ದಯವಿಟ್ಟು ಆ ನಟರಿಗೆ ನನ್ನನ್ನು ಹೋಲಿಸಬೇಡಿ….ಯಶ್ ಹೀಗೆ ಹೇಳಿದ್ದು ಯಾರ ಬಗ್ಗೆ…?

in ಮನರಂಜನೆ 121 views

2018 ರಲ್ಲಿ ಕೆಜಿಎಫ್​​​​​ ಸಿನಿಮಾ ಬಿಡುಗಡೆಯಾದ ನಂತರ ಯಶ್ ನ್ಯಾಷನಲ್ ಸ್ಟಾರ್ ಪಟ್ಟ ಪಡೆದರೆ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯ್ತು. ಇದೀಗ ಕನ್ನಡ ಚಿತ್ರಪ್ರೇಮಿಗಳು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ‘ಕೆಜಿಎಫ್​​​​-2’ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಗ್ರೀಸ್​​​​​ನಲ್ಲಿ ಕೂಡಾ ಕೆಜಿಎಫ್​​​​​-2 ತೆರೆ ಕಾಣುತ್ತಿದ್ದು ಅಲ್ಲಿ ತೆರೆ ಕಾಣುತ್ತಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಖ್ಯಾತಿಗೆ ಕೆಜಿಎಫ್​​​-2 ಪಾತ್ರವಾಗಿದೆ. ಯಶ್ ಎಲ್ಲಿ ಹೋದರೂ ಅವರಿಗೆ ರೆಡ್ ಕಾರ್ಪೆಟ್ ಗೌರವ ದೊರೆಯುತ್ತಿದೆ. ಇನ್ನು 2018ರಲ್ಲಿ ಕೆಜಿಎಫ್​ ರಿಲೀಸ್ ಆದ ದಿನವೇ ಬಾಲಿವುಡ್​​​​ನಲ್ಲಿ ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರ ಕೂಡಾ ತೆರೆ ಕಂಡಿತ್ತು. ಆದರೆ ಕೆಜಿಎಫ್ ಮುಂದೆ ಶಾರುಖ್ ಸಿನಿಮಾ ಮುಗ್ಗರಿಸಿತ್ತು.

Advertisement

Advertisement

ಕೆಜಿಎಫ್ ಚಿತ್ರದ ಗೆಲುವಿನ ಮೂಲಕ ಯಶ್ ಇಮೇಜ್​​​​​​ ಸಂಪೂರ್ಣ ಬದಲಾಗಿದೆ. ಕೆಜಿಎಫ್​​​​​-2 ಟ್ರೇಲರ್ ರಿಲೀಸ್ ಆದಾಗ ಕನ್ನಡಕ್ಕಿಂತ ಹೆಚ್ಚಾಗಿ ವ್ಯೂವ್ಸ್ ದೊರೆತದ್ದು ಹಿಂದಿಯಲ್ಲಿ. ಇದುವರೆಗೂ ಕನ್ನಡದಲ್ಲಿ 25 ಮಿಲಿಯನ್ ಮಂದಿ ಟ್ರೇಲರ್ ವೀಕ್ಷಿಸಿದರೆ, ಹಿಂದಿಯಲ್ಲಿ 83 ಮಿಲಿಯನ್ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದಲ್ಲಿ ಕೆಜಿಎಫ್​​​ ಹವಾ ಹೇಗಿದೆ ಎಂಬುದು ಇದರಿಂದ ತಿಳಿಯುತ್ತದೆ. ದಕ್ಷಿಣ ಭಾರತ, ಉತ್ತರ ಭಾರತ ವಿದೇಶದಲ್ಲಿ ಕೂಡಾ ಯಶ್ ಹಾಗೂ ಕೆಜಿಎಫ್​ ಅಬ್ಬರ ಸಖತ್ ಜೋರಾಗಿದೆ. ಕೆಜಿಎಫ್​​​ -2 ಬಿಡುಗಡೆಗೆ ಇನ್ನು 5 ದಿನಗಳು ಮಾತ್ರ ಬಾಕಿ ಉಳಿದಿದ್ದು ಈಗಾಗಲೇ ಸಿನಿಮಾಗೆ ಮುಂಗಡ ಬುಕಿಂಗ್ ಆರಂಭವಾಗಿದೆ.

Advertisement

Advertisement

ಇನ್ನು ಬಾಲಿವುಡ್ ಸ್ಟಾರ್ ನಟರಾದ ಶಾರುಖ್ ಖಾನ್ ಹಾಗೂ ಸಲ್ಮಾನ್​ ಖಾನ್​​​​​​​​​​ಗೆ ಯಶ್ ಅವರನ್ನು ಹೋಲಿಸಲಾಗುತ್ತಿದೆ. ಯಶ್ ಇವರಿಬ್ಬರನ್ನೂ ಮೀರಿ ಬೆಳೆಯುತ್ತಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಯಶ್, ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ‘ದಯವಿಟ್ಟು ನನ್ನನ್ನು ಈ ನಟರಿಗೆ ಹೋಲಿಸಬೇಡಿ’ ಎಂದು ಮನವಿ ಮಾಡಿದ್ದಾರೆ. ಆದರೆ ಯಶ್ ಈ ರೀತಿ ಹೇಳುವುದರ ಹಿಂದೆ ಬಲವಾದ ಕಾರಣವಿದೆ. ‘ನಾನು ಚಿಕ್ಕಂದಿನಿಂದ ಶಾರುಖ್ ಖಾನ್ , ಸಲ್ಮಾನ್ ಖಾನ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಚಿತ್ರರಂಗದಲ್ಲಿ ಈಗ ತಾನೇ ಹೆಜ್ಜೆ ಇಡುತ್ತಿದ್ದೇನೆ. ಆ ದೊಡ್ಡ ನಟರೊಂದಿಗೆ ನನ್ನನ್ನು ಹೋಲಿಸುವುದು ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ ದಯವಿಟ್ಟು ನನ್ನನ್ನು ಅವರಿಗೆ ಹೋಲಿಸಬೇಡಿ’ ಎಂದು ಯಶ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಏಪ್ರಿಲ್ 14 ರಂದು ‘ಕೆಜಿಎಫ್​​​​-2’ ತೆರೆ ಕಾಣುತ್ತಿದ್ದು ಸಿನಿಪ್ರಿಯರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಕೆಜಿಎಫ್​ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಬಾಲಿವುಡ್​​​​​​​ ರವೀನಾ ಟಂಡನ್​​, ಸಂಜಯ್ ದತ್, ಕರಣ್ ಜೊಹರ್ ಹಾಗೂ ಇನ್ನಿತರರು ಹಾಜರಿದ್ದರು. ಸದ್ಯಕ್ಕೆ ಸಿನಿಮಾ ತಂಡ ದೇಶದ ಪ್ರಮುಖ ನಗರಗಳಲ್ಲಿ ಪ್ರಮೋಷನ್​ ಕಾರ್ಯಗಳಲ್ಲಿ ಬ್ಯುಸಿ ಇದೆ.
-ರಕ್ಷಿತ ಕೆ.ಆರ್​​​.ಎಸ್

Advertisement
Share this on...