yashikaraj rapper

ಭಾರತದ ಕಿರಿಯ ರ್‍ಯಾಪರ್ ಯಶಿಕಾ ಮತ್ತೊಂದು ಆಲ್ಬಂ ರಿಲೀಸ್​​​…ಈ ಕನ್ನಡ ಕಂದನ ಹಾಡನ್ನು ನೀವೂ ನೋಡಿ ಹರಸಿ

in ಮನರಂಜನೆ/ಸಿನಿಮಾ 251 views

ಪುಟ್ಟ ಮಕ್ಕಳಿಂದ ಹಿಡಿದು, ವಯೋವೃದ್ಧರವರೆಗೂ ಸಂಗೀತ ಎಂದರೆ ಇಷ್ಟಪಡುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಗೀತ ಇಷ್ಟ. ಸಂಗೀತ ಕೇಳುವುದಕ್ಕಾಗಲೀ, ಕಲಿಯುವುದಕ್ಕಾಗಲೀ ವಯಸ್ಸಿನ ಇತಿ ಮಿತಿ ಇಲ್ಲ. ಕೆಲವರು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಸಂಗೀತವನ್ನು ಅಭ್ಯಾಸ ಮಾಡಿದರೆ, ಮತ್ತೆ ಕೆಲವರಿಗೆ ರಕ್ತಗತವಾಗಿ ಒಲಿದಿರುತ್ತದೆ. ಪ್ರಪಂಚದಲ್ಲಿ ವಾದ್ಯ ಸಂಗೀತ, ಗಾಯನದಲ್ಲಿ ಹೆಸರು ಮಾಡಿರುವ ಎಷ್ಟೋ ಸಾಧಕರಿದ್ಧಾರೆ. ಶಾಸ್ತ್ರೀಯ, ಜಾನಪದ, ಪಾಪ್​, ರಾಕ್​, ರ್‍ಯಾಪ್​​ ಹೀಗೆ ನಾನಾ ರೀತಿಯ ಸಂಗೀತ ಪ್ರಾಕಾರಗಳಿವೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಗೀತ ಇಷ್ಟ. ಮೊದಲು ಕನ್ನಡದಲ್ಲಿ ಹೆಚ್ಚಾಗಿ ರ್‍ಯಾಪರ್​​ಗಳಿರಲಿಲ್ಲ. ಆದರೆ ಇದೀಗ ಕನ್ನಡದಲ್ಲೂ ಅನೇಕ ರ್‍ಯಾಪರ್​​​​ಗಳಿದ್ದು ರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ರಾಕೇಶ್ ಅಡಿಗ, ಚಂದನ್ ಶೆಟ್ಟಿ, ಅಲೋಕ್​​, ಬ್ರೊಧ, ಎಂ.ಸಿ. ಬಿಜ್ಜು, ರಾಹುಲ್, ಮಾರ್ಟಿನ್ ಯೊ, ಅಕ್ಸಾ, ಅಮೋಘ್ ಹೀಗೆ ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯ ರ್‍ಯಾಪರ್​ಗಳಿದ್ದಾರೆ. ಅದರೆ ಇವರೆಲ್ಲರಿಗಿಂತ ಕಿರಿಯ ಹಾಗೂ ಭಾರತದ ಕಿರಿಯ ರ್‍ಯಾಪರ್ ಎನಿಸಿಕೊಂಡ ಒಬ್ಬರು ಕರ್ನಾಟದಲ್ಲಿದ್ದಾರೆ.

Advertisement

Advertisement

5 ವರ್ಷದ ಯಶಿಕಾ ರಾಜ್​ ಭಾರತದ ಅತಿ ಕಿರಿಯ ರ್‍ಯಾಪರ್. ಯಶಿಕಾಗೆ ಈಗ 5 ವರ್ಷ ವಯಸ್ಸು, ಯಶಿಕಾ ವರ್ಷದ ಮಗುವಾಗಿದ್ಧಾಗಲೇ ಸಂಗೀತವನ್ನು ಬಹಳ ಆಸಕ್ತಿಯಿಂದ ಆಲಿಸುತ್ತಿದ್ದಳು. ಈ ಮಗು ಬೆಳೆಯುತ್ತಿದ್ದಂತೆ ಸಂಗೀತದ ಮೇಲೆ ತೋರುತ್ತಿದ್ದ ಆಸಕ್ತಿ ನೋಡಿ ಯಶಿಕಾ ಪೋಷಕರು ಕೂಡಾ ಮಗಳನ್ನು ಪ್ರೋತ್ಸಾಹಿಸಿದರು. ಕಳೆದ ವರ್ಷವೇ ಯಶಿಕಾ ‘ಓ ಮೈ ಗಾಡ್’ ಎಂಬ ರ್‍ಯಾಪ್ ಹಾಡನ್ನು ಬಹಳ ಮುದ್ದಾಗಿ ಹಾಡಿದ್ದಳು. ಈ ಹಾಡಿಗೆ ಮಾರ್ಟಿನ್ ಸಂಗೀತ ಬರೆದಿದ್ದು ಎಂ.ಸಿ. ಬಿಜ್ಜು ಸಂಗೀತ ಸಂಯೋಜನೆ ಮಾಡಿದ್ದರು. ಇದೀಗ ಯಶಿಕಾ ಮತ್ತೊಂದು ಹೊಸ ರ್‍ಯಾಪ್ ಹಾಡನ್ನು ಹಾಡಿದ್ದಾಳೆ. ‘ವಾಟ್ ನೆಕ್ಸ್ಟ್’ ಎಂಬ ಈ ಆಲ್ಬಂನ್ನು ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.

Advertisement

Advertisement

ಸ್ವಾತಿ ಮೋಹನ್ ಅರ್ಪಿಸುವ ಈ ವಾಟ್  ನೆಕ್ಸ್ಟ್ ಆಲ್ಬಂ ಹಾಡನ್ನು ಹಿಪ್​ ಹಾಪ್ ಕನ್ನಡಿಗರು ತಂಡದ ಸಹಯೋಗದಲ್ಲಿ ಮಾಡಲಾಗಿದೆ. ಈ ಆಲ್ಬಂ ಜೊತೆ 2 ಡಿ ಅನಿಮೇಷನ್ ಕೂಡಾ ಬಳಸಲಾಗಿದೆ. ಈ ಹಾಡಿನ ಪರಿಕಲ್ಪನೆ ಹಾಗೂ ನಿರ್ದೇಶನ ಮೋಹನ್ ಬಾಬು ಅವರದ್ದು. ವಾಟ್ ನೆಕ್ಸ್ಟ್​ ಹಾಡಿಗೆ ಮಾರ್ಟಿನ್ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನಲ್ಲಿ ಕನ್ನಡ, ಇಂಗ್ಲೀಷ್ ಜೊತೆಗೆ ಮರಾಠಿ ,ಗುಜರಾತಿ, ಬೆಂಗಾಳಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯನ್ನು ಬಳಸಲಾಗಿದೆ. ಪುಟ್ಟ ಯಶಿಕಾ ಬಹಳ ಮುದ್ದು ಮುದ್ದಾಗಿ ಈ ಹಾಡನ್ನು ಹಾಡಿದ್ದಾಳೆ. ಯಶಿಕಾಳ ಹಾಡಿಗೆ ಬಹಳಷ್ಟು ಸಂಗೀತ ಪ್ರಿಯರು ಕಮೆಂಟ್ ಮಾಡಿ ಶುಭ ಕೋರಿದ್ದಾರೆ.

ಚಂದನ್​​​ ಶೆಟ್ಟಿ ಸೇರಿದಂತೆ ಸ್ಯಾಂಡಲ್​ವುಡ್​​​​​ನ ಅನೇಕ ಕಲಾವಿದರು ಹಾಗೂ ಸಂಗೀತ ನಿರ್ದೇಶಕರು ಯಶಿಕಾ ಅವರನ್ನು ಹಾಡಿ ಹೊಗಳಿದ್ದಾರೆ. ಸೆಪ್ಟೆಂಬರ್ 21 ರಂದು ಯಶಿಕಾ 5ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಯಶಿಕಾಗೆ ಅದಿತಿ ಪ್ರಭುದೇವ, ಹರ್ಷಿಕಾ ಪೂಣಚ್ಚ, ಆಶಿಕಾ ರಂಗನಾಥ್, ಚಂದನ್ ಶೆಟ್ಟಿ ಹಾಗೂ ಇನ್ನಿತರರು ಶುಭ ಕೋರಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಯಶಿಕಾ ಮತ್ತಷ್ಟು ಹಾಡುಗಳನ್ನು ಹಾಡಲಿ, ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂದು ನಾವೂ ಹಾರೈಸೋಣ.

Advertisement
Share this on...