ಅಲ್ಲು ಅರ್ಜುನ್ ಅವರ ಪುಷ್ಪಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ದರ್ಶನ್ !?

in ಸಿನಿಮಾ 39 views

ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಎಂದೇ ಖ್ಯಾತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪರಭಾಷ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರಾ? ಎಂಬುವಂತಹ ಪ್ರಶ್ನೆ ಬಹಳ ದಿನಗಳ ಹಿಂದೆನೇ ಸಿಕ್ಕಾಪಟ್ಟೆ ಸುದ್ಧಿಯಲ್ಲಿತ್ತು. ಇದೀಗ ಇಂತಹದೊಂದೆ ಮಾತು ಮತ್ತೊಮ್ಮೆ ಸಾಮಾಜಿಲ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇದಕ್ಕೆಲ್ಲಾ ಕಾರಣವೇನೆಂದರೆ ಅಭಿಮಾನಿಗಳ ಪ್ರೀತಿಯ ದಾಸನಾದ ದಚ್ಚು ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕರ ಜೊತೆ ಕುಳಿತು ಫೋಟೊವನ್ನು ತೆಗೆಸಿಕೊಂಡಿರುವುದು.ಇದೇ ಕಾರಣದಿಂದಾಗಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಡಿ ಬಾಸ್ ಟಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ.

Advertisement

 

Advertisement

Advertisement

 

Advertisement

ಏಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಫೋಟೋದಲ್ಲಿ ಕುಳಿತಿರುವ ನಿರ್ದೇಶಕರ ಹೆಸರು ಸುಕುಮಾರ್ ಎಂದು. ಅಂದಹಾಗೆ ಸುಕುಮಾರ್ ಅವರು ತೆಲುಗು ಚಿತ್ರರಂಗದಲ್ಲಿ ಬ್ಯಾಕ್ ಟೂ ಬ್ಯಾಕ್ ಹಿಟ್ ಚಿತ್ರವನ್ನು ನೀಡಿರುವ ನಿರ್ದೇಶಕರು. ಇದೀಗ ಸುಕುಮಾರ್ ಮತ್ತೊಂದು ಸಿನಿಮಾವನ್ನು ಮಾಡುತ್ತಿದ್ದು, ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಸುದ್ಧಿ ಮಾಡುತ್ತಿದೆ.

ಈ ಹಿಂದೆ ನಿರ್ದೇಶಕ ಸುಕುಮಾರ್ ಅವರು ಆರ್ಯ, ಆರ್ಯ2, ರಂಗಸ್ಥಳಂ ಎಂಬುವಂತಹ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ಅವರು ಇದೀಗ ಮತ್ತೊಮ್ಮೆ ಅಲ್ಲು ಅರ್ಜುನ್ ಅವರ ಜೊತೆ ಪುಷ್ಪಾ ಎಂಬ ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ್ದಾರೆ. ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾದ ಫಸ್ಟ್​ಲುಕ್​ನಲ್ಲಿ ಅರ್ಜುನ್ ಸಖತ್ ರಗಡ್​ ಆಗಿ ಕಾಣಿಸಿಕೊಳ್ಳುವ ಮೂಲಕ ಈ ಹಿಂದಿನಂತಲ್ಲ, ಈ ಬಾರಿ ಎಂದು ಸಾರಿದ್ದರೇ.

 

 

ತೆಲುಗು ಸೇರಿದಂತೆ ಕನ್ನಡ, ತಮಿಳು, ತೆಲುಗು, ಹಾಗೂ ಹಿಂದಿಯಲ್ಲಿ ಪುಷ್ಪಾ ಸಿನಿಮಾದ ಪಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಫಸ್ಟ್ ಲುಕ್ ಮೂಲಕವೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದೆ. ಇದರ ಬೆನ್ನಲ್ಲೇ ಈ ಚಿತ್ರದೊಂದಿಗೆ ದರ್ಶನ್ ಅವರ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಪುಷ್ಪಾ ಸಿನಿಮಾದಲ್ಲಿ ಡಿ ಬಾಸ್, ಅಲ್ಲು ಅರ್ಜುನ್ ಅವರಿಗೆ ಟಕ್ಕರ್ ಕೊಡುವಂತಹ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದ್ದು  ಈಗಾಗಲೇ ನಿರ್ದೇಶಕ ಸುಕುಮಾರ್ ಅವರ ಜೊತೆ ಡಿ ಬಾಸ್ ಮಾತುಕತೆ ಮುಗಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

 

ಆದರೆ ಈ ಸದ್ಧಿ ನಿಜನಾ ಎಂದು ದಾಸನ ಆಪ್ತರ ಬಳಿ ವಿಚಾರಿಸಿದಾಗ, ದೊರೆತಂತಹ ವಿಚಾರವೇ ಬೇರೆಯಾಗಿದೆ. ಏಕೆಂದರೆ ದರ್ಶನ್ ಅವರು ಸುಕುಮಾರ್ ಅವರನ್ನು ಭೇಟಿಯಾಗಿ ವರ್ಷಗಳೇ ಕಳೆದಿವೆಯಂತೆ. ಕಳೆದ ವರುಷ ತೆರೆಕಂಡು ಸೂಪರ್ ಹಿಟ್ ಆದಂತಹ ಯಜಮಾನ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಸುಕುಮಾರ್ ಹಾಗೂ ದರ್ಶನ್ ಭೇಟಿಯಾಗಿದ್ದರು.

 

 

ಈ ವೇಳೆ ಇವರಿಬ್ಬರು ಕೂತು ಮಾತನಾಡುತ್ತಿರುವ ಫೋಟೋವೊಂದನ್ನು ಕ್ಲಿಕ್ಕಿಸಲಾಗಿತ್ತು.ಆ ಚಿತ್ರವನ್ನು ಇದೀಗ ಕೆಲವು ಕಿಡಿಗೇಡಿಗಳು ಬಳಸಿದರ್ಶನ್ ಅವರು ತೆಲುಗು ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆ ದರ್ಶನ್ ಪರಬಾಷಾ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂಬುದು ಫಿಕ್ಸ್ ಆಗಿದೆ

Advertisement
Share this on...