ಹಣವನ್ನು ಬಳಸುವ ಮುನ್ನ ಈ ಮಾಹಿತಿಗಳನ್ನು ನೀವು ತಿಳಿದುಕೊಳ್ಳಲೇಬೇಕು !

in ಕನ್ನಡ ಮಾಹಿತಿ 44 views

ನಾವು ಯಾವಾಗಲೂ ಹಣವನ್ನು ಎಲ್ಲಿ ಹೂಡಬೇಕು?, ಇದನ್ನು ಯಾವುದಕ್ಕೆ ಉಪಯೋಗಿಸದರೆ ಲಾಭವಾಗುತ್ತದೆ?, ಹಣದಿಂದ ಏನನ್ನು ಖರೀದಿ ಮಾಡಬೇಕು?, ಯಾರಿಗೆ ಕೊಡಬೇಕು… ಎಂದು ಹಣದ ಬಗ್ಗೆ ಯೋಚನೆ ಮಾಡುತ್ತಲೇ ಇರುತ್ತೇವೆ. ಆದರೆ ಆ ಹಣ ಹೇಗೆ ತಯಾರಾಗುತ್ತದೆ? ಯಾವಾಗ ಬಳಕೆಗೆ ಬಂತು, ಅದನ್ನು ಮೊದಲು ಯಾರು ಯಾವುದಕ್ಕೆ ಬಳಸುತ್ತಿದ್ದರು? ಯಾವುದರಿಂದ ತಯಾರು ಮಾಡುತ್ತಾರೆ? ಎಂಬ ಬಗ್ಗೆ ಯೋಚಿಸಿರುವುದಿಲ್ಲ. ಬಹುತೇಕರಿಗೆ ಈ ಹಣದ ಮೂಲದ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕೆಂದುಕೊಂಡರೂ ಈ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ, ಆದರೆ ನೀವೀಗ ಇದರ ಬಗ್ಗೆ ಹೆಚ್ಚು ಯೋಚನೆ ಮಾಡುವ ಅಗತ್ಯವಿಲ್ಲ. ಹಣ ಮತ್ತು ಅದರ ತಯಾರಿಕೆ ಸೇರಿದಂತೆ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತಿದ್ದೇವೆ ಓದಿ…

Advertisement

 

Advertisement

Advertisement

*ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ದುಡ್ಡನ್ನು ತಯಾರು ಮಾಡಿದ್ದು ರೋಮನ್ಸ್ ದೇಶದಲ್ಲಿ.
*ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಇಲ್ಲಿಯವರೆಗೆ ಹಣವನ್ನು ಹೆಚ್ಚು ಮುದ್ರಿಸಿದ ದೇಶ ಹಂಗೇರಿ.
*ನಾವೆಲ್ಲರೂ ಟಾಯ್ಲೆಟ್’ನಲ್ಲಿ ಹೆಚ್ಚು ಬ್ಯಾಕ್ಟಿರೀಯಾಗಳಿವೆ ಎಂದು ಅಂದುಕೊಂಡಿದ್ದೇವೆ. ಆದರೆ ಅದಕ್ಕಿಂತಲೂ ಅಧಿಕ ಬ್ಯಾಕ್ಟೀರಿಯಾಗಳು ನಾವು ಬಳಸುವ ನೋಟಿನಲ್ಲಿ ಇರುತ್ತವೆ. ಅಂದಹಾಗೆ ಈ ನೋಟಿನಲ್ಲಿರುವ ಯಾವುದೇ ವೈರಸ್’ಗಳು 2 ವಾರಗಳವರೆಗೆ ಬದುಕಿರುತ್ತವಂತೆ. ಆದ್ದರಿಂದ ಯಾವಾಗಲೂ ನಾವು ನೋಟು ಮುಟ್ಟಿದ ನಂತರ ಕೈ ತೊಳೆಯುವುದು ಒಳ್ಳೆಯದು.
*ನಮ್ಮ ಭಾರತದಲ್ಲಿ ಒಟ್ಟಾರೆ ನಾಲ್ಕು ಕಡೆ ಮಾತ್ರ ನಾಣ್ಯಗಳನ್ನು ತಯಾರು ಮಾಡುತ್ತಾರೆ. ಅದು ಎಲ್ಲಿ ತಯಾರು ಮಾಡುತ್ತಾರೆ ಎಂದು ತಿಳಿಯಲು ನಾವು ದಿನಾಂಕದ ಮೇಲಿನ ಸಿಂಬಲ್ ನೋಡಿ ತಿಳಿಯಬಹುದು. ಹೌದು, ಡಾಟ್ ಸಿಂಬಲ್ ಇದ್ರೆ ನೊಯ್ಡಾದಲ್ಲಿ ತಯಾರು ಮಾಡುತ್ತಾರೆ ಎಂದರ್ಥ. ಹಾಗೆಯೇ ಡೈಮಂಡ್ ಸಿಂಬಲ್ ಇದ್ರೆ ಮುಂಬೈನಲ್ಲಿ, ಸ್ಟಾರ್ ಸಿಂಬಲ್ ಇದ್ರೆ ಹೈದ್ರಾಬಾದ್ ನಲ್ಲಿ, ಯಾವುದೇ ಸಿಂಬಲ್ ಇಲ್ಲ ಅಂದ್ರೆ ಅದನ್ನು ಕೊಲ್ಕಾತ್ತದಲ್ಲಿ ತಯಾರು ಮಾಡ್ತಾರಂತೆ.

Advertisement

*ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಜೀರೋ ರೂಪಾಯಿ ನೋಟ್ ಪ್ರಿಂಟ್ ಮಾಡಿದ್ದು ನಮ್ಮ ಭಾರತ ದೇಶದಲ್ಲಿ. ಇಲ್ಲಿ 25 ಲಕ್ಷ ಜೀರೋ ರೂಪಾಯಿ ನೋಟುಗಳನ್ನು ಪ್ರಿಂಟ್ ಮಾಡಲಾಗುತ್ತದೆ. ಯಾಕೆಂದರೆ ಯಾರಾದರೂ ಲಂಚ ಕೇಳಿದರೆ ಈ ನೋಟುಗಳನ್ನು ಕೊಡಬೇಕೆಂಬ ಉದ್ದೇಶದಿಂದ.
*ವಾಸ್ತವವಾಗಿ ಈ ಪ್ರಪಂಚದಲ್ಲಿ 200 ಟ್ರಿಲಿಯನ್ ಡಾಲರ್ ಹಣ ಇರಬೇಕಾಗಿತ್ತು. ಆದರೆ ಬ್ಯಾಂಕುಗಳ ಪ್ರಕಾರ 80 ಟ್ರಿಲಿಯನ್ ಡಾಲರ್ ಹಣವಷ್ಟೇ ಇದೆ. ಮಿಕ್ಕಿದ 120 ಟ್ರಿಲಿಯನ್ ಡಾಲರ್ ಹಣ ಬ್ಲಾಕ್ ಮನಿಯಾಗಿ ಮುಚ್ಚಿಡಲಾಗಿದೆ.

 

 

*ಈ ಪ್ರಪಂಚದಲ್ಲಿ ಮೊಟ್ಟಮೊದಲನೆಯ ಬಾರಿಗೆ ಪೇಪರ್’ನಲ್ಲಿ ಹಣ ಪ್ರಿಂಟ್ ಮಾಡಿದ್ದು ಚೈನಾ ದೇಶ. ಕುತೂಹಲಕಾರಿ ವಿಷಯವೆಂದರೆ ನಾವಂದುಕೊಂಡ ಹಾಗೆ ಪೇಪರ್’ನಿಂದ ಹಣ ತಯಾರು ಮಾಡುವುದಿಲ್ಲ. ಕಾಟನ್ ಮತ್ತು ಲೆನಿನ್’ನಿಂದ ತಯಾರು ಮಾಡ್ತಾರೆ.
*ಒಂದು ಕಾಲದಲ್ಲಿ ಗಡ್ಡ ಹೆರೆದುಕೊಳ್ಳುವ ರೇಜರ್ ತಯಾರು ಮಾಡುವುದಕ್ಕೆ ಬಾಂಗ್ಲಾದೇಶ ನಮ್ಮ ದೇಶದ 5. ರೂ.ಹಣವನ್ನು ಸ್ಮಗ್ಲಿಂಗ್ ಮಾಡ್ತಾ ಇತ್ತಂತೆ!
* ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ತಯಾರು ಮಾಡುವುದಕ್ಕೆ ಮಾತ್ರ ಅತಿ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಅಂದ್ರೆ ಇದನ್ನು ನಿರ್ಮಾಣ ಮಾಡಿರುವುದಕ್ಕೆ ಆಗಿರುವ ಖರ್ಚು 150 ಬಿಲಿಯನ್ ಡಾಲರ್ಸ್.

Advertisement
Share this on...