chikkanna

ಚಿಕ್ಕಣ್ಣನಿಗೆ ನೀವು ನಾಯಕಿಯಾಗಬೇಕಾ…ಹಾಗಿದ್ದಲ್ಲಿ ನಿಮಗಿಲ್ಲಿದೆ ನೋಡಿ ಅವಕಾಶ !

in ಮನರಂಜನೆ/ಸಿನಿಮಾ 195 views

ಪ್ರೇಕ್ಷಕರು ಗುರುತೇ ಹಿಡಿಯದಂತ ಸಣ್ಣ ಪುಟ್ಟ ಪಾತ್ರಗಳ ಮೂಲಕ ಕಿರುತೆರೆ, ಚಿತ್ರರಂಗಕ್ಕೆ ಬಂದ ಎಷ್ಟೋ ನಟನಟಿಯರು ಇಂದು ಸ್ಟಾರ್​​ಗಳಾಗಿ ಹೆಸರು ಮಾಡಿದ್ದಾರೆ. ಅದೇ ರೀತಿ ಕಾಮಿಡಿ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ನಟ-ನಟಿಯರು ಕೂಡಾ ಇಂದು ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ನವರಸ ನಾಯಕ ಜಗ್ಗೇಶ್ ವಿಲನ್ ಆಗಿ, ಕಾಮಿಡಿ ನಟನಾಗಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಇದೀಗ ಅವರು ಹೀರೋ. ಅದೇ ರೀತಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಕಾಮಿಡಿ ಟೈಂ ಕಾರ್ಯಕ್ರಮದ ಮೂಲಕ ಹಾಗೂ ಕಾಮಿಡಿ ಪಾತ್ರಗಳ ಮೂಲಕ ಜನರಿಗೆ ಪರಿಚಿತರಾಗಿದ್ದರು. ನಂತರ ಚೆಲ್ಲಾಟ ಚಿತ್ರದ ಮೂಲಕ ಪ್ರಮುಖ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ ಅವರು, ಮುಂಗಾರು ಮಳೆ ಚಿತ್ರದ ಮೂಲಕ ಸ್ಟಾರ್ ನಟರಾಗಿ ಹೆಸರು ಮಾಡಿದರು. ಇದೀಗ ಇವರ ಹಾದಿಯಲ್ಲೇ ಬಂದ ಕಾಮಿಡಿ ನಟ ಚಿಕ್ಕಣ್ಣ ಕೂಡಾ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಉಪಾಧ್ಯಕ್ಷ ಎಂಬ ಚಿತ್ರದಲ್ಲಿ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವುದು ತಿಳಿದ ವಿಚಾರ.

Advertisement

Advertisement

ಚಿಕ್ಕಣ್ಣ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದವರು. ಯಶ್ ಜೊತೆ ಕಿರಾತಕ ಚಿತ್ರದಲ್ಲಿ ಚಿಕ್ಕಣ್ಣ ಮೊದಲ ಬಾರಿಗೆ ಕಾಣಿಸಿಕೊಂಡರು. ಚಿತ್ರರಂಗಕ್ಕೆ ಬರುವ ಮುನ್ನ ಚಿಕ್ಕಣ್ಣ ಮೈಸೂರಿನ ದೃಶ್ಯ ಕಲಾವಿದ ತಂಡದಲ್ಲಿ ಕಾಮಿಡಿ ಶೋನಲ್ಲಿ ಭಾಗವಹಿಸುತ್ತಿದ್ದರು. ನಂತರ ಜೀ ಕನ್ನಡ ಹಾಗೂ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಾಂಕ್ ಶೋನಲ್ಲಿ ಕಾಣಿಸಿಕೊಂಡ ಚಿಕ್ಕಣ್ಣ ಯಶ್ ಕಣ್ಣಿಗೆ ಬಿದ್ದರು. ಅಲ್ಲಿಂದ ಚಿಕ್ಕಣ್ಣ ಲಕ್ ಬದಲಾಯ್ತು ಎಂದರೆ ತಪ್ಪಿಲ್ಲ ಬಿಡಿ. ರಾಜಾಹುಲಿ, ಲಕ್ಕಿ, ಬುಲ್​​ ಬುಲ್, ಸವಾರಿ, ವಿಕ್ಟರಿ, ಅಧ್ಯಕ್ಷ, ರನ್ನ, ಮಿಸ್ಟರ್ ಐರಾವತ, ಮಾಸ್ಟರ್ ಪೀಸ್​​​​ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದರು. ಇದೀಗ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿದ್ದಾರೆ.

Advertisement

ಶರಣ್ ಜೊತೆ ಅಧ್ಯಕ್ಷ ಚಿತ್ರದಲ್ಲಿ ಚಿಕ್ಕಣ್ಣ ಉಪಾಧ್ಯಕ್ಷನ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ಉಪಾಧ್ಯಕ್ಷ ಎಂದೇ ಹೆಸರಿಡಲಾಗಿದೆ. ಈ ಚಿತ್ರವನ್ನು ಚಂದ್ರಮೋಹನ್​​​​ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ ನಾರಾಯಣ ಎಂಬ ಹಳ್ಳಿ ಹುಡುಗನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಚಿಕ್ಕಣ್ಣನಿಗೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ನಿರ್ದೇಶಕ ಚಂದ್ರಮೋಹನ್ ಈ ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ. ಅದಕ್ಕಾಗಿ ಕಾಸ್ಟಿಂಗ್ ಕಾಲ್ ಮಾಡಲಾಗಿದೆ.

Advertisement

ಉಪಾಧ್ಯಕ್ಷ ಚಿತ್ರದಲ್ಲಿ ನೀವು ಚಿಕ್ಕಣ್ಣನಿಗೆ ನಾಯಕಿಯಾಗಿ ನಟಿಸಬೇಕಾ..? ಹಾಗಿದ್ದಲ್ಲಿ ನೀವು ಆ್ಯಕ್ಟ್ ಮಾಡಿರುವ ವಿಡಿಯೋ ಕ್ಲಿಪ್ಪಿಂಗ್ ಹಾಗೂ ನಿಮ್ಮ ಫೋಟೋಗಳನ್ನು ಈ ಮೇಲ್ ಐಡಿಗೆ ಕಳಿಸಿ. ಒಂದು ವೇಳೆ ನಿಮ್ಮ ಆ್ಯಕ್ಟಿಂಗ್ ಹಾಗೂ ನಿಮ್ಮ ಲುಕ್ ಚಿತ್ರತಂಡಕ್ಕೆ ಒಕೆ ಎನಿಸಿದರೆ ನಿಮ್ಮನ್ನು ಆಡಿಷನ್​​​ಗಾಗಿ ಕರೆಯಲಾಗುವುದು. ಉಪಾಧ್ಯಕ್ಷನಿಗೆ ನಾಯಕಿ ಆಗುವ ಅವಕಾಶ ನಿಮ್ಮಲ್ಲಿ ಯಾರಿಗೆ ಒಲಿಯಲಿದೆ ನೋಡೋಣ.

Advertisement
Share this on...