ಈ ನಟಿಯರು ಫಿಟ್ ಆಗಿರಲು ಯೋಗ ಮಾಡ್ತಾರೆ …

in ಕನ್ನಡ ಮಾಹಿತಿ/ಕ್ರೀಡೆ 85 views

ಪ್ರತಿ ವರ್ಷ ಜೂನ್ 21 ಅಂತರರಾಷ್ಟ್ರೀಯ ಯೋಗ ದಿನವೆಂದು ಆಚರಿಸಲಾಗುತ್ತದೆ. ಯೋಗ ದಿನಾಚರಣೆಯ ಅಂಗವಾಗಿ ಇಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಟಿಯರ ಬಗ್ಗೆ ಮಾಹಿತಿ ಕೊಡಲಾಗಿದೆ. ಮುಂದೆ ಓದಿ…
ಶಿಲ್ಪಾ ಶೆಟ್ಟಿ
ಬಾಲಿವುಡ್’ನ ಪ್ರಸಿದ್ಧ ನಟಿ ಶಿಲ್ಪಾ ಶೆಟ್ಟಿ ಅವರ ಚಲನಚಿತ್ರಗಳಿಂದಾಗಿ, ಸ್ಟೈಲ್’ಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಶಿಲ್ಪಾ ತನ್ನ ಜೀವನದಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆಂದು ಈಗಾಗಲೇ ನಿಮಗೆ ತಿಳಿದಿರಬೇಕು. ಅವರು ಯೋಗ ಮಾಡುವುದರಲ್ಲಿ ಹೆಚ್ಚು ಪ್ರವೀಣರು. ಅವರು ಯೋಗಕ್ಕೆ ಸಂಬಂಧಿಸಿದ ಅನೇಕ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅವು ಅತ್ಯುತ್ತಮವಾಗಿವೆ.

Advertisement


ಮಲೈಕಾ ಅರೋರಾ
ಮಲೈಕಾ ಅರೋರಾ ಬಾಲಿವುಡ್ ಪ್ರಪಂಚದ ಅತ್ಯಂತ ಸೊಗಸಾದ ನಟಿಯರಲ್ಲಿ ಒಬ್ಬರು. ಆಕೆ ತನ್ನನ್ನು ತಾನು ಸದೃಢವಾಗಿಟ್ಟುಕೊಳ್ಳಲು ಯೋಗ ಮಾಡುತ್ತಾರೆ. ಹೌದು, ಮಲೈಕಾ ತನ್ನನ್ನು ತಾನು ಫಿಟ್ ಮತ್ತು ಸೆಕ್ಸಿಯಾಗಿ ತೋರಿಸಲು ಯೋಗವನ್ನು ಮಾಡುತ್ತಾರೆ. ನೀವು ಯೋಗಕ್ಕೆ ಸಂಬಂಧಿಸಿದ ಮಲೈಕಾ ಪೋಸ್ಟ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ನೋಡಬಹುದು.

Advertisement

 

Advertisement


ಕರೀನಾ ಕಪೂರ್
ಬಾಲಿವುಡ್ನ ಬೇಬೊ ಕರೀನಾ ಕಪೂರ್ ಅವರ ಫಿಟ್ನೆಸ್ ರಹಸ್ಯವನ್ನು ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ಕರೀನಾ ಸದೃಢವಾಗಿರಲು ಜಿಮ್ ಜೊತೆಗೆ ಯೋಗವನ್ನು ಮಾಡುತ್ತಾರೆ ಎಂದು ಬಹುತೇಕರಿಗೆ ತಿಳಿದಿಲ್ಲ. ಹೌದು, ಕೆಲವು ದಿನಗಳ ಹಿಂದೆ ಕರೀನಾ ಯೋಗ ವಿಡಿಯೋ ತುಂಬಾ ವೈರಲ್ ಆಗಿದ್ದು, ಇದರಲ್ಲಿ ಅವರು ಸೂರ್ಯ ನಮಸ್ಕಾರ ಮಾಡುತ್ತಿರುವುದು ನೀವು ನೋಡಬಹುದು.

Advertisement


ಊರ್ವಶಿ ರೌಟೆಲಾ
ಮಾಡೆಲಿಂಗ್ ಮತ್ತು ನಟನಾ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಊರ್ವಶಿ ರೌಟೇಲಾ, ಫಿಟ್’ನೆಸ್’ಗೆ ಯೋಗ ಮುಖ್ಯವೆಂದು ಪರಿಗಣಿಸಿದ್ದಾರೆ. ಯೋಗ ಮಾಡುವುದೆಂದರೆ ಊರ್ವಶಿಗೆ ಎಲ್ಲಿಲ್ಲದ ಖುಷಿ. ಅವರು ಯೋಗಕ್ಕೆ ಸಂಬಂಧಿಸಿದಂತೆ ಇನ್ಸ್ಟಾಗ್ರಾಮ್’ನಲ್ಲಿ ಅನೇಕ ಯೋಗ ಪೋಸ್ಟ್ ಳನ್ನು ಹಂಚಿಕೊಂಡಿರುವುದನ್ನು ನೀವು ನೋಡಬಹುದು.

 


ಜಾಕ್ವೆಲಿನ್ ಫರ್ನಾಂಡಿಸ್
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಸ್ಟೈಲ್’ನಿಂದಲೇ ಎಲ್ಲರಿಗೂ ಅಚ್ಚುಮೆಚ್ಚು. ಜಾಕ್ವೆಲಿನ್ ಯೋಗದಲ್ಲೂ ಪರಿಣಿತಿ ಹೊಂದಿದ್ದಾರೆ. ಹೌದು, ಜಾಕ್ವೆಲಿನ್ ಫಿಟ್’ನೆಸ್ ಹಿಂದಿನ ರಹಸ್ಯವೆಂದರೆ ಪ್ರತಿನಿತ್ಯ ಮಾಡುವ ಯೋಗ.

Advertisement
Share this on...