ಜಾಗತಿಕ ಪ್ರಾಮುಖ್ಯತೆ ಪಡೆದ ದೂರ ಸಂಪರ್ಕ ವ್ಯವಸ್ಥೆ !

in Uncategorized/ಕನ್ನಡ ಮಾಹಿತಿ 60 views

(ಮೇ 17 “ವಿಶ್ವ ದೂರಸಂಪರ್ಕ ದಿನ”ದ ಪ್ರಯುಕ್ತ ಈ ಲೇಖನ )

Advertisement

ಬೃಹದಾಕಾರವಾಗಿರುವ ಇಡೀ ಜಗತ್ತಿನ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ನಾವು ಇದ್ದಲ್ಲಿಯೇ ಗಮನಿಸುವಂತೆ ಮಾಡಿರುವ ವ್ಯವಸ್ಥೆಯೇ ದೂರ ಸಂಪರ್ಕ ವ್ಯವಸ್ಥೆ.ಮಾನವನ ದೈನಂದಿನ ಬದುಕಿನ ಮೂಲಭೂತ ಅವಶ್ಯಕತೆ ಸಂವಹನ ವಾಗಿದೆ, ತನ್ನ ಮನಸ್ಸಿನ ಭಾವನೆಗಳನ್ನು ತಾನು ಅರ್ಥೈಸಿಕೊಂಡು ಇನ್ನೊಬ್ಬರ ಜೊತೆ ಅಭಿವ್ಯಕ್ತಗೊಳಿಸಲು ಸಂವಹನ ನಿತ್ಯದ ಬದುಕಿನಲ್ಲಿ ಅತ್ಯವಶ್ಯಕವಾಗಿದೆ. ವಿಶ್ವದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯ ಜೊತೆಗೆ ಭಾವನೆಗಳನ್ನು ಹಂಚಿಕೊಳ್ಳುವ ವಿಚಾರ ವಿನಿಮಯ ಮಾಡುವ ಅಥವಾ ಮಾಹಿತಿಯನ್ನು ರವಾನಿಸುವ ಎಲ್ಲ ಪ್ರಕ್ರಿಯೆಗೆ ದೂರ ಸಂಪರ್ಕ ವ್ಯವಸ್ಥೆ ಅತ್ಯವಶ್ಯಕವಾಗಿದೆ. ಇಂದು ಆಧುನಿಕ ಸಮಾಜದಲ್ಲಿ ನಾವೆಲ್ಲರೂ ಗಳಿಸಿರುವ ದೂರ ಸಂಪರ್ಕ ವ್ಯವಸ್ಥೆಯಿಂದಾಗಿ ಬಹುದೂರದ ದೇಶಗಳು ಸಹ ನಮಗೆ ಅತೀ ಹತ್ತಿರವಾಗಿರುವುದು ಸಂಪರ್ಕ ಸಾಧನದಿಂದ,ಇಂದು “ದೂರವಾಣಿ “ಇಡೀ ಜಗತ್ತನ್ನು ಆಕರ್ಷಿಸಿರುವ ಪ್ರಮುಖ ಸಂಪರ್ಕ ಮಾಧ್ಯಮವಾಗಿದೆ.

Advertisement

 

Advertisement

Advertisement

ಇಂದು ದೂರ ಸಂಪರ್ಕ ವ್ಯವಸ್ಥೆಯಲ್ಲಿ ಮೊಬೈಲ್ ಫೋನ್ ಗಳು ಪ್ರತಿಯೊಬ್ಬರಿಗೂ ಸುಲಭ ಬೆಲೆಗೆ ಲಭ್ಯವಾಗುವಂತಾಗಿ ವಿಶ್ವ ಮಟ್ಟದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿವೆ, ನಾವು ಬಳಸುವ ಇಂಟರ್ನೆಟ್, ಇ ಮೇಲ್, ವಿಡಿಯೊ ಕಾನ್ಫರೆನ್ಸಿಂಗ್, ಸಂಪರ್ಕ ಕ್ಷೇತ್ರದಲ್ಲಿ ಭಾರಿ ಪ್ರಗತಿಯನ್ನು ಸಾಧಿಸಿವೆ. ದೂರ ಸಂಪರ್ಕ ವ್ಯವಸ್ಥೆಯಿಂದ ಒಬ್ಬ ವ್ಯಕ್ತಿಯ ಸಮಯ ಹಣ ಶಕ್ತಿ ಎಲ್ಲವೂ ಉಳಿತಾಯವಾಗುತ್ತದೆ,ಸಾವಿರಾರು ಕಿಲೋಮೀಟರ್ ದೂರಗಳಾಚೆ ಇರುವ ವ್ಯಕ್ತಿಯ ಜೊತೆಗೆ ಇದ್ದಲ್ಲಿಯೇ ಮಾತನಾಡಲು ಸಾಧ್ಯವಾಗಿರುವುದು ದೂರು ಸಂಪರ್ಕ ವ್ಯವಸ್ಥೆಯಿಂದ.

 

ದೂರ ಸಂಪರ್ಕ ಎಂದ ತಕ್ಷಣ ಒಬ್ಬ ವಿಶೇಷ ವ್ಯಕ್ತಿಯನ್ನು ನಾವೆಲ್ಲಾ ನೆನಪಿಸಿಕೊಳ್ಳಲೇಬೇಕು ಅದು, ಸ್ಕಾಟ್ಲೆಂಡಿನಲ್ಲಿ ಹುಟ್ಟಿ ಬೆಳೆದ “ಅಲೆಕ್ಸಾಂಡರ್ ಗ್ರಹಾಂ ಬೆಲ್”(1842-1922).ಮುಂದೆ ಅಮೆರಿಕ ದೇಶಕ್ಕೆ ವಲಸೆ ಹೋದವನು,ಇವರ ತಾಯಿ ಕಿವುಡುತನ ಹೊಂದಿದ್ದರು, ಹಾಗೂ ತಂದೆ ಕಿವುಡು ಮಕ್ಕಳ ಉಪಾಧ್ಯಾಯರಾಗಿದ್ದರು, ಗ್ರಹಾಂ ಬೆಲ್ ಅವರು ತಮ್ಮ ಬಿಡುವಿನ ವೇಳೆಯಲ್ಲಿ ದೂರ ಲಿಪಿ ಯತ್ತ ಚಿಂತನೆ ಹರಿಸಿದ್ದರು, ಮನುಷ್ಯನ ಕಿವಿ ತಮಟೆಯನ್ನು ಆಸಕ್ತಿಯಿಂದ ಸಂಪೂರ್ಣವಾಗಿ ಅಧ್ಯಯನ ಮಾಡಿ ಅಂತಹುದೇ ಒಂದು ಕೃತಕ ತಮಟೆಯನ್ನು ತೆಳುವಾದ ಲೋಹದ ಫಲಕದಿಂದ ತಯಾರಿಸಿ ಗ್ರಾಂಹಾಬೆಲ್ಲ 1876ರಲ್ಲಿ ದೂರವಾಣಿ ಕಂಡು ಹಿಡಿದರು. ವಿದ್ಯುತ್ತನ್ನು ಬಳಸಿ ಪ್ರಥಮ ಬಾರಿಗೆ ಸ್ಪಷ್ಟವಾಗಿ ಉಚ್ಚರಿಸಿದ ಮಾತನ್ನು ರವಾನಿಸಿದ ಪ್ರಥಮ ವ್ಯಕ್ತಿ ಅಲೆಕ್ಸಾಂಡರ್ ಗ್ರಹಾಂ ಬೆಲ್.

 

ಇಂದು ಜಗತ್ತಿನಾದ್ಯಂತ ಸಂಪರ್ಕ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಸಾಧನ ಸಂಪರ್ಕ ಉಪಗ್ರಹವಾಗಿದೆ ಇದರ ಕಾರ್ಯ ಚಟುವಟಿಕೆಯಿಂದ ಇಂದು ವಿಶ್ವದ ಒಂದು ಮೂಲೆಯಲ್ಲಿರುವ ವ್ಯಕ್ತಿ ತನ್ನಿಂದ ಹತ್ತಾರು ಸಾವಿರ ಕಿಲೋಮೀಟರ್ ದೂರದಲ್ಲಿರುವ ಮತ್ತೊಬ್ಬ ವ್ಯಕ್ತಿಯನು ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದಾಗಿದೆ.. ಸಂಪರ್ಕ ಉಪಗ್ರಹವು ದೂರವಾಣಿ, ಮೊಬೈಲ್ ಫೋನ್ , ಇವೆಲ್ಲವೂ ಉತ್ತಮವಾದ ಕ್ರಾಂತಿ ಮಾಡಲು ಕಾರಣವಾಗಿದೆ. ಈ ತರದ ಎಲ್ಲ ಕ್ರಾಂತಿಗೆ ಮೂಲ ರೂವಾರಿಯಾಗಿರುವ ಗ್ರಾಹಮ್ ಬೆಲ್ ಅವರನ್ನು ದೂರ ಸಂಪರ್ಕ ದಿನದಂದು ಸ್ಮರಿಸುವುದು ಹಾಗೂ ಪ್ರತಿ ವರ್ಷ ಮೇ17 ನೇ ದಿನವನ್ನು ‘”ವಿಶ್ವ ದೂರ ಸಂಪರ್ಕ ದಿನ”ವನ್ನಾಗಿ ಆಚರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ಇಂದು ಮೊಬೈಲ್ಗಳನ್ನು ಬಳಸದ ವ್ಯಕ್ತಿಗಳನ್ನು ಹುಡುಕುವುದು ಬಹು ಕಷ್ಟ, ಅಂದರೆ ಜಗತ್ತಿನ ಜನಸಂಖ್ಯೆಯಲ್ಲಿ ಬಹಳಷ್ಟು ಜನರು ಮೊಬೈಲ್ ಫೋನ್ಗಳ ಬಳಕೆಯಲ್ಲಿದ್ಧಾರೆ. ದೂರವಾಣಿಯ ಜೊತೆ ಮಾತನಾಡುತ್ತಾ ಮಾತನಾಡುವ ವ್ಯಕ್ತಿಯ ಮುಖ ನೋಡುತ್ತಾ ಮಾತನಾಡುವ ವ್ಯವಸ್ಥೆಯು ಎಂದು ಅಪಾರ ಕ್ರಾಂತಿಯನ್ನುಂಟು ಮಾಡಿದೆ. ಗ್ರಾಂಹ ಬೆಲ್ಲ ಅವರಿಗೆ ಇಡೀ ವಿಶ್ವವೇ ಋಣಿಯಾಗಿದೆ.

 

ಸಂಪರ್ಕ ಉಪಗ್ರಹಗಳಿಂದ ಸೂಕ್ಷ್ಮ ತರಂಗಗಳ ರೂಪದಲ್ಲಿ ಹರಡಿದ ಸಂಪರ್ಕ ಸಂದೇಶಗಳು ಜಗತ್ತಿನ ವಿವಿದ ಭಾಗಗಳಿಗೆ ತಲುಪುತ್ತದೆ.ವಿಶ್ವದ ದೂರ ಸಂಪರ್ಕ ವ್ಯವಸ್ಥೆಯಿಂದಾಗಿ ವ್ಯಾಪಾರ ವಹಿವಾಟು ವಾಣಿಜ್ಯೋದ್ಯಮ ಎಲ್ಲವೂ ಸುಗಮವಾಗಿ ಸಾಗಲು ಬಹು ಮುಖ್ಯವಾಗಿವೆ.ಕ್ಷಣಮಾತ್ರದಲ್ಲಿ ಯಾವುದೇ ಒಂದು ಮಾಹಿತಿಯನ್ನು ಜಗತ್ತಿನ ಯಾವುದೇ ಮೂಲೆಗೆ ತಲುಪಿಸುವ ವ್ಯವಸ್ಥೆಯನ್ನು ಇಂದು ದೂರ ಸಂಪರ್ಕ ವ್ಯವಸ್ಥೆ ಕಲ್ಪಿಸಿದೆ.

 

ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ: ಗದಗ .

Advertisement
Share this on...