ಬಿಜೆಪಿಯಲ್ಲಿ ಒಳ ಕುದಿ: “ಸಚಿವನಾಗಿ ಯಾರದೋ ತಲೆಹಿಡಿಯೋ ಜಾಯಮಾನ ನನ್ನದಲ್ಲಾ” ಅಂದೇ ಬಿಟ್ಟ ಯತ್ನಾಳ್..!

in ರಾಜಕೀಯ 148 views

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು.. ಭಲಾಡ್ಯ ನಾಯಕ ಬೇಕು ಅಂತ ವಿಧಾನಸೌಧದ ಕಾರಿಡಾರ್ ಸುತ್ತ ಓಡಾಡ್ತಿದ್ದ ಸುದ್ದಿ ಇದೀಗ ಬಿಜೆಪಿ ನಾಯಕರ ನಾಲಿಗೆ ಮೇಲೆ ಹರಿದಾಡೋಕೆ ಸ್ಟಾರ್ಟ್ ಆಗಿದೆ. ಕುಚಿಕು ಕುಚಿಕು ಅಂತಿದ್ದ ಶಾಸಕರೆಲ್ಲಾ ಬಿಎಸ್ ವೈ ವಿರುದ್ಧ ಬುಸುಗುಟ್ಟೋದಕ್ಕೆ ಸ್ಟಾರ್ಟ್ ಮಾಡಿದ್ದಾರೆ. ಯತ್ನಾಳ್ ಒಬ್ಬರ ಹೇಳಿಕೆಯಲ್ಲೇ ಮುಖ್ಯಮಂತ್ರಿ ಬದಲಾವಣೆ ಹೈ ಕಮಾಂಡ್ ಹಂತದಲ್ಲೇ ನಡೆದಿದೆ ಅನ್ನೋದು ಇದೀಗ ಗಂಭೀರತೆ ಪಡೆದುಕೊಂಡಿದ್ದು, ಸಿಎಂ ಕುರ್ಚಿಗಾಗಿ ಸುತ್ತಲೂ ಕಾಯ್ತಾ ಕೂತಿದ್ದಾರೆ ಅನ್ನೋದು ಸ್ಪಷ್ಟವಾಗ್ತಿದೆ. ನಿನ್ನೆಯಷ್ಟೇ ಯಡಿಯೂರಪ್ಪನ್ನ ನೋಡಿ ಕೇಂದ್ರಕ್ಕೂ ಸಾಕಾಗ್ಬಿಟ್ಟಿದೆ. ಆದಷ್ಟ್ ಬೇಗ ಮುಖ್ಯಮಂತ್ರಿ ಹುದ್ದೆ ಖಾಲಿಯಾಗುತ್ತೆ. ಉತ್ತರ ಕರ್ನಾಟಕದವರೇ ಮುಂದಿನ ಮುಖ್ಯಮಂತ್ರಿ ಅಂತ ಸುದ್ದಿ ಬಂದ ಬೆನ್ನಲ್ಲೇ ಪರ ವಿರೋಧ ಚರ್ಚೆಗಳು ಭಾರೀ ಸದ್ದು ಮಾಡಿತ್ತು.. ಒಂದಷ್ಟು ಮಂದಿ ಸಚಿವರ ಖುರ್ಚಿ ಖಾಲಿ ಇಲ್ಲ.. ಅದ್ಯಾಕೆ ಹಾಗ್ ಹೇಳಿದ್ರೋ ಗೊತ್ತಿಲ್ಲ ಅಂತ ಟಾಂಗ್ ಕೊಡೊಕೆ ಸ್ಟಾರ್ಟ್ ಮಾಡಿದ ಬೆನ್ನಲ್ಲೇ ಇದೀಗ ಮತ್ತೊಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಸಚಿವರಿಗೆ ಬೆವರಿಳಿಸಿದ್ದಾರೆ. ಸಚಿವನಾಗಿ ಯಾರದೋ ಕಾಲು ಹಿಡ್ದು ತಲೆ ಹಿಡಿಯೋ ಕೆಲಸ ಮಾಡೋ ಜಾಯಮಾನ ನನ್ನದಲ್ಲಾ ಅಂತ ಬಹಿರಂಗವಾಗಿ ಹೇಳಿಕೆ ಕೊಡೋ ಮೂಲಕ ತಮಗೆ ಟಾಂಗ್ ಕೊಟ್ಟ ಸಚಿವರಿಗೆ ಚಾಟಿ ಬೀಸಿದ್ದಾರೆ.

Advertisement

Advertisement

ಈ ಬಗ್ಗೆ ಟ್ವೀಟ್ ಮಾಡೋ ಮೂಲಕ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ್ ಅವ್ರು,” ಕರ್ನಾಟಕ ಅಭಿವೃದ್ದಿ ಹಾಗೂ ಜನರ ಧ್ವನಿಯಾಗಿ ಆತ್ಮಸಾಕ್ಷಿಯಾಗಿ ಜನ ಪ್ರತಿನಿಧಿಯಾಗಿ ಕೆಲಸ ಮಾಡ್ತಿದ್ದೀನಿ. ಸಚಿವ ಆಗೋದಕ್ಕೆ ಯಾರದೋ ಕಾಲು ಕೈ ಹಿಡಿದು ತಲೆ ಹಿಡಿಯೋ ಕೆಲಸ ಮಾಡಿಲ್ಲ. ಅದು ನನ್ನ ಜಾಯಮಾನ ಅಲ್ಲ” ಎಂದು ಹೇಳುವ ಮೂಲಕ ಸಚಿವ ಸ್ಥಾನ ಅಲಂಕರಿಸಿದವರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ..

Advertisement

ಯತ್ನಾಳ್ ಹೇಳಿಕೆಗೆ ಸುಮ್ಮನೆ ನಡೆದ ಬಿಎಸ್ ವೈ

Advertisement

ಈ ಬಗ್ಗೆ ಏನು ಹೇಳ್ತೀರಿ ಸರ್.. ಯತ್ನಾಳ್ ಅವರು ನಿಮ್ಮ ವಿರುದ್ಧ ಇಷ್ಟೊಂದು ಗರಂ ಆಗಿರೋದು ಯಾಕೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ತಮ್ಮ ನಿವಾಸ ಕಾವೇರಿ ಬಳಿ ಪ್ರಶ್ನೆ ಹಾಕಲಾಯಿತು. ಆದ್ರೆ ಮುಖ್ಯಮಂತ್ರಿಗಳು ಇದಕ್ಕೆ ಏನನ್ನೂ ಸ್ಪಷ್ಟನೆ ಕೊಡದೆ ಸುಮ್ಮನೆ ನಡೆದು ಬಿಟ್ಟರು. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಹೀಗಿದ್ದರೂ ಒಬ್ಬ ಶಾಸಕ ಮುಖ್ಯಮಂತ್ರಿಗಳ ವಿರುದ್ಧ ಇಷ್ಟು ಕೀಳು ಮಟ್ಟದ ಪದ ಬಳಸಿ ಮಾತಾಡ್ತಾರೆ ಅಂದ್ರೆ ಬಿಜೆಪಿಯ ಒಳ ಕುದಿ ಅದಿನ್ನೆಷ್ಟಿರಬಹುದು ಅನ್ನೋದನ್ನು ಅಂದಾಜಿಸೋದು ಕಷ್ಟವೇ..

Advertisement
Share this on...