ಯಶ್ ಮಗನ ಡ್ಯಾನ್ಸ್ ಇದೀಗ ವೈರಲ್ ಆಗುತ್ತಿದೆ… !

in ಮನರಂಜನೆ/ಸಿನಿಮಾ 245 views

ಮಹಾಮಾರಿ ಕೊರೋನಾದಿಂದ ಸಾರ್ವಜನಿಕರ ಸ್ಥಿತಿ ಅದಗೆಟ್ಟು ಸಾವಿರಾರು ಜನ ಜೀವವನ್ನೆ ಕಳೆದುಕೊಳ್ಳುತ್ತಿದ್ದಾರೆ. ಅದೆಷ್ಟೋ ಪ್ರತಿಭಾವಂತರುಗಳು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು ತಮಗೆ ಕೆಲಸಗಳಿಲ್ಲದೇ, ಸಂಬಳವನ್ನು ಕಡಿಮೆ ಮಾಡಿ, ಇದರ ಜೊತೆಗೆ ಕೆಲವು ಜೂನಿಯರ್ಸ್ ಗಳನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. ಬೆಂಗಳೂರಿನ ಜೀವನ ಬಹಳ ಹದಗೆಟ್ಟಿತ್ತು, ಸಾವಿರಾರು ಮಂದಿ ಬೆಂಗಳೂರಿನ ಸಹವಾಸವೇ ಬೇಡ ಎಂದು ಗಂಟು ಮೂಟೆ ಕಟ್ಟುಕೊಂಡು ಹುಟ್ಟೂರಿಗೆ ಹೊರಡುತ್ತಿದ್ದಾರೆ. ಇನ್ನು ಹಾಗೆ ನೋಡುವುದಾದರೆ ಈ ಸೋಂಕಿನಿಂದ ಬಹಳ ಉಪಯೋಗವು ಆಗಿದೆ. ಹುಟ್ಟೂರಿನ ಸಹವಾಸವೇ ಬೇಡ ಎಂದು ಬೆಂಗಳೂರಿಗೆ ಹೋದವರು, ಇದೀಗ ಹಿಂತಿರುಗಿ ಹಳ್ಳಿಯಲ್ಲೇ ವ್ಯವಸಾಯ ಮಾಡುವ ಪರಿಸ್ಥಿತಿ ಬಂದೊದಗಿದೆ. ಸಾಮಾಜಿಕ ಅಂತರವಿಲ್ಲದೆ ಬದುಕುತ್ತಿದ್ದ ಜನರಿಗೆ ಈಗ ಅನಿವಾರ್ಯವಾಗಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಲೇ ಬೇಕು. ಜೊತೆಗೆ ಮಾಸ್ಕ್ ಧರಿಸುವುದರಿಂದ ಕೊರೊನಾ ಸೇರಿದಂತೆ ಬೇರೆ ಯಾವ ಸೋಂಕು ಕೂಡ ಹರಡುವುದು ಕಡಿಮೆಯಾಗಿದೆ. ಭವಿಷ್ಯಕ್ಕಾಗಿ ಕೋಟಿ ಕೋಟಿಯನ್ನು ಉಳಿಸುತ್ತಿದ್ದವರು, ಮುಂದಿನ ದಿನಗಳ ಬಗ್ಗೆ ಯೋಚನೆ ಮಾಡುವುದು ತಪ್ಪು ಎನಿಸಿದೆ. ಎಲ್ಲದಕಿಂತ ಹೆಚ್ಚಾಗಿ ಜೀವದ ಮೌಲ್ಯ ತಿಳಿಸಿದೆ.

Advertisement

Advertisement

ಇನ್ನು ಸದಾ ಚಿತ್ರೀಕರಣ, ಸಿನಿಮಾ ಅಂತ ಹಗಲು ರಾತ್ರಿ ಎನ್ನದೇ ನಿರತರಾಗಿದ್ದ ಕಲಾವಿದರುಗಳಿಗೆ ಇದೊಂದು ಸುವರ್ಣ ಅವಕಾಶ. ಕುಟುಂಬದವರ ಜೊತೆ ಸರಿಯಾದ ಸಮಯ ಕಳೆಯಲು ಸಾಧ್ಯವಾಗದೆ, ಮಕ್ಕಳನ್ನು ಸರಿಯಾಗಿ ಲಾಲಣೆ ಪೋಷಣೆ ಮಾಡದೆ ಸಿನಿಮಾ ಸಿನಿಮಾ ಎಂದು ದುಡಿಯುತ್ತಿದ್ದ ಮಂದಿ ಇದೀಗ ಮನೆಯಲ್ಲೇ ಲಾಕ್ ಆಗಿದ್ದಾರೆ. ಮಡದಿಯ ಕಷ್ಟ ಸುಖ ತಿಳಿಯುತ್ತಾ, ಪೋಷಕರ ಆರೋಗ್ಯ ನೋಡಿಕೊಳ್ಳುತ್ತಾ, ಮಕ್ಕಳ ಜೊತೆ ಆಟವಾಡುತ್ತಾ ಸಮಯ ಮತ್ತು ಜೀವನವನ್ನು ಸವಿಯುತ್ತಿದ್ದಾರೆ. ಇನ್ನು ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಿಂದ ಬಾರೀ ಕ್ರೇಜ್ ಅನ್ನು ಹುಟ್ಟು ಹಾಕಿದ್ದು, ಮನೆಯಲ್ಲಿ ಸೇರದೆ ಸಿನಿಮಾ ಕೆಲಸ ಪ್ರಮೋಷನ್ ಎಂದು ನಿರತರಾಗಿದ್ದರು. ಆದರೆ ಇದೀಗ ಕುಟುಂಬದ ಜೊತೆ ಎಂಜಾಯ್ ಮಾಡುತ್ತಿದ್ದು, ಎಲ್ಲಾ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ

Advertisement

 

Advertisement
View this post on Instagram

 

Can barely stand, but once the music is on our little man turns into a party animal !? PS: Do ignore the over enthusiastic dad in the background ?

A post shared by Yash (@thenameisyash) on

ಸದ್ಯ ಇಬ್ಬರು ಮುದ್ದು ಮಕ್ಕಳೊಂದಿಗೆ ಮನೆಯಲ್ಲಿ ಕಾಲ ಕಳೆಯುತ್ತಿರುವ ಅವರು, ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಿಗಾಗಿಯೇ ಇಡೀ ಸಮಯ ಮೀಸಲಿಟ್ಟಿದ್ದಾರೆ. ಆಗಾಗ ಮುದ್ದು ಮಕ್ಕಳ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿಕೊಂಡು ಅಭಿಮಾನಿಗಳಿಗೂ ಆಗಾಗ ಸಪ್ರೈಸ್​ ಕೊಡುತ್ತಿರುತ್ತಾರೆ. ಇದೀಗ ಕಾರ್​ ಒಳಗೆ ನಿಂತುಕೊಂಡು ಡಾನ್ಸ್ ಮಾಡುತ್ತಿರುವ ಮಗನ ವಿಡಿಯೋವೊಂದನ್ನು ಯಶ್​ ಪೋಸ್ಟ್ ಮಾಡಿದ್ದಾರೆ. ಮಗನಿಗೆ ಮ್ಯೂಸಿಕ್​ ಅಂದ್ರೆ ಎಲ್ಲಿಲ್ಲದ ಪ್ರೀತಿ ಅಂತ ಕಾಣುತ್ತೆ. ಒಂದು ಪಾರ್ಟಿ ಮೂಡ್​ಗೆ ಬದಲಾಗಿ ಬಿಡುತ್ತಾನೆ’ ಎಂದು ಕ್ಯಾಪ್ಶನ್​ ನೀಡಿದ್ದಾರೆ.ಸದ್ಯ ಈ ಪೋಸ್ಟ್​ ಹಾಕಿದ ಕೇವಲ ಮೂರೇ ಗಂಟೆಗೆ 7 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ನೋಡಿದ್ದಾರೆ. ಆ ವಿಡಿಯೋ ತುಣುಕು ಇಲ್ಲಿದೆ ನೋಡಿ.

Advertisement
Share this on...