ್ದೇಕೆ…?

in ಮನರಂಜನೆ 56 views

‘ಕಿಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಹೃದಯ ಕದ್ದ ಕ್ಯೂಟ್ ಹುಡುಗಿ ಶ್ರೀಲೀಲಾ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅತಿ ಕಡಿಮೆ ಅವಧಿಯಲ್ಲೇ ಹೆಚ್ಚಿನ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿಯರಲ್ಲಿ ಈ ಚೆಲುವೆ ಕೂಡಾ ಒಬ್ಬರು. ಕಿಸ್ ನಂತರ ಶ್ರೀಮುರಳಿ ಜೊತೆ ಭರಾಟೆ ಚಿತ್ರದಲ್ಲಿ ನಟಿಸಿದ ಕ್ಯೂಟ್ ಹುಡುಗಿ ಶ್ರೀಲೀಲಾಗೆ ತೆಲುಗು ಚಿತ್ರರಂಗದಿಂದ ಕೂಡಾ ಆಫರ್ ಬಂತು. ಹಿರಿಯ ನಟ ಶ್ರೀಕಾಂತ್ ಮೇಕ ಪುತ್ರ ರೋಷನ್​​​​​​​​ನೊಂದಿಗೆ ಪೆಳ್ಳಿ ಸಂದಡಿ ಚಿತ್ರದ ಮೂಲಕ ಅವರು ಟಾಲಿವುಡ್​​​​ಗೆ ಎಂಟ್ರಿ ಕೊಟ್ಟರು. ಯೂಟ್ಯೂಬ್​​​​​​ನಲ್ಲಿ ಪೆಳ್ಳಿ ಸಂದಡಿ ಚಿತ್ರದ ಮಧುರಾ ನಗರಿಲೋ… ಹಾಡಿನ ತುಣುಕು ನೋಡಿದ ಯುವಜನತೆ ಶ್ರೀಲೀಲಾಗೆ ಫಿದಾ ಆಗಿಬಿಟ್ರು. ತೆಲುಗಿನಲ್ಲಿ ಒಂದು ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಆಕೆಗೆ ಭಾರೀ ಡಿಮ್ಯಾಂಡ್ ಶುರುವಾಯ್ತು.

Advertisement

ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಕೂಡಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಇತ್ತೀಚೆಗೆ ಅದ್ಧೂರಿಯಾಗಿ ಈ ಚಿತ್ರದ ಮುಹೂರ್ತ ಬೆಂಗಳೂರಿನಲ್ಲಿ ನೆರವೇರಿತು. ಕಿರೀಟಿ ಮೊದಲ ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದ್ದು, ಈ ಚಿತ್ರವನ್ನು ತೆಲುಗಿನ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ವರಾಹಿ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ತೆಲುಗಿನಲ್ಲಿ ಕೂಡಾ 4 ದಿನಗಳ ಹಿಂದಷ್ಟೇ ಶ್ರೀಲೀಲಾ ಹಾಗೂ ನಿತಿನ್​​​​​​​​​ ಅಭಿನಯದ ಹೊಸ ಸಿನಿಮಾ ಅನೌನ್ಸ್ ಆಗಿದೆ. ನಿತಿನ್​ ಹೋಂ ಬ್ಯಾನರ್​ ಅಡಿ​​ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು ವಕ್ಕಂತಂ ವಂಶಿ, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹ್ಯಾರಿಸ್ ಜಯರಾಜ್ ಈ ಸಿನಿಮಾ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಕನ್ನಡ ಚಿತ್ರರಂಗ, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವುದರ ಜೊತೆಗೆ ಶ್ರೀಲೀಲಾ, ವಿದ್ಯಾಭ್ಯಾಸ ಹಾಗೂ ಸಮಾಜಸೇವೆಯಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ.

Advertisement

ಶ್ರೀಲೀಲಾ ತಾಯಿ ಸ್ವರ್ಣಲತಾ ಸ್ತ್ರೀರೋಗ ತಜ್ಞೆಯಾಗಿದ್ದು ಅಮ್ಮನಂತೆ ತಾನೂ ಕೂಡಾ ವೈದ್ಯೆಯಾಗಬೇಕು ಎಂಬುದು ಶ್ರೀಲೀಲಾ ಕನಸು. ಮುಂಬೈನಲ್ಲಿ ಮೆಡಿಕಲ್ ಓದುತ್ತಿರುವ ಶ್ರೀಲೀಲಾ ವಿದ್ಯಾಭ್ಯಾಸ, ಚಿತ್ರರಂಗ, ಸಮಾಜಸೇವೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಅನಾಥಾಶ್ರಮದಲ್ಲಿ ಎರಡು ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಶ್ರೀಲೀಲಾ, “ನಾನು ಸರ್ಕಸ್​​​​​​​ನಲ್ಲಿರುವ ಜಗ್ಲರ್​​​​​​ ಎಂದು ಭಾಸವಾಗುತ್ತಿದೆ. ಎಡಗೈ, ಬಲಗೈ ಹಾಗೂ ಮೇಲಿರುವ ಚೆಂಡುಗಳನ್ನು ಜಗ್ಲರ್ ಬ್ಯಾಲೆನ್ಸ್ ಮಾಡುವಂತೆ ನಾನೂ ಕೂಡಾ ಮಾಡಬೇಕಿದೆ. ಯಾವ ಚೆಂಡುಗಳನ್ನೂ ಬಿಡುವಂತಿಲ್ಲ. ನಾನು ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಬಂದೆ. ಹಾಗಂತ ನಾನು ವಿದ್ಯಾಭ್ಯಾಸವನ್ನು ಕಡೆಗಣಿಸುವಂತಿಲ್ಲ. ಯಾರೊಂದಿಗೂ ನಾನು ರೇಸ್​​​​​ನಲ್ಲಿ ಇರಲು ಬಯಸುವುದಿಲ್ಲ. ನಟನೆ ಹಾಗೂ ಓದು ಎರಡನ್ನೂ ಬ್ಯಾಲೆನ್ಸ್ ಮಾಡುತ್ತೇನೆ” ಎಂದು ಶ್ರೀಲೀಲಾ ಹೇಳಿದ್ದಾರೆ.

Advertisement

ಕನ್ನಡದಲ್ಲಿ ಶ್ರೀಲೀಲಾ ಅಭಿನಯದ ‘ಬೈ ಟು ಲವ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಧನ್ವೀರ್ ಜೊತೆ ನಟಿಸಿದ ಈ ಚಿತ್ರ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಕನ್ನಡದಲ್ಲಿ ಶ್ರೀಲೀಲಾ ಧ್ರುವ ಸರ್ಜಾ ಜೊತೆ ‘ದುಬಾರಿ’ ಚಿತ್ರದಲ್ಲಿ ನಟಿಸಬೇಕಿದೆ. ಆದರೆ ಸದ್ಯಕ್ಕೆ ಈ ಸಿನಿಮಾ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ತೆಲುಗಿನಲ್ಲಿ ಧಮಾಕಾ ಸಿನಿಮಾ ಬಿಡುಗಡೆಗೆ ಸಿದ್ಧವಿದೆ.
-ರಕ್ಷಿತ ಕೆ.ಆರ್​​.ಎಸ್

Advertisement

Advertisement
Share this on...