ಮಲಬದ್ಧತೆ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ ….

in ಕನ್ನಡ ಆರೋಗ್ಯ 230 views

ಕೊರೊನಾ ವೈರಸ್ ಕಾರಣದಿಂದಾಗಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದ್ದರಿಂದ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮೊದಲಿನ ಹಾಗೆ ವಾಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇದು ನಮ್ಮ ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತಿರುವುದಲ್ಲದೆ, ಮಲಬದ್ಧತೆಯಂತಹ ಸಮಸ್ಯೆಗಳು ಸಾಮಾನ್ಯವಾಗಿದೆ. ಅತಿಯಾಗಿ ತಿನ್ನುವುದು, ಕಡಿಮೆ ನೀರು ಕುಡಿಯುವುದು, ಧೂಮಪಾನ ಇತ್ಯಾದಿಗಳಿಂದ ಮಲಬದ್ಧತೆ ಉಂಟಾಗುತ್ತಿದೆ. ಮಲಬದ್ಧತೆಯಿಂದಾಗಿ ಹೊಟ್ಟೆಯಲ್ಲಿ ಸೆಳೆತ, ವಾಂತಿಯಂತಹ ಲಕ್ಷಣಗಳು ಕಂಡುಬರುತ್ತವೆ. ಜೊತೆಗೆ ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ಒತ್ತಡ ಹೆಚ್ಚಾಗುತ್ತದೆ. ಆದರೆ ಇದಕ್ಕೆಲ್ಲಾ ನೀವು ಭಯಪಡಬೇಡಿ, ಆಯುರ್ವೇದದಲ್ಲಿ ಇದಕ್ಕೆ ಅನೇಕ ಪರಿಹಾರಗಳಿದ್ದು, ಆ ಮದ್ದುಗಳು ಸಹ ನಮ್ಮ ಮನೆಗಳಲ್ಲಿ ಲಭ್ಯವಿದೆ. ಹಾಗಾದರೆ ಬನ್ನಿ, ಅವು ಯಾವುವು ಎಂದು ನೋಡೋಣ…

Advertisement

Advertisement

ದೇಸಿ ತುಪ್ಪವನ್ನು ಹಾಲಿನಲ್ಲಿ ಬೆರೆಸಿ
ಮಲಬದ್ಧತೆಯ ಸಮಸ್ಯೆ ಇರುವವರು ಮಲಗುವ ವೇಳೆಗೆ ಒಂದು ಕಪ್ ಹಾಲು ತೆಗೆದುಕೊಂಡು ಅದರ ಜೊತೆ ಒಂದು ಟೀ ಸ್ಪೂನ್ ದೇಸಿ ತುಪ್ಪವನ್ನು ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಶೀಘ್ರದಲ್ಲೇ ನೀವು ಮಲಬದ್ಧತೆಗೆ ಪರಿಹಾರ ಕಂಡುಕೊಳ್ಳಬಹುದು.
ಬಿಸಿ ನೀರು ಮತ್ತು ಸೊಂಪು ಕಾಳು
ಆಯುರ್ವೇದದ ಪ್ರಕಾರ, ಮಲಬದ್ಧತೆಯನ್ನು ನಿವಾರಿಸಲು ಸೊಂಪು ಕಾಳು ಸಹ ಸಹಾಯ ಮಾಡುತ್ತದೆ. ನೀವು ಸ್ವಲ್ಪ ಸೊಂಪು ಕಾಳು ತೆಗೆದುಕೊಂಡು ಹುರಿದಿಟ್ಟುಕೊಳ್ಳಿ. ರಾತ್ರಿ ಒಂದು ಚಮಚ ಹುರಿದ ಸೊಂಪು ಕಾಳನ್ನು ಬೆಚ್ಚಗಿನ ನೀರಿನ ಜೊತೆ ಸೇರಿಸಿ ಕುಡಿಯಿರಿ. ಹೀಗೆ ಮಾಡುವುದರಿಂದಲೂ ಮಲಬದ್ಧತೆ ಬೇಗ ನಿವಾರಣೆಯಾಗುತ್ತದೆ.
ಅಂಜೂರ ಕೂಡ ಪ್ರಯೋಜನಕಾರಿಅಂಜೂರದ ಹಣ್ಣುಗಳ ಪ್ರಯೋಜನಗಳ ಬಗ್ಗೆ ನೀವು ಕೇಳಿರಬೇಕು. ಇದು ನಿಮ್ಮ ಜೀರ್ಣ ಶಕ್ತಿಯನ್ನು ಬಲಪಡಿಸುವ ಫೈಬರ್ ಅನ್ನು ಹೊಂದಿರುತ್ತದೆ. ಆದ್ದರಿಂದ ಬಿಸಿ ನೀರಿನಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ.

Advertisement

 

Advertisement

ಒಣ ದ್ರಾಕ್ಷಿಯೂ ಸಹಕಾರಿ
ಒಣ ದ್ರಾಕ್ಷಿ ಸಹ ಮಲಬದ್ಧತೆಯ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ. ಸಂಜೆ ಐದು ಒಣ ದ್ರಾಕ್ಷಿಯನ್ನು ತೊಳೆದು ಒಂದು ಲೋಟ ಹಾಲಿನಲ್ಲಿ ಕುದಿಸಿ. ರಾತ್ರಿ ವೇಳೆ ಒಣ ದ್ರಾಕ್ಷಿಯನ್ನು ತಿಂದು, ನಂತರ ಬೆಚ್ಚಗಿನ ಹಾಲು ಕುಡಿಯಿರಿ.
ಟೊಮೆಟೊ ಸಲಾಡ್ಮಲಬದ್ಧತೆ ಸಮಸ್ಯೆ ಇರುವವರು ಟೊಮೆಟೊ ಸಲಾಡ್ ಸೇವಿಸಬೇಕು. ಮಲಬದ್ಧತೆ ಸಮಸ್ಯೆಗೆ ಟೊಮೆಟೊ ತುಂಬಾ ಪ್ರಯೋಜನಕಾರಿಯಾಗಿದೆ. ಟೊಮೆಟೊದೊಂದಿಗೆ ಉಪ್ಪನ್ನು ಬೆರೆಸಿ ಸೇವಿಸುವುದರಿಂದ ಹೊಟ್ಟೆ ಸ್ವಚ್ಛವಾಗಿರುತ್ತದೆ.

Advertisement
Share this on...