ಜಗತ್ತಿನಲ್ಲಿ ಈ 3 ಪ್ಲೇಸ್’ಗಳು ಮೋಸ್ಟ್ ಡೇಂಜರಸ್..!

in ಕನ್ನಡ ಮಾಹಿತಿ 39 views

ಜಗತ್ತಿನಲ್ಲಿರುವ ಕೆಲವು ಸ್ಥಳಗಳು ಅನೇಕ ರಹಸ್ಯಗಳಿಂದ ಕೂಡಿವೆ. ಆ ರಹಸ್ಯಗಳನ್ನು ನಂಬುವುದು ಸ್ವಲ್ಪ ಕಷ್ಟ. ಆದರೂ ಈ ರಹಸ್ಯಗಳನ್ನು ತಿಳಿದುಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ವಿಜ್ಞಾನಿಗಳು ನಿರಂತರವಾಗಿ ಈ ಸ್ಥಳಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹಾಗೆಯೇ ಒಂದು ತೀರ್ಮಾನಕ್ಕೆ ಬರಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ನೀವೂ ಸಹ ಈ ಸ್ಥಳಗಳ ಬಗ್ಗೆ ತಿಳಿದುಕೊಂಡರೆ ಖಂಡಿತವಾಗಿಯೂ ಆಶ್ಚರ್ಯಚಕಿತರಾಗುವಿರಿ. ಇದು ಹೇಗೆ ಸಂಭವಿಸಬಹುದು ಎಂದು ಯೋಚಿಸಲು ಸಹ ಶುರು ಮಾಡಿರಿ.

Advertisement

 

Advertisement


ಸ್ನೇಕ್ ಐಲ್ಯಾಂಡ್
ಇಲಾಹ್ ಡಾ ಕ್ವೈಮಡಾ…ಇದು ಹಾವುಗಳು ಇರುವ ದ್ವೀಪ. ಈ ದ್ವೀಪ ಬ್ರೆಜಿಲ್’ನಲ್ಲಿದೆ. ಕ್ವೈಮಡಾ ವನ್ನು ಹಾವುಗಳ ದ್ವೀಪ ಎಂದೂ ಕರೆಯುತ್ತಾರೆ. ಈ ದ್ವೀಪವು ಗೋಲ್ಡನ್ ಲ್ಯಾನ್ಸ್ಹೆಡ್ ವೈಪರ್’ನಂತಹ ವಿಷಕಾರಿ ಹಾವುಗಳಿಗೆ ನೆಲೆಯಾಗಿದೆ. ಬ್ರೆಜಿಲ್ ನೌಕಾಪಡೆ ಇಲಾಹಾ ಡಾ ಕ್ವೈಮಡಾ ದ್ವೀಪಕ್ಕೆ ಹೋಗಲು ಎಲ್ಲಾ ನಾಗರಿಕರನ್ನು ನಿಷೇಧಿಸಿದೆ. ಈ ದ್ವೀಪವು ಸಾವೊ ಪಾಲೊದಿಂದ ಕೇವಲ 20 ಮೈಲಿ ದೂರದಲ್ಲಿದೆ. ಇಲ್ಲಿ ಮೂರು ಅಡಿಗಳಿಗೆ ಒಂದರಿಂದ ಐದು ಹಾವುಗಳು ಸುಲಭವಾಗಿ ಕಂಡುಬರುತ್ತವೆ.

Advertisement

 

Advertisement


ಡೆತ್ ವ್ಯಾಲಿ ಆಫ್ ಅಮೆರಿಕಾ
ಈ ಸ್ಥಳದ ದೊಡ್ಡ ಸಮಸ್ಯೆ ಏನೆಂದರೆ ಇಲ್ಲಿ ತಾಪಮಾನ ಯಾವಾಗಲೂ 130 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಇಲ್ಲಿನ ಶಾಖಕ್ಕೆ ಯಾರಾದರೂ ಸಾಯುತ್ತಾರೆ. 1913 ರಲ್ಲಿ ಸುಮಾರು 134.06 ಡಿಗ್ರಿ ಸೆಲ್ಸಿಯಸ್ ದಾಖಲೆಯ ತಾಪಮಾನವನ್ನು ಇಲ್ಲಿ ಅಳೆಯಲಾಯಿತು. ನೀರಿನ ಗುರುತುಗಳು ಇಲ್ಲಿ ಇಲ್ಲವೇ ಇಲ್ಲ. ಎಲ್ಲೋ ನೀರು ಕಂಡುಬಂದರೂ ಅದು ಲವಣಯುಕ್ತವಾಗಿರುತ್ತದೆ. ಇದು ವಿಶ್ವದ ಅತ್ಯಂತ ಬಿಸಿಯಾದ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ಯಾವುದೇ ಜೀವಿಗಳು ವಾಸಿಸಲು ಅಸಾಧ್ಯ.

 

 


ಸೆಂಟಿನೆಲ್ ಐಲ್ಯಾಂಡ್ ಆಫ್ ಅಂಡಮಾನ್
ಭಾರತೀಯ ನಾಗರಿಕರಿಗೆ ದೇಶಾದ್ಯಂತ ಯಾವುದೇ ಸ್ಥಳಗಳಿಗೆ ಹೋಗಲು ಸ್ವಾತಂತ್ರ್ಯವಿದೆ. ಆದರೆ ಸೆಂಟಿನೆಲ್ ದ್ವೀಪಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಹೌದು, ಸೆಂಟಿನೆಲ್ ದ್ವೀಪದಲ್ಲಿ ಅಪಾಯಕಾರಿ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅವರು ವಿಶ್ವದ ಯಾರೊಂದಿಗೂ ಸಂಪರ್ಕ ಹೊಂದಿರುವುದಿಲ್ಲ. ಇಲ್ಲಿನ ಜನರು ಸಹ ಈ ದ್ವೀಪದಿಂದ ಹೊರಬರುವುದಿಲ್ಲ ಅಥವಾ ಹೊರಗಿನವರು ಇಲ್ಲಿಗೆ ಬರುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇದರ ಹಿಂದಿನ ಕಾರಣವೇನು, ಇದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಆದ್ದರಿಂದ ಜನರನ್ನು ಇಲ್ಲಿಗೆ ಹೋಗುವುದಕ್ಕೆ ಬಿಡುವುದಿಲ್ಲ.

Advertisement
Share this on...