ಶಿವರಾಜ್​ಕುಮಾರ್ ಜೊತೆ ಕನ್ನಡದಲ್ಲಿ ನಟಿಸಲಿದ್ದಾರಾ ಪ್ರಭುದೇವ…?

in ಮನರಂಜನೆ/ಸಿನಿಮಾ 128 views

ಪರಭಾಷೆಯಲ್ಲಿ ಹೆಸರು ಮಾಡಿರುವ ಎಷ್ಟೋ ಸ್ಟಾರ್ ನಟರು ಕನ್ನಡ ಚಿತ್ರಗಳಲ್ಲಿ ನಟಿಸುವುದು ಸಾಮಾನ್ಯ. ಆದರೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದು ಪರಭಾಷೆಯಲ್ಲಿ ಸ್ಟಾರ್ ಪಟ್ಟ ಗಳಿಸಿರುವ ಕನ್ನಡಿಗರೊಬ್ಬರು ಅಪರೂಪಕ್ಕೆ ಕನ್ನಡ ಚಿತ್ರಗಳಲ್ಲಿ ನಟಿಸಿದರೆ ಅದು ನಿಜಕ್ಕೂ ಸುದ್ದಿ. ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ ಕರ್ನಾಟಕದ ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಪ್ರಭುದೇವ ತಂದೆ ಮೈಸೂರು ಜಿಲ್ಲೆ ಟಿ. ನರಸೀಪುರದ ಮೂಗೂರು ಎಂಬಲ್ಲಿ ಜನಿಸಿದವರು. ಅವರ ತಂದೆ ಸುಂದರ್ ಖ್ಯಾತ ಕೊರಿಯೋಗ್ರಾಫರ್. ಕನ್ನಡದಲ್ಲಿ ಮನಸೆಲ್ಲಾ ನೀನೇ ಹಾಗೂ ಉಪೇಂದ್ರ ಜೊತೆ ಹೆಚ್​​​ಟುಒ ಚಿತ್ರಗಳಲ್ಲಿ ಪ್ರಭುದೇವ ನಟಿಸಿದ್ದಾರೆ. ಇದೀಗ ಬಹಳ ವರ್ಷಗಳ ನಂತರ ಅವರು ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದೂ ಕೂಡಾ ಯೋಗರಾಜ್​ ಭಟ್ ನಿರ್ದೇಶನದಲ್ಲಿ ಶಿವರಾಜ್​ಕುಮಾರ್ ಜೊತೆ ಪ್ರಭುದೇವ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಯೋಗರಾಜ್​ ಭಟ್ ನಿರ್ದೇಶನದ ಸಿನಿಮಾ ಎಂದರೆ ಕೇಳಬೇಕೇ…? ಜೊತೆಗೆ ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ಒಟ್ಟಿಗೆ ನಟಿಸುತ್ತಿದ್ದಾರೆ ಎಂದರೆ ಈ ಇಬ್ಬರೂ ಸ್ಟಾರ್​​​​ಗಳ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ.

Advertisement

Advertisement

ಯೋಗರಾಜ್​​ಭಟ್ ಸದ್ಯಕ್ಕೆ ಗಾಳಿಪಟ-2 ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಲಾಕ್​ಡೌನ್ ಸಮಯದಲ್ಲೇ ಯೋಗರಾಜ್ ಭಟ್ ಪ್ರಭುದೇವ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ. ಭಟ್ಟರು ಪ್ರಭುದೇವ ಜೊತೆ ಈ ಚಿತ್ರದ ಬಗ್ಗೆ ಮಾತನಾಡಿದ್ದು ಪ್ರಭುದೇವ ಕೂಡಾ ಕಥೆಯನ್ನು ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಇದುವರೆಗೂ ಅಧಿಕೃತವಾಗಿ ಯೋಗರಾಜ್​​ ಭಟ್ ಆಗಲೀ ಪ್ರಭುದೇವ ಆಗಲಿ ಅಧಿಕೃತವಾಗಿ ಸಿನಿಮಾ ಬಗ್ಗೆ ಏನೂ ಹೇಳಿಲ್ಲ. ಒಂದು ವೇಳೆ ಪ್ರಭುದೇವ ಈ ಪ್ರಾಜೆಕ್ಟ್​​​ಗೆ ಒಕೆ ಎಂದಲ್ಲಿ ಮೊದಲ ಬಾರಿಗೆ ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ಕಾಂಬಿನೇಷನ್​​ನಲ್ಲಿ ಸಿನಿಮಾ ಬರಲಿದೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಬರಲಿರುವ ಈ ಸಿನಿಮಾ ಖಂಡಿತ್ ಹಿಟ್ ಆಗುವುದರಲ್ಲಿ ನೋ ಡೌಟ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Advertisement

ಮೂಲಗಳ ಪ್ರಕಾರ ಯೋಗರಾಜ್ ಭಟ್ ಈಗಾಗಲೇ ಈ ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳನ್ನು ಆರಂಭಿಸಿದ್ದಾರೆ ಎನ್ನಲಾಗಿದೆ. ಆದರೆ ಶಿವರಾಜ್​ಕುಮಾರ್ ಸದ್ಯಕ್ಕೆ ಭಜರಂಗಿ-2 ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ ಭಟ್ಟರು ಕೂಡಾ ಗಣೇಶ್ ಜೊತೆ ಗಾಳಿಪಟ-2 ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶಿವರಾಜ್​ಕುಮಾರ್​​ಗೆ ಭಜರಂಗಿ -2 ಜೊತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಳ ನಂತರ ಬಹುಶ: ಭಟ್ಟರ ಹೊಸ ಸಿನಿಮಾ ಆರಂಭವಾಗಬಹುದು ಎನ್ನಲಾಗಿದೆ. ಈ ಸಿನಿಮಾ ಮೇಲೆ ಸಿನಿಪ್ರಿಯರ ನಿರೀಕ್ಷೆ ಸಾಕಷ್ಟಿದೆ.

Advertisement

ಸಿನಿಮಾಗಳಲ್ಲಿ ಕೊರಿಯೋಗ್ರಾಫರ್ ಆಗಿ ಕರಿಯರ್ ಆರಂಭಿಸಿದ ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ ನಂತರ ಹೀರೋ ಆಗಿ ಮಿಂಚಿದರು. ಆ್ಯಕ್ಟಿಂಗ್ ಜೊತೆ ಜೊತೆಗೆ ನುವಸ್ತಾನಂಟೆ ನೇನೊದ್ದಂಟಾನ, ಪೋಕರಿ, ವಾಂಟೆಡ್, ರಾಮಯ್ಯ ವಸ್ತಾವಯ್ಯ, ರೌಡಿ ರಾಥೋರ್, ದಬಾಂಗ್-3 ಸೇರಿ ಅನೇಕ ಸಿನಿಮಾಗಳನ್ನು ಪ್ರಭುದೇವ ನಿರ್ದೇಶಿಸಿದ್ದಾರೆ. ಕೊರಿಯೋಗ್ರಫಿ, ಡೈರೆಕ್ಷನ್, ಆ್ಯಕ್ಟಿಂಗ್ ಎಲ್ಲವನ್ನೂ ಸಮಾನವಾಗಿ ಸರಿದೂಗಿಸಿಕೊಂಡು ಬರುತ್ತಿರುವ ಪ್ರಭುದೇವ ಮೂರೂ ಕ್ಷೇತ್ರಗಳಲ್ಲೂ ಸಕ್ಸಸ್ ಕಂಡಿದ್ದಾರೆ. ಇದೀಗ ಯೋಗರಾಜ್ ಭಟ್ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ.

Advertisement
Share this on...