Namma Kannada News ಲಾಕ್​ಡೌನ್ ಸಡಿಲಿಕೆ ಆಗುತ್ತಿದ್ದಂತೆ ಸಿನಿಮಾ ಚಿತ್ರೀಕರಣ ಆರಂಭಿಸಿದ್ರಾ ಭಟ್ಟರು…?

in Kannada News 45 views

ಚಿತ್ರೀಕರಣದ ಚಟುವಟಿಕೆಗಳೆಲ್ಲಾ ಬಂದ್ ಆಗಿ ಒಂದು ತಿಂಗಳು ಕಳೆದಿದೆ. ಈಗ ಯಾವುದೇ ಹೊಸ ಸಿನಿಮಾ, ಧಾರಾವಾಹಿಯ ಚಿತ್ರೀಕರಣ ಜರುಗುತ್ತಿಲ್ಲ. ಜನರಿಗಾಗಿ ವಾಹಿನಿ ಪ್ರತಿದಿನ ಸೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡುತ್ತಿವೆ. ಮೇ 3 ವರೆಗೂ ದೇಶದಲ್ಲಿ ಲಾಕ್​​ಡೌನ್ ವಿಸ್ತರಿಸಲಾಗಿದೆ. ಆದರೆ ಜನರು ಕಷ್ಟಪಡಬಾರದು ಎಂಬ ಉದ್ದೇಶದಿಂದ ಇಂದಿನಿಂದ ಕೆಲವೊಂದು ನಿರ್ಬಂಧಗಳನ್ನು ವಿಧಿಸಿ ಲಾಕ್​ಡೌನ್​​​​​ ಸ್ವಲ್ಪ ಸಡಿಲಗೊಳಿಸಲಾಗಿದೆ. ಈ ನಡುವೆ ಯೋಗರಾಜ್ ಭಟ್ ಶೂಟಿಂಗ್​ ಆರಂಭಿಸಿದ್ದಾರೆ.

Advertisement

Advertisement

ಅರೆ, ಲಾಕ್​ಡೌನ್ ಸಡಿಲಿಕೆಯಾಗುತ್ತಿದ್ದಂತೆ ಭಟ್ಟರು ಆಗಲೇ ಶೂಟಿಂಗ್ ಶುರು ಮಾಡಿದ್ರಾ…ಅದು ಗಾಳಿಪಟ ಭಾಗ 2 ಚಿತ್ರದ ಶೂಟಿಂಗ್ ಇರಬಹುದಾ ಎಂದುಕೊಳ್ಳಬೇಡಿ. ಭಟ್ಟರು ಶೂಟಿಂಗ್ ಮಾಡುತ್ತಿರುವುದು ಸಿನಿಮಾಗಾಗಿ ಅಲ್ಲ, ಅವರು ಮಾಡುತ್ತಿರುವುದು ಕಿರುಚಿತ್ರವನ್ನು. ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು, ಪೌರಕಾರ್ಮಿಕರನ್ನು ಜನರು ಶ್ಲಾಘಿಸುತ್ತಿದ್ದಾರೆ.

Advertisement

Advertisement

ಇನ್ನು ಕೊರೊನಾ ಬಗ್ಗೆ ಜನರು ಹೇಗೆ ಎಚ್ಚರದಿಂದ ಇರಬೇಕು ಎಂಬುದರ ಬಗ್ಗೆ ಹಲವು ಜಾಗೃತಿ ಗೀತೆಗಳು, ಕಿರುಚಿತ್ರಗಳು ಈಗಾಗಲೇ ತಯಾರಾಗಿವೆ. ಅದೇ ರೀತಿ ಯೋಗರಾಜಭಟ್ಟರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಅಭಿನಂದಿಸುವ ಉದ್ದೇಶದಿಂದ ಈ ಕಿರುಚಿತ್ರಕ್ಕೆ ಕೈ ಹಾಕಿದ್ದಾರೆ.

ಭಟ್ಟರ ಈ ಸಾಹಸಕ್ಕೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅನುಮತಿ ನೀಡಿದ್ದಾರೆ. ಬೆಂಗಳೂರಿನ ಟೌನ್​​ಹಾಲ್ ಎದುರು ಭಟ್ರು ಕೆಲವು ಪೊಲೀಸರ ಜೊತೆಗೂಡಿ ಚಿತ್ರೀಕರಣ ಮಾಡುತ್ತಿದ್ದಾರೆ. ಪೊಲೀಸರು ಕೂಡಾ ಹುಮ್ಮಸ್ಸಿನಿಂದ ಈ ಕಿರುಚಿತ್ರದಲ್ಲಿ ಭಾಗವಹಿಸುತ್ತಿದ್ದಾರೆ. ಭಟ್ಟರ ನಿರ್ದೇಶನದಲ್ಲಿ ಪೊಲೀಸರು ಕೂಡಾ ನಟಿಸಿದ್ದಾರೆ.

ಇನ್ನು ಈ ಕಿರುಚಿತ್ರದ ಬಗ್ಗೆ ಮಾತನಾಡಿದರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ‘ಯೋಗರಾಜ್​ ಭಟ್ ಚಿತ್ರೀಕರಣ ಮಾಡಲು ನಾವೇ ಅನುಮತಿ ನೀಡಿದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ಪೊಲೀಸರ ಕಾರ್ಯ, ತ್ಯಾಗವನ್ನು ಗುರುತಿಸುವ ಕಾರ್ಯವನ್ನು ಯೋಗರಾಜ್ ಭಟ್ಟರು ಮಾಡುತ್ತಿದ್ದಾರೆ. ಅವರಿಗೆ ಧನ್ಯವಾದಗಳು’ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಯೋಗರಾಜ್​​ ಭಟ್ಟರು ಇಂತಹ ಕಿರುಚಿತ್ರಗಳನ್ನು ಮಾಡುತ್ತಿರುವುದು ಮೊದಲಲ್ಲ. ಇದಕ್ಕೂ ಮೊದಲು ಚುನಾವಣಾ ಆಯೋಗದ ಮನವಿ ಮೇರೆಗೆ ಚುನಾವಣೆ ಗೀತೆಗಳನ್ನು ರಚಿಸಿ ಹಾಡಿದ್ದರು. ಅಲ್ಲದೆ ಕೆಲವೊಂದು ಕಿರುಚಿತ್ರಗಳನ್ನು ಮಾಡಿಕೊಟ್ಟಿದ್ದಾರೆ. ಭಟ್ಟರು ಸಿನಿಮಾ ನಿರ್ದೇಶನದ ಜೊತೆಗೆ ಖಾಸಗಿ ವಾಹಿನಿಯ ಕಾಮಿಡಿ ಕಾರ್ಯಕ್ರಮವೊಂದರ ಜಡ್ಜ್ ಆಗಿ ಕೂಡಾ ಕಾರ್ಯ ನಿರ್ವಹಿಸುತ್ತಿದ್ದಾರೆ.
All Righst Reserved Namma Kannada Entertainment.

Advertisement
Share this on...