ರಾಕಿಂಗ್ ಸ್ಟಾರ್ ಯಶ್ ಮನೆಯ ಕಾಂಪೌಂಡ್ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಜಖಂ !

in News 39 views

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ  ಮನೆಗೆ ಟ್ರ್ಯಾಕ್ಟರ್ ಒಂದು ಬ್ರೇಕ್ ಫೇಲ್ ಆಗಿ ಮನೆಗೆ  ನುಗ್ಗಿದೆ. ಈ ಘಟನೆ ನಿನ್ನೆ ರಾತ್ರಿ ನಡೆದಿದೆ.
ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲಿರುವ  ಯಶ್ ಮನೆಗೆ ಟ್ರ್ಯಾಕ್ಟರ್ ನುಗ್ಗಿದ ಪರಿಣಾಮವಾಗಿ ಕಾಂಪೌಂಡ್ ಕುಸಿದು ಬಿದ್ದು ಮನೆ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ . ಅದೃಷ್ಟವಶಾತ್ ಯಾವುದೇ ರೀತಿಯ ದೊಡ್ಡ ಅಪಾಯ ಸಂಭವಿಸಿಲ್ಲ. ಬ್ರೇಕ್ ಫೇಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಯಶ್ ಮನೆಯ  ಕಾಂಪೌಂಡಿಗೆ  ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.

Advertisement

 

Advertisement

Advertisement

ಆದರೆ ಆ ಸಂದರ್ಭದಲ್ಲಿ ಘಟನೆ ನಡೆದ ಸ್ಥಳದಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ. ಆ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸಿಬಿ ಮೂಲಕ ಟ್ರ್ಯಾಕ್ಟರನ್ನು ಸ್ಥಳಾಂತರಿಸಿದ್ದಾರೆ . ಆ ಸಮಯದಲ್ಲಿ ಮನೆಯಲ್ಲಿ ಯಶ್ ಆಗಲಿ ಅವರ ಮನೆಯವರಾಗಲಿ ಯಾರೂ ಇರಲಿಲ್ಲ ಇದರಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ. ವಿಷಯ ತಿಳಿದ ಪೊಲೀಸರು ಪ್ರಾಥಮಿಕ ತನಿಖೆಯನ್ನು ನಡೆಸಿದ್ದಾರೆ .

Advertisement

 

ಆ ನಂತರ ಯಶ್ ಅವರು ಕೂಡ ಮನೆಯ ಬಳಿಗೆ ಬಂದು ನಡೆದುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ  ಎಂದು ಹೇಳಲಾಗುತ್ತಿದೆ .

Advertisement
Share this on...