ಲಾಕ್ ಡೌನ್ ನಡುವೆ ಬಿಗ್ ಬಾಸ್ ವಿನ್ನರ್ ಏನ್ಮಾಡ್ತಿದ್ದಾರೆ ಗೊತ್ತಾ…?

in ಕನ್ನಡ ಮಾಹಿತಿ 26 views

ಕೋರೊನಾ ಭೀತಿಯಿಂದ ಇಡೀ ದೇಶವೇ ಎರಡನೇ ಬಾರಿ ಲಾಕ್ ಡೌನ್ ಆಗಿದೆ. ಇನ್ನೂ 18 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು ಹೀಗಾಗಿ ಎಲ್ಲಾ ಸ್ಟಾರ್ ನಟ-ನಟಿಯರು ಕಲಾವಿದರು ಮನೆಯಲ್ಲಿದ್ದು ತಮ್ಮ ಕುಟುಂಬದವರ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಆದರೆ ಬಿಗ್ ಬಾಸ್ ಸೀಜ಼ನ್ 6 ರ ವಿನ್ನರ್ ಶಶಿಕುಮಾರ್ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ರಿಯಾಲಿಟಿ ಶೋ ಬಿಗ್ ಬಾಸ್ ಸೀಜ಼ನ್ 6 ರಲ್ಲಿ ಕಾಲಿಟ್ಟಾಗ ಆಧುನಿಕ ಕೃಷಿಕ ಎಂದೇ ಗುರುತಿಸಿಕೊಳ್ಳುತ್ತಿದ್ದ ಶಶಿಕುಮಾರ್ ಕೃಷಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

Advertisement

 

Advertisement

Advertisement

 

Advertisement

ಬಿಗ್ ಬಾಸ್ ಶೋನಲ್ಲಿ ಗುರುತಿಸಿಕೊಂಡ ಅನೇಕ ಸ್ಪರ್ಧಿಗಳು ಬೇರೆಬೇರೆ ಕಾರಣಗಳಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ. ಆದರೆ ಶಶಿಕುಮಾರ್ ತಮ್ಮ ಊರಿನಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಶಶಿಕುಮಾರ್ ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನ ಊಪ್ರ ಹಳ್ಳಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಶಿ ಮೆಹಬೂಬಾ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದರು. ಈ ಚಿತ್ರದ ಶೂಟಿಂಗ್ ನಡೆಯಬೇಕಿತ್ತು ಆದರೆ ಲಾಕ್ ಡೌನ್ ಕಾರಣದಿಂದ ಸದ್ಯಕ್ಕೆ ಚಿತ್ರೀಕರಣ ನಡೆಯುವಂತಿಲ್ಲ. ಹೀಗಾಗಿ ತಮ್ಮ ಅಜ್ಜಿಯ ಊರು ಉಪ್ರಹಳ್ಳಿಯಲ್ಲಿ ಕೃಷಿ ಕೆಲಸಗಳನ್ನ ಮಾಡುತ್ತಿದ್ದಾರೆ ಅಲ್ಲದೆ ಅವರು ಕೃಷಿಯನ್ನ ಯಾಕೆ ಮಾಡುತ್ತಿದ್ದೇನೆ ಎಂಬುದನ್ನ ವಿಡಿಯೋ ಮೂಲಕ ವಿವರಿಸಿದ್ದಾರೆ.

 

 

ಲಾಕ್ ಡೌನ್ ಪರಿಸ್ಥಿತಿಯಿಂದ ಇಡೀ ದೇಶವೇ ನಷ್ಟ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ಒಂದಷ್ಟು ಹಣ ಉಳಿತಾಯ ಮಾಡಿಕೊಂಡಿರುವವರು ಅದನ್ನೆ ಖರ್ಚು ಮಾಡುತ್ತಾರೆ. ಆದರೆ ದಿನಗೂಲಿ ಕಾರ್ಮಿಕರು ಬಡವರು ಜೀವನವನ್ನ ಹೇಗೆ ನಿಭಾಯಿಸುತ್ತಾರೆ. ಇಂದಿನ ದಿನಕ್ಕೆ ಮಾತ್ರ ಅವರಿಗೆ ಊಟ ಇರುತ್ತೆ ನಾಳೆಗೆ ಏನು ಮಾಡ್ತಾರೆ ಅಂತ ಕಳವಳ ವ್ಯಕ್ತಪಡಿಸಿದರು. ನಾನು ಕೋಲಾರದ ಶ್ರೀನಿವಾಸಪುರದ ತೋಟವೊಂದರಲ್ಲಿ ಇದ್ದೇನೆ. ಇಲ್ಲಿ ಸುಮಾರು 70-75 ಕುಟುಂಬಗಳಿವೆ. ಈಗ ಅವರೆಲ್ಲರನ್ನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು 10 ರಿಂದ 12 ಎಕರೆಗಳಲ್ಲಿ ತರಕಾರಿ ಬೆಳೆಯುತ್ತಿದ್ದೇವೆ. ಸದ್ಯಕ್ಕೆ ಟಮೋಟೊ ಹಾಕುತ್ತಿದ್ದೇವೆ. ಲಾಕ್ ಡೌನ್ ಇದ್ದರೂ ಇಂದು ಜನರಿಗೆ ತರಕಾರಿ ಸಿಗುತ್ತಿದೆ.

 

 

ಇಂದು ಬೀಜ ಹಾಕಿದ ಕೂಡಲೇ ನಾಳೆ ಕಟ್ಟಾವಿಗೆ ಸಿಗುವುದಿಲ್ಲ. ಲಾಕ್ ಡೌನ್ ಗೂ ಮೊದಲು ಅಂದರೆ ಮೂರು ತಿಂಗಳ ಹಿಂದೆ ಬಿತ್ತಿದ್ದ ಬೆಳೆಯಿಂದ ಇಂದು ತರಕಾರಿ ಬಳಸುತ್ತಿದ್ದೀವಿ ಅಂತ ತಿಳಿಸಿದ್ದಾರೆ. ಅಂದು ಬೆಳೆದಿದ್ದ ತರಕಾರಿಗಳಿಗೆ ಇಂದು ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಅನೇಕರು ತಾವು ಬೆಳೆದ ಬೆಳೆಗಳನ್ನ ರಸ್ತೆಯಲ್ಲಿ ಸುರಿದು ಹೋಗುತ್ತಿದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಜನರು ಕೃಷಿ ಬಗ್ಗೆ ಗಮನಹರಿಸುತ್ತಿಲ್ಲ.

 

 

ಒಂದು ನರ್ಸರಿಗೆ ನಾನು ಹೋಗಿದ್ದೆ ಅಲ್ಲಿ 10 ಲಕ್ಷ ಸಸಿ ಮಾರಾಟ ಮಾಡುವಲ್ಲಿ ಹತ್ತು ಸಾವಿರ ಮಾತ್ರ ಸೇಲ್ ಆಗಿದೆ. ಯಾರು ಕೃಷಿ ಮಾಡದೆ ಇದ್ದರೆ ಮುಂದಿನ 3-4 ತಿಂಗಳಿಗೆ ಏನು ಸೇವಿಸುತ್ತೀರಿ? ಅಂತ ಪ್ರಶ್ನಿಸಿದ್ದಾರೆ. ದಯವಿಟ್ಟು ಯಾರು ಕೃಷಿ ಮಾಡುತ್ತಿದ್ದೀರಿ ಅವರು ಕೃಷಿಯನ್ನ ಮುಂದುವರೆಸಿ ಕೋರೊನಾ ಅಪಾಯಕಾರಿ ಹಾಗೆಂದು ಕೃಷಿಯನ್ನ ನಿಲ್ಲಿಸಬೇಡಿ ಎಲ್ಲಾ ಮುನ್ನೆಚ್ಚರಿಕೆಯ ಕ್ರಮದೊಂದಿಗೆ ಕೃಷಿ ಮಾಡಿ. ನಾವು ಒಂದಷ್ಟು ಮುನ್ನೆಚ್ಚರಿಕೆ ಇಟ್ಟುಕೊಂಡು ಕಾರ್ಮಿಕರಿಗೆ ಸ್ಯಾನಿಟೈಸರ್ ಕೊಟ್ಟು ಕೆಲಸ ಮಾಡಿಸುತ್ತಿದ್ದೇವೆ ಅಂತ ತಿಳಿಸಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗುವುದನ್ನ ಕೊರೋನಾ ವೈರಸ್ ವಿರುದ್ಧದ ಹೋರಾಟವೆಂದೆ ಶಶಿಕುಮಾರ್ ಪರಿಗಣಿಸಿದ್ದಾರೆ.

 

 

ಈ ಸಂಕಷ್ಟದ ಸಮಯದಲ್ಲಿ ಕೃಷಿ ಉತ್ಪಾದನೆ ನಿಂತು ಹೋಗಬಾರದು. ಹೀಗಾದರೆ ಮುಂಬರುವ ದಿನಗಳಲ್ಲಿ ಬಾರಿ ಸಮಸ್ಯೆ ಎದುರಾಗಲಿದೆ. ಹೀಗಾಗಿ ಯಾರೂ ಕೃಷಿ ಕಾರ್ಯ ನಿಲ್ಲಿಸಬೇಡಿ ಅಂತ ಅವರು ಮನವಿ ಮಾಡಿದ್ದಾರೆ.

– ಸುಷ್ಮಿತಾ

Advertisement
Share this on...